ಬಸ್ ಅಪಘಾತ ಸಾವು – 10 ಲಕ್ಷ ರೂ ಪರಿಹಾರ
ಕೋಲಾರ,ಸೆ,೪- ಮಾಲೂರು ಘಟಕಕ್ಕೆ ಸೇರಿದ ವಾಹನ ಸಂಖ್ಯೆ ಕೆಎ-೦೭-ಎಫ್-೧೪೪೧ ವಾಹನವು ಏಪ್ರಿಲ್ ೦೪, ೨೦೨೪ ರಂದು ಮಾಲೂರು-ದೊಡ್ಡಮಲೆ ಮಾರ್ಗವಾಗಿ ಚಾಕನಹಳ್ಳಿಯಿಂದ ಸುಮಾರು ಅರ್ಧ ಕಿ.ಮೀ ಮುಂದೆ ಮೋರಿಯ ಬಳಿ ಚಲಿಸುವಾಗ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಗೋವಿಂದಮ್ಮ ( ೯೪ವರ್ಷ) ಎಂಬುವರು ಬಸ್ಸಿನ ಹಿಂಭಾಗ ಬಾಗಿಲಿನ ಮೂಲಕ ಕೆಳಗೆ ಇಳಿಯುವಾಗ ಆಯಾತಪ್ಪಿ ರಸ್ತೆಯ ಮೇಲೆ ಬಿದ್ದ ಪರಿಣಾಮ ಹಣೆ, ಬಲಗೈ ಹಾಗೂ ತಲೆಗೆ ಪೆಟ್ಟಾಗಿ ರಕ್ತಸಿಕ್ತಗಾಯಗಳಾಗಿ ಏಪ್ರಿಲ್ ೦೮ ರಂದು ಆರ್.ಎಲ್ ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಮೃತರ ವಾರಸುದಾರರ, ಮಗ ಸುಬ್ರಮಣಿ ಯಂ.ಆರ್. ಕೋಂ. ಲೇಟ್ ರಂಗಸ್ವಾಮಿ, ಶಾಂತಿಪುರ ಮುಖ್ಯ ರಸ್ತೆ, ಪೂಜಾರಹಳ್ಳಿ, ದೊಡ್ಡಕಂಬಲಿಯಲ್ಲಿ ಎಂಬುವರಿಗೆ ಕ.ರಾ.ರ.ಸಾ.ನಿಗಮದ ಅಪಘಾತ ಪರಿಹಾರ ನಿಧಿಯಿಂದ ರೂ.೧೦ ಲಕ್ಷರೂ ಗಳ ಮೊತ್ತದ ಪರಿಹಾರ ಧನವನ್ನು ಕೋಲಾರ ವಿಭಾಗದ ಅಧಿಕಾರಿಗಳು ವಿತರಿಸಿದ್ದಾರೆ.