ತನಿಖೆಗೆ ತಡೆಯಾಜ್ಞೆ ತಂದಿಲ್ಲ ವಿಚಾರಣೆ ಎದುರಿಸುವೆ: ಮುಬಾರಕ್
ಕೋಲಾರ,ಶೆ,೪- ನನ್ನ ವಿರುದ್ದ ೪೨೦ ಪ್ರಕರಣ ದಾಖಲಾಗಿ ೧೩ ತಿಂಗಳಾಗಿದೆ ನಿಜ ಇದರ ತನಿಖೆ ವಿಚಾರಣೆಗೆ ನಾನೇನು ತಡೆಯಾಜ್ಞೆ ತಂದಿಲ್ಲ, ಅದನ್ನು ಧೆರ್ಯವಾಗಿ ಎದುರಿಸುವಂತ ತಾಕತ್ತು ನನಗೆ ಇದೆ.
ಶಾಸಕ ಕೊತ್ತೊರು ಮಂಜುನಾಥ್ ಮೇಲೆಯೂ ೧೦೫/೨೦೧೮ ಪ್ರಕರಣ ದಾಖಲಾಗಿದೆ. ಇದು ೪೨೦ ಗಿಂತ ಹೆಚ್ಚಿನ ಪರಿಣಾಮಕಾರಿ ಅರೋಪವಾಗಿದೆ ಈ ಆರೋಪ ಸುಳ್ಳಾಗಿದ್ದರೆ ಇದನ್ನು ಧೆರ್ಯವಾಗಿ ಎದುರಿಸಬೇಕಾಗಿತ್ತು, ಅದರೆ ಶಾಸಕರು ಇದಕ್ಕೆ ತಡೆಯಾಜ್ಞೆ ತಂದಿರುವುದು ಏತಕ್ಕೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಿ.ಎಂ.ಮುಬಾರಕ್ ಪ್ರಶ್ನಿಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ನನ್ನದು ವೈಯುಕ್ತಿಕ ಸಮಸ್ಯೆಯಾಗಿದ್ದು ಯಾರಿಗೂ ನೀಡಿದ್ದ ಚೆಕ್ ಬೋನ್ಸ್ ಪ್ರಕರಣವಾಗಿದೆ ಅದರೆ ಶಾಸಕರು ಶಾಸಕರು ಚುನಾವಣೆಯ ಆಯೋಗಕ್ಕೆ ಮೀಸಲಾತಿಯ ನಕಲಿ ಪ್ರಮಾಣ ಪತ್ರ ಸಲ್ಲಿಸಿರುವುದು ಇಡೀ ಸಮುದಾಯಕ್ಕೆ ಮಾಡಿದ ವಂಚನೆಯಾಗಿದೆ. ಸರ್ಕಾರಕ್ಕೂ ವಂಚನೆಯಾಗಿದೆ ಸಂವಿಧಾನಕ್ಕೆ ದ್ರೋಹ ಬಗೆದು ಕಾನೂನಿಗೆ ಚಳ್ಳೆ ಹಣ್ಣು ತಿನ್ನಿಸಿದ್ದಾರೆ ಎಂದು ಕಿಡಿಕಾರಿದರು.
ಹೌದು ನಾನು ೪೨೦ ಪ್ರಕರಣ ಮಾಡಿದ್ದೇನೆ ನಾನು ಕಿತ್ತೋದೋನೂ ಅದರೆ ಅವರು ೨ ಬಾರಿ ಶಾಸಕರಾಗಿ ಲಕ್ಷಾಂತರ ಜನರಿಗೆ ವಂಚಿಸಿದ್ದಾರೆ. ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ತಾಕತ್ತು ಇದ್ದರೆ ಅವರು ತಂದಿರುವಂತ ತಡೆಯಾಜ್ಞೆಯನ್ನು ವಾಪಸ್ ಪಡೆದು ಆರೋಪದ ವಿರುದ್ದ ತನಿಖೆ ಎದುರಿಸಲಿ ಎಂದು ಸವಾಲ್ ಹಾಕಿದರು.
ಭಾರತ ದೇಶದ ಸರ್ವೋಚ್ಚ ನ್ಯಾಯಾಲಯವು ಶಾಸಕರ ಬೋಗಸ್ ಪ್ರಮಾಣ ಪತ್ರದ ವಿರುದ್ದ ೪೨೦ ಎಂದು ನಿರ್ಣಯಿಸಿದೆ. ಇವರ ವಿರುದ್ದ ಜವಾಬ್ದಾರಿಯುತ ಸರ್ಕಾರಿ ಅಧಿಕಾರಿಗಳು ದೂರು ನೀಡಿದ್ದಾರೆ. ಯಾರೋ ದಾರಿಯಲ್ಲಿ ಹೋಗುವವರು ಅಧಾರ ರಹಿತವಾದ ದೂರು ನೀಡಿಲ್ಲ. ಅದಾರ ಸಹಿತ ದೂರನ್ನು ನೀಡಿದ್ದಾರೆ ಎಂದು ತಿಳಿಸಿದರು.
ನಾನು ಶಾಸಕರನ್ನು ಆರ್.ಎಸ್.ಎಸ್ ಏಜೆಂಟ್ ಎಂದಿರುವುದು ನಿಜ ಅದನ್ನು ನಿಮ್ಮ ಮುಂದೆಯೇ ಒಪ್ಪಿ ಕೊಂಡಿದ್ದಾರೆ. ನನ್ನ ವಿರುದ್ದ ತಾಲಿಬಾನ್ ಎಂದು ಟೀಕಿಸಿದ್ದಾರೆ ಇದರ ವಿರುದ್ದ ನಾನು ನ್ಯಾಯಾಲಯದಲ್ಲಿ ೧ ರೂಗಳ ಮಾನನಷ್ಟ ಮೊಕದ್ದಮ್ಮೆ ದಾಖಲು ಮಾಡಿ ವಕೀಲರಿಂದ ನೋಟಿಸ್ ಜಾರಿ ಮಾಡಿಸಿದ್ದೇನೆ ಎಂದ ಅವರು ಈ ಹಿಂದಿನ ಚುನಾವಣೆಗಳಲ್ಲಿ ಬಿಜೆಪಿ ಪರವಾದ ಅಭ್ಯರ್ಥಿಗಳಿಗೆ ಪ್ರಚಾರ ಮಾಡಿದ್ದರು ಅದ್ದರಿಂದ ನಾನು ಅವರನ್ನು ಬಿಜೆಪಿ ಏಜೆಂಟ್ ಎಂದು ದೊರಿದ್ದೇನೆ ಎಂದರು,
ನಾನು ವಿದ್ಯಾರ್ಥಿ ದೆಸೆಯಿಂದಲೂ ಸ್ವಾಮಿ ವಿವೇಕನಂದ, ಮದರ್ ತೇರೇಸಾ ಇಂಥಹ ಮಹನೀಯರ ಆದರ್ಶಗಳನ್ನು ಮುಂದಿಟ್ಟು ಸಂಘನೆ ಮತ್ತು ಹೋರಾಟ ಮಾಡಿ ಕೊಂಡು ಬೆಳೆದವನು. ನಾನು ಕನಿಷ್ಟ ನೊರು ಮಂದಿ ಆಲ್ಪಸಂಖ್ಯಾತರು ಇರದಂತ ವಾರ್ಡ್‌ನಿಂದ ನಗರಸಭೆಗೆ ಸ್ವರ್ಧಿಸಿ ಜಾತ್ಯಾತೀತವಾಗಿ ಬಹುಮತಗಳಿಂದ ಆಯ್ಕೆಯಾದ ನನ್ನನ್ನು ತಾಲಿಬಾನ್ ಎಂದಿರುವುದು ಹಾಸ್ಯಸ್ಪದವಾಗಿದೆ, ರಾಜ್ಯದ ಆಡಳಿತರೊಢ ಸರ್ಕಾರದ ಭಾಗವಾಗಿರುವ ಅವರ ಮಾತುಗಳಿಗೆ ಮೌಲ್ಯ ಇರಬೇಕು. ಬಾಲಿಷಾ ಹೇಳಿಕೆಗಳನ್ನು ನೀಡಿ ಅಪಹಾಸ್ಯಕ್ಕೆ ಒಳಗಾಗ ಬಾರದು ಎಂದು ಕಿವಿಮಾತು ತಿಳಿಸಿದರು.
ಕೊತ್ತೂರು ಮಂಜುನಾಥ್ ಶೂನ್ಯ ಏನಿದ್ದರೂ ಆಲ್ಪಸಂಖ್ಯಾತರ ಓಟಿನಿಂದ ನಿಮ್ಮ ತಾಕತ್ತು ತೋರಿಸುತ್ತಿದ್ದೀರಾ ಆಲ್ಪಸಂಖ್ಯಾತರು ಇಲ್ಲ ಅಂದರೆ ನೀವಿಲ್ಲ. ವಿಧಾನ ಪರಿಷತ್ ಸದಸ್ಯ ನಸ್ಸೀರ್ ಆಹಮದ್ ಅವರ ಪಕ್ಕದಲ್ಲಿ ಇರಲಿಲ್ಲ ಅಂತೆ ಅವರ ತಾಕತ್ತು ಏನಿಲ್ಲ. ಇಷ್ಟಕ್ಕೂ ಆಲ್ಪಸಂಖ್ಯಾತರಿಗೆ ನಿಮ್ಮ ಕೊಡುಗೆ ಏನು ? ವಿಧಾನ ಸಭಾ ಕ್ಷೇತ್ರದ ಯಾವ ಹಳ್ಳಿ, ಯಾವ ಬಡಾವಣೆ ಎಲ್ಲಿದೆ ಎಂಬುವುದು ಅರಿಯದ ಅವರು ನಸ್ಸೀರ್ ಆಹಮದ್ ಅನಿಲ್ ಕುಮಾರ್ ಅವರನ್ನು ಮುಂದಿಟ್ಟು ಕೊಂಡು ತಾಕತ್ತು ಮಾತನಾಡುತ್ತಿದ್ದಾರೆ ಅವರನ್ನು ಪಕ್ಕಕ್ಕೆ ಇಟ್ಟು ತಾಕತ್ತು ತೋರಿಸಲಿ ಆಗಾ ಒಪ್ಪಿ ಕೊಳ್ಳುತ್ತೇನೆಂದು ಸವಾಲ್ ಹಾಕಿದ ಅವರು ಇದು ಏನಿದ್ದರೂ ನಸ್ಸೀರ್ ಆಹಮದ್ ಅವರ ತಾಕತ್ತು ಅಗಿದೆ ಎಂದು ಹೇಳಿದರು,
ನನ್ನನ್ನು ಯಾವ ಪ್ರಕರಣದಲ್ಲೂ ಬಚ್ಚಿಟ್ಟು ರಕ್ಷಣೆ ನೀಡಿ ಊಟ ಹಾಕಿದ್ದೇನೆಂದು ಹೇಳಿರುವುದೆಲ್ಲಾ ಸತ್ಯಕ್ಕೆ ದೂರವಾದ ವಿಷಯಗಳು ಎಂದು ಅವರು ನಾನು ಸುಪ್ರೀಂ ಕೋರ್ಟ್‌ನಲ್ಲಿ ಅಹಜ ಸಾವುಗಳ ಬಗ್ಗೆ ಪರಿಶೀಲನೆ ನಡೆಸಲು ದಾವೆ ಹೂಡುತ್ತೇನೆ ಆಗಾ ಸತ್ಯಂಶಗಳು ಹೊರಗೆ ಬರುತ್ತದೆ ಯಾರು ವಂಚಕರು, ಯಾರು ತಾಲಿಬಾನ್, ಯಾರು ಅನ್ಯಾಯ ಮಾಡಿದ್ದಾರೆ ಎಂಬ ಬಂಡವಾಳ ಬಟಬಯಲಾಗಲಿದೆ ಎಂದು ತಿಳಿಸಿದರು,
ತಾಲಿಬಾನ್ ಮತ್ತು ಕಿತ್ತೋದೋನು ಎಂಬ ಪದ ಬಳಿಸಿರುವುದಕ್ಕೆ ಬಹಿರಂಗ ಕ್ಷೆಮೆಯಾಚಿಸ ಬೇಕು, ನಾನು ಶಾಸಕರ ವಿರುದ್ದ ಪ್ರಕರಣ ದಾಖಲು ಮಾಡಿರುವುದು ದುಡ್ಡಿಗಲ್ಲ, ಹಾಗಾಗಿಯೇ ೧ ರೂ ಮಾನ ನಷ್ಟ ಪರಿಹಾರಕ್ಕೆ ಪ್ರಕರಣ ದಾಖಲು ಮಾಡಿದ್ದೇನೆಂದು ಹೇಳಿದರು,