ವಿದ್ಯಾರ್ಥಿಯ ಬಾಳಿನಲ್ಲಿ ಗುರಿ ಎಂಬುದಿರಬೇಕು:ಗAಗನಗೌಡರ
ತಾಳಿಕೋಟೆ:ಸೆ.೪: ಸತತವಾಗಿ ಅಧ್ಯಯನದಲ್ಲಿ ತೊಡಗಿಕೊಂಡಾಗ ಮಾತ್ರ ನಾವು ಇಟ್ಟ ಗುರಿಯನ್ನು ತಲುಪಲು ಸಾಧ್ಯವೆಂದು ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ ಎ.ಎ. ಗಂಗನಗೌಡರ ಹೇಳಿದರು.
ತಾಲೂಕಿನ ಮಿಣಜಗಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಎಸ್.ಕೆ..ಬಿ.ಎಡ್ ಪ್ರಶಿಕ್ಷಣಾರ್ಥಿಗಳ ರೂಡಿ ಪಾಠ ಮುಕ್ತಾಯ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡುತ್ತಿದ್ದ ಅವರು ಗುರಿ ಎಂಬುದು ನಮ್ಮ ಭವಿಷ್ಯತ್ತನ್ನು ಬದಲಾಯಿಸುತ್ತದೆ .ಮತ್ತು ಸೋಲು ಗೆಲುವನ್ನು ಪ್ರೀತಿಸುವವನು ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾನೆ ಸಮಾಜದಲ್ಲಿ ವ್ಯಕ್ತಿ ಗುರುತಿಸಿಕೊಳ್ಳಬೇಕೆಂದರೆ ಶಿಕ್ಷಣವೆಂಬ ಅಮೂಲ್ಯವಾದ ರತ್ನ ಪ್ರತಿಯೊಬ್ಬರಲ್ಲಿ ಇರಬೇಕಾಗುತ್ತದೆ ಶಿಕ್ಷಣವಿಲ್ಲದಿದ್ದರೆ ಸಮಾಜದಲ್ಲಿ ಬೆಲೆ ಎಂಬುದು ಸಿಗುವದಿಲ್ಲಾ ಅಂತಹ ಶಿಕ್ಷಣವನ್ನು ನೀಡಲು ತರಬೇತಿ ಪಡೆದ ಪ್ರಶಿಕ್ಷಣಾರ್ಥಿಗಳ ಭವಿಷ್ಯ ಉಜ್ವಲವಾಗಲೆಂದು ಆಶಿಸಿದರು.
ಇನ್ನೋರ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಿಣಜಗಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಯರಾದ ಬಿ.ಎಚ್. ತಿಳಗೂಳ ಅವರು ಮಾತನಾಡಿ ಸಮಾಜದಲ್ಲಿ ಇಂದು ಬೆಲೆ ಸಿಗುವ ಏಕೈಕ ವ್ಯಕ್ತಿ ಎಂದರೆ ಅದು ಶಿಕ್ಷಕ ನಮ್ಮ ಓದಿಗೆ ಶತ್ರುಗಳು ಸಹ ಹೇದರುವಂತಾಗಬೇಕು, ಇಂದು ಪ್ರತಿಯೊಬ್ಬ ಮನುಷ್ಯನಲ್ಲೂ ಬದುಕುವ ಕೊಸ್ಕರ ಸ್ಪರ್ಧೆಯಿದೆ ಅಂಕಗಳ ಆಧಾರದ ಮೇಲೆ ಮನುಷ್ಯನನ್ನು ಅಳೆಯಬಾರದು ಜ್ಞಾನದ ಆಧಾರದ ಮೇಲೆ ಮನುಷ್ಯನು ಬದುಕಿದ್ದೇ ಆದರೆ ಅವನ ಬದುಕು ಸುಂದರಗೊಳ್ಳಲಿದೆ ಎಂದ ಅವರು ವ್ಯಾಪಾರ ಕಾರಣಕ್ಕಾಗಿ ಶಿಕ್ಷಣವನ್ನು ನೀಡಬಾರದು ಮಗುವಿನಲ್ಲಿ ಮಾನವೀಯ ಮೌಲ್ಯ ನೈತಿಕ ಗುಣ ಬೆಳೆಸಿದಾಗ ಸಾಮರಸ್ಯದ ಬದುಕು ಸುಂದರಗೊಳತ್ತದೆ ಮತ್ತು ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆ ಮೂಡುತ್ತದೆ ಆ ದಿಶೆಯಲ್ಲಿ ನಿಮ್ಮ ಚಿಂತನೆಗಳು ಇರಲಿ ಎಂದು ಹೇಳಿದರು.
ಪ್ರಶಿಕ್ಷಣಾರ್ಥಿಗಳಾದ ವೀರೇಶ ಹುನುಗುಂದ, ತಯ್ಯಾಬಾ ಮೋಮಿನ, ಭಾರತಿ ಗೌಡರ, ದೇವರಾಜ ಮಾದರ, ಅವರು ಅನಿಸಿಕೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಸುರೇಶ ನಾಯಕ, ಅನುಸೂಬಾಯಿ ನಾಯಕ, ರುಗುನಾಥ ಕುಂಬಾರ, ರಾವುತ ಪೂಜಾರಿ, ಬಸಮ್ಮ ಚಿಕ್ಕರಡ್ಡಿ, ಹಾಗೂ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಪ್ರಶಿಕ್ಷಣಾರ್ಥಿ ಅಮೀರಬಿ ಜಮದಾರ ನಿರೂಪಿಸಿದರು. ಪ್ರಶಿಕ್ಷಣಾರ್ಥಿ ಸಂಗೀತಾ ಯರಗಲ್ ವಂದಿಸಿದರು. ಪ್ರಶಿಕ್ಷಣಾರ್ಥಿ ಶ್ರೀಮತಿ ಕಾಶಿಬಾಯಿ ಚೋಪಡೆ ಸ್ವಾಗತಿಸಿದರು.