ಕಸ ವಿಂಗಡಣೆ ಮಾಡಿ ಆದಾಯವಾಗಿ ಪರಿವರ್ತಿಸಿ
ಕೋಲಾರ,ಸೆ,೪- ನಗರದಲ್ಲಿ ಮಾತ್ರವಲ್ಲಿ ಇಡೀ ವಿಶ್ವದಲ್ಲಿಯೇ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿದೆ. ಕಸ ವಿಲೇವಾರಿ ಮಾಡುವುದು ದೊಡ್ಡ ವಿಷಯವಲ್ಲ ಕಸ ವಿಂಗಡಣೆ ಮಾಡಿ ಸದ್ಬಳಕೆ ಮಾಡಿ ಕೊಂಡು ಅದಾಯವಾಗಿ ಪರಿವರ್ತಿಸುವುದು ಮುಖ್ಯವಾಗಿದೆ. ಈ ಸಂಬಂಧವಾಗಿ ನೊತನವಾಗಿ ಆಯ್ಕೆಯಾದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಗಮನ ಹರಿಸ ಬೇಕಾಗಿದೆ. ನನ್ನ ಸಹೋದರಿಯರಾದ ನೂತನ ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಅಭಿನಂದನೆಗಳೊಂದಿಗೆ ಅಭಿವೃದ್ದಿ ವಿಚಾರವಾಗಿ ನನ್ನ ಸಂಪೂರ್ಣ ಸಹಕಾರ ಮತ್ತು ಬೆಂಬಲವಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಿ.ಎಂ.ಮುಬಾರಕ್ ಘೋಷಿಸಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಾ ನಗರದಲ್ಲಿ ಕಸ ವಿಲೇವಾರಿ ಮಾತ್ರವಲ್ಲ ಒಳಚರಂಡಿ, ರಸ್ತೆ, ಬೀದಿ ದೀಪಗಳು ಸೇರಿದಂತೆ ಮೂಲಭೂತ ಸಮಸ್ಯೆಗಳು ಸಾಕಷ್ಟಿದೆ. ಈ ಎಲ್ಲಾ ಸಮಸ್ಯೆಗಳನ್ನು ನಿಭಾಯಿಸ ಬೇಕಾಗಿರುವುದು ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಜವಾಬ್ದಾರಿ ಮಾತ್ರವಲ್ಲ ಪ್ರತಿಯೊಬ್ಬ ಸದಸ್ಯರು, ಅದಿಕಾರಿಗಳ ಜವಾಬ್ದಾರಿಯಾಗಿದೆ ಎಂದರು.
ಈ ಹಿಂದಿನ ಅಧ್ಯಕ್ಷರಾದ ಶ್ವೇತ ಅಂಬರೀಷ್ ಅವರ ಆಡಳಿತಾವಧಿಯಲ್ಲಿ ಭೂಮಿ ಮಂಜೂರು ಮಾಡಲಾಗಿತ್ತು ಕೋಟ್ಯಾಂತರ ರೂಪಾಯಿ ಬಿಡುಗಡೆ ಅಗಿದ್ದು ಹೊರತು ಪಡೆಸಿದರೆ ನಂತರದಲ್ಲಿ ಒಂದು ಇಟ್ಟಿಗೆ ಸಹ ಪಕ್ಕಕ್ಕೆ ಸರಿಯಲಿಲ್ಲ. ಕಸ ವಿಲೇವಾರಿ ಮಾಡುವುದು ದೊಡ್ಡ ವಿಷಯವಲ್ಲ. ಕಸ ವಿಂಗಡನೆ ಮತ್ತು ಗೊಬ್ಬರವಾಗಿ ಪರಿವರ್ತಿಸುವ ಕೆಲಸವು ಅಗುತ್ತಿಲ್ಲ. ಇದಕ್ಕೆ ಸಂಬಂಧ ಪಟ್ಟ ಇಂಜನಿಯರ್ ಮತ್ತು ಸಂಪನ್ಮೊಲ ಅಧಿಕಾರಿಗಳನ್ನು ಕರೆಸಿ ಕಸ ವಿಂಗಡನೆ ಮತ್ತು ಗೊಬ್ಬರ ಉತ್ಪಾದನೆ ಮಾಡ ಬೇಕು, ಇದರಿಂದ ನಗರಸಭೆಗೂ ಅದಾಯ ಬರಲಿದೆ ಎಂದು ಹೇಳಿದರು,
ಇದರ ಜೂತೆಗೆ ಯು.ಜಿ.ಡಿ ಕಾಮಗಾರಿಗಳಿಗೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿದರೂ ಸಹ ಅವೈಜ್ಞಾನಿಕವಾಗಿ ಇಚ್ಚಾನುಸಾರ ಅಕ್ರಮ ಸಂರ್ಪಕಗಳನ್ನು ಪಡೆದಿರುವುದು ಸಮಸ್ಯೆಗಳು ಉಲ್ಲಣವಾಗಲು ಕಾರಣವಾಗಿದೆ. ಕೋಲಾರಮ್ಮ ಕೆರೆಯ ಅಭಿವೃದ್ದಿಗೆ ಇನ್‌ಫೋಸಿಸ್ಸ್ ಕಂಪನಿಯವರು ಕೋಟ್ಯಾಂತರ ರೂಪಾಯಿ ಸಿ.ಆರ್.ಎಫ್ ಫಂಡ್ ಬಿಡುಗಡೆ ಮಾಡಿದ್ದಾರೆ. ಅದರೆ ಇದಕ್ಕೆ ಸಂಬಂಧ ಪಟ್ಟ ಯೋಜನೆ, ಕಾಮಗಾರಿಗಳ ವಿವರಗಳ ವಿವರಗಳನ್ನು ಇದುವರೆಗೂ ಸಂಬಂಧ ಪಟ್ಟಿರುವ ಅಧಿಕಾರಿಗಳಿಗೆ ಮಾಹಿತಿ ಇಲ್ಲವಾಗಿರುವುದು ಆಶ್ಚರ್ಯಕರವಾಗಿದೆ ಎಂದರು.
ಈ ಬಾರಿ ಮಳೆಯು ನಿರೀಕ್ಷಿತ ಮಟ್ಟದಲ್ಲಿ ಬೀಳದಿರುವುದು ನಮ್ಮ ಪುಣ್ಯ ಇಲ್ಲವಾಗಿದ್ದರೆ ಮಳೆಯು ಬಿದ್ದಿದ್ದರೆ ಕೆರೆಗಳು ತುಂಬಿ ಅಚ್ಚುಕಟ್ಟು ಪ್ರದೇಶಗಳೆಲ್ಲಾ ಇತರೆ ಕಡೆಗಳಲ್ಲಿ ಪ್ರಕೃತಿ ವಿಕೋಪದಿಂದ ಉಂಟಾಗಿರುವ ಅನಾಹುತಗಳಂತೆ ಕೋಲಾರಮ್ಮ ಕರೆ ತುಂಬಿ ಕೋಡಿ ಹರಿದು ಅನಾಹುತಗಳು ಅಗುವ ಸಂಭವ ಇತ್ತು ಅದರೆ ಅದೃಷ್ಟವಷತ್ ಮಳೆ ಬೀಳದ ಕಾರಣ ಯಾವೂದೇ ವಿಕೋಪ ಉಂಟಾಗಲಿಲ್ಲ ಎಂದು ಹೇಳಿದರು,
ಕೋಲಾರಮ್ಮ ಕೆರೆ ಅಭಿವೃದ್ದಿಗೆ ಈಗಾಗಲೇ ಎಷ್ಟು ವೆಚ್ಚ ಮಾಡಲಾಗಿದೆ, ಎಷ್ಟು ಅಭಿವೃದ್ದಿ ಪಡೆಸಿದೆ, ಅಭಿವೃದ್ದಿ ಯೋಜನೆ ಪೂರ್ಣಗೊಂಡಿದೆಯೇ ಅಥವಾ ಕಾಮಗಾರಿಗಳು ಎಷ್ಟು ಬಾಕಿ ಇದೆ, ಇದರ ಗುತ್ತಿಗೆದಾರರು ಯಾರು ಎಂಬ ಯಾವೂದೇ ವಿವರಗಳನ್ನು ಸಂಬಂಧ ಪಟ್ಟ ಅಧಿಕಾರಿಗಳು ಬಹಿರಂಗ ಪಡೆಸುತ್ತಿಲ್ಲ ಎಲ್ಲವನ್ನು ರಹಸ್ಯವಾಗಿ ಇಡುವಂತದ್ದು ಏನಿದೆ ಎಂಬುವುದು ತಿಳಿಯ ಬೇಕು. ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತವು ಪಾರದರ್ಶಕವಾಗಿದ್ದರೆ ಮಾತ್ರ ಗೌರವ ಎಂದು ಅಭಿಪ್ರಾಯ ಪಟ್ಟರು.