ನಳಂದ ಶಾಲೆಯಲ್ಲಿ ಕೃಷ್ಣಜನ್ಮಾಷ್ಠಮಿ
ಕೋಲಾರ,ಸೆ,೪- ನಗರದ ಪಾಲಸಂದ್ರ ಲೇಔಟ್‌ನಲ್ಲಿರುವ ನಳಂದ ವಿದ್ಯಾನಿಕೇತನ ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಚಿನ್ಮಯ ಮಿಷನ್ ವತಿಯಿಂದ ಶ್ಯಾಮಲಾ ಮತ್ತು ಸುಖನ್ಯ ಅವರು ಆಗಮಿಸಿ ಮಕ್ಕಳಿಗೆ ಭಗವದ್ಗೀತೆಯಲ್ಲಿನ ಕೀರ್ತನೆಗಳನ್ನು ಹಾಡುವ ಮೂಲಕ ಶ್ಲೋಕಗಳನ್ನು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಾಲಾ ಕಾರ್ಯದರ್ಶಿ ಟಿ.ಆರ್.ಜಯರಾಮ, ಖಜಾಂಚಿ ಎನ್.ಮಮತ, ಶಾಲಾ ಮುಖ್ಯೋಪಾಧ್ಯಾಯ ಡಾ.ಹೆಚ್.ಗೌರಿನಾಯ್ಡು ಇದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.