ವಿಜಯಪುರದಲ್ಲಿ ಗಣಪತಿ ಮೂರ್ತಿ ಮೇಲೆ ಕಿಡಿಗೇಡಿಗಳಿಂದ ಕಲ್ಲು ತೂರಾಟ: ಪರಿಸ್ಥಿತಿ ಉದ್ವಿಗ್ನ
ವಿಜಯಪುರ,ಅ.3:ನಗರದ ಗಣಪತಿ ವೃತ್ತದಲ್ಲಿನ ಗಣಪತಿ ಮೂರ್ತಿಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಗಾಜುಗಳಿಗೆ ಜಖಂ ಮಾಡಿದ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ.
ಗಣಪತಿ ಚೌಕ್ ನಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಗಣಪತಿ ಮೂರ್ತಿ ಸುತ್ತಲೂ ಅಳವಡಿಸಿದ್ದ ಎರಡು ಗಾಜುಗಳು ಜಖಂಗೊಂಡು ಪುಡಿ ಪುಡಿಯಾಗಿವೆ.
ಗಣಪತಿ ವೃತ್ತದಲ್ಲಿ ಚತುರ್ಮುಖ ಗಣಪನ ಮೂರ್ತಿ ಪ್ರತಿಪ್ಠಾಪನೆ ಮಾಡಿತ್ತು. ಈ ಮೂರ್ತಿ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ.
ಸುದ್ದಿ ತಿಳಿಯುತ್ತಲೇ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಜನರು ಅಧಿಕ ಸಂಖ್ಯೆಯಲ್ಲಿ ಘಟನಾ ಸ್ಥಳದಲ್ಲಿ ಜಮಾಯಿಸಿದ್ದಾರೆ. ಸದ್ಯಕ್ಕೆ ಸ್ಥಳದಲ್ಲಿ ಬಿಗುವಿನ ವಾತಾವರಣ ಇದೆ.
ಸ್ಥಳಕ್ಕೆ ಗಾಂಧಿಚೌಕ್ ಪೆÇಲೀಸರು ದೌಡಾಯಿಸಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಕೋಮು ಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನವನ್ನು ಕಿಡಿಗೇಡಿಗಳು ಮಾಡಿರುವ ಶಂಕೆಯನ್ನು ವ್ಯಕ್ತ ಪಡಿಸಲಾಗಿದೆ.
ಕಿಡಿಗೇಡಿಗಳ ಪತ್ತೆಗಾಗಿ ಪೆÇಲೀಸರು ತೀವ್ರ ಶೋಧ ಕಾರ್ಯಾಚರಣೆಗೆ ಮುಂದಾಗಿದ್ದಾರೆ.