ರೂಪಾ ಕಾಂಬಳೆಗೆ “ವೀರರಾಣಿ ಕಿತ್ತೂರ್ ಚೆನ್ನಮ್ಮ” ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ
ಅಥಣಿ:ಅ.3: ಭರವಸೆ ಬೆಳಕು ಫೌಂಡೇಶನ್ ಅಧ್ಯಕ್ಷ ರೂಪಾ ಕಾಂಬಳೆ ಇವರಿಗೆ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಉತ್ತಮ ಸೇವೆಯನ್ನು ಗುರುತಿಸಿ ಬೆಳಗಾವಿಯ ಅನ್ನಪೂರ್ಣೇಶ್ವರಿ ಹೂಮ್ಯಾನಿಟಿ ಫೌಂಡೇಶನ್ ರವರು “ವೀರರಾಣಿ ಕಿತ್ತೂರ್ ಚೆನ್ನಮ್ಮ” ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದೆ
ನಾಡು ನುಡಿ ಸಾಹಿತ್ಯ, ಸಂಸ್ಕøತಿ ಕಲೆ, ಶಿಕ್ಷಣ, ವೈದ್ಯಕೀಯ, ಸರಕಾರಿ ಸೇವೆ, ರಾಜಕೀಯ, ಸಾಮಾಜಿಕ ಅರಕ್ಷಕ, ಕಾನೂನು, ಸಂಘಟನೆ ಕೊರೊನಾ ಜಾಗೃತಿ ಸೇವೆ, ಸೈನಿಕ ಮಾಧ್ಯಮ ಹಾಗೂ ಸಮಾಜದ ಸರ್ವೋತೋಮುಖ ಅಭಿವೃದ್ಧಿಗಾಗಿ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥದಿಂದ ಈ ನಾಡಿಗಾಗಿ ತಾವು ಸಲ್ಲಿಸಿದ ಅನುಮಪ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ದಿ 29 ರಂದು ಬೆಳಗಾವಿನಲ್ಲಿ ನಡೆದ ರಾಜ್ಯಮಟ್ಟದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಉತ್ಸವ-2024 ಈ ಸಮಾರಂಭದಲ್ಲಿ ತಮಗೆ ಪೂಜ್ಯರ ಹಾಗೂ ಗಣ್ಯರ ಸಮ್ಮುಖದಲ್ಲಿ ಪೆÇ್ರೀತ್ಸಾಹದ ರೂಪದಲ್ಲಿ ಈ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗಿದೆ ಎಂದು ಪ್ರಶಸ್ತಿ ಪತ್ರದಲ್ಲಿ ತಿಳಿಸಿದ್ದಾರೆ.