ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮಧ್ಯ ವಶ: 5 ಪ್ರಕರಣ ದಾಖಲು
ಸಂಜೆವಾಣಿ ವಾರ್ತೆ
ಹನೂರು: ಸೆ.4:- ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ವಿವಿಧ ಸ್ಥಳಗಳ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ, ಅಬಕಾರಿ ಡಿಸಿ ಏಕಕಾಲದಲ್ಲಿ ದಾಳಿ ಏಳು ಜನರನ್ನು ವಶಕ್ಕೆ ಪಡೆದು 5 ಪ್ರಕರಣವನ್ನು ಪ್ರತ್ಯೇಕವಾಗಿ ದಾಖಲು ಮಾಡಲಾಗಿದೆ.
ಚಾಮರಾಜನಗರ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಬಿ.ಟಿ ಕವಿತಾ ಹಾಗೂ ಅಬಕಾರಿ ಡಿ.ಸಿ ನಾಗೇಶ್ ವಿಶೇಷ ಪೆÇಲೀಸ್ ತಂಡ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿದ್ದ ಅಕ್ರಮ ಮಧ್ಯ ಮಾರಾಟ ದಂಧೆ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅಕ್ರಮ ಮಧ್ಯ ಮಾರಾಟ ಅಡ್ಡೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಚಾಮರಾಜನಗರ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳಾಗಿ ಡಾ. ಬಿಟಿ ಕವಿತಾ ಅಧಿಕಾರಿ ವಹಿಸಿಕೊಂಡ ನಂತರ ಜಿಲ್ಲೆಯಲ್ಲಿ ಆಕ್ರಮ ಮದ್ಯ ಮಾರಾಟ, ಇಸ್ಪೀಟ್ ದಂದೆ ಕಡಿವಾಣ ಹಾಕಲು ಏಕಕಾಲದಲ್ಲಿ ದಾಳಿ ನಡೆಸಿ ತಡರಾತ್ರಿ ಶೋಧನೆ ನಡೆಸಿ ಅಕ್ರಮಗಳನ್ನು ಪತ್ತೆ ಹಚ್ಚಿ ಪ್ರಕರಣ ದಾಖಲು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಸಿದ್ದ ದಾರ್ಮಿಕ ಯಾತ್ರಾ ಸ್ಥಳವಾದ ಮಹದೆಶ್ವರ ಬೆಟ್ಟದಲ್ಲಿ ಮಧ್ಯ ಮಾರಾಟವು ಎಗ್ಗಿಲ್ಲದಂತೆ ಸಾಗಿದ್ದು, ಅಭಕಾರಿ ಇಲಾಖೆ ಹಾಗೂ ಸ್ಥಳಿಯ ಪೆÇೀಲೀಸರ ಕಣ್ತಪ್ಪಿಸಿ ಪ್ರತಿನಿತ್ಯ ಲಕ್ಷಾಂತರ ರೂಪಾಯಿಗಳ ವ್ಯವಹಾರವನ್ನು ಅಲ್ಲಲ್ಲಿ ಮಾಡಲಾಗುತಿತ್ತು.
ಮಹದೇಶ್ವರ ಬೆಟ್ಟ ಹಾಗೂ ಸುತ್ತ ಮುತ್ತ ಮಧ್ಯ ಮಾರಾಟ ಮಾಡುವವರು ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತಿದ್ದರೂ ಅಧಿಕಾರಿಗಳು ಗಮನದಲ್ಲಿಟ್ಟುಕೊಂಡ ಜಿಲ್ಲ ಪೆÇೀಲೀಸ್ ವರಿಷ್ಟಾಧಿಕಾರಿಯ ತಂಡ ಭಾನುವಾರ ಹಾಗೂ ಸೋಮವಾರ ಮಹದೇಶ್ವರ ಬೆಟ್ಟದ ವಿವಿಧ ಕಡೆಗಳಲ್ಲಿ ದಾಳಿ ನಡೆಸಿದ್ದಾರೆ.
ದೇವಾಲಯದ ಹಾಸು ಪಾಸಿನಲ್ಲೇ ಸ್ಥಳಿಯರಾದ ಲಕ್ಷ್ಮಿ ಎಂಬುವರ ಮನೆಯಲ್ಲಿ ಸಾಲೂರು ಮಠಕ್ಕೆ ತೆರಳುವ ರಸ್ತೆಯಲ್ಲಿರುವ ಸಿದ್ದಪ್ಪ, ರಾಚಪ್ಪ ಎಂಬುವರು ವಿವಿಧ ಕಂಪನಿಯ ಅಕ್ರಮ ಮಧ್ಯ 13 ಬಾಕ್ಸ್ 20 ಸಾವಿರ ನಗದು ಸೇರಿದಂತೆ ಒಂದು ಲಕ್ಷದ 6 ಸಾವಿರ ಬೆಲೆ ಬಾಳುವ ಮಧ್ಯ ವಶಕ್ಕೆ ಪಡೆಯಲಾಗಿದೆ.
ಪುದೂರು ಗ್ರಾಮದ ಕುಮಾರ್ ಮನೆಯಲ್ಲಿ 1 ಬಾಕ್ಸ್ 30 ಪೌಚ್ ರೂ.3 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಜನತಾ ಕಾಲೋನಿಯ ಚಂದ್ರು ಮತ್ತು ಸಂಗಡಿಗರು ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಮಹೇಶ್, ಬಾಬು ಪೂಜಾರಿ ಅಕ್ರಮ ಮಧ್ಯ ದಾಸ್ತಾನು ಮಾಡಿದ್ದ 2 ಬಾಕ್ಸ್ 20 ಪೌಚ್ ವಶಪಡಿಸಿಕೊಂಡಿದ್ದಾರೆ.
ತಂಬಡಗೇರಿ ಮಹಾದೇವಿ ಮನೆಯಲ್ಲಿ ದಾಸ್ತಾನು ಇಟ್ಟಿದ್ದ ಒಂದು ಬಾಕ್ಸ್ 20 ಪೌಚ್ ಹಾಗೂಪುಟ್ಟಮ್ಮ ಹುಲಿಗೂಡು ಮನೆಯಲ್ಲಿಟ್ಟಿದ್ದ ಒಂದು ಬಾಕ್ಸ್ 20 ಪೌಚ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪಿ ಪುಟ್ಟಮ್ಮ ತಲೆಮರೆಸಿಕೊಂಡಿದ್ದು ಇವರ ಪತ್ತೆಗೆ ಈಗಾಗಲೇ ಕ್ರಮ ವಹಿಸಲಾಗಿದೆ ಎಂದು ತಿಳಿದುಬಂದಿದೆ.
ಮಲೆ ಮಹದೇಶ್ವರ ಬೆಟ್ಟದಲ್ಲಿ ಅಕ್ರಮ ಮಧ್ಯ ಮಾರಾಟ ತಡೆಗಟ್ಟಲು ವಿಶೇಷ ಪ್ರಕರಣವೆಂದು ಗಂಭೀರವಾಗಿ ಪರಿಗಣಿಸಿ ಮಲೆ ಮಹದೇಶ್ವರ ಬೆಟ್ಟದ ಠಾಣಾ ವ್ಯಾಪ್ತಿಯಲ್ಲಿ ಹನೂರು ಇನ್ಸ್ಪೆಕ್ಟರ್ ಶಶಿಕುಮಾರ್, ಪಿಎಸ್‍ಐ ಮಂಜುನಾಥ್ ರಾಮಪುರ ಪಿಎಸ್‍ಐ ಈಶ್ವರ ರವರು ಸೇರಿ ಒಟ್ಟು ಐದು ಪ್ರಕರಣಗಳನ್ನು ಪ್ರತ್ಯೇಕವಾಗಿ ಪ್ರಕರಣ ದಾಖಲು ಮಾಡಲಾಗಿದೆ.
ಪ್ರತ್ಯೇಕ ಪ್ರಕರಣದಲ್ಲಿ ಎಂಟು ಜನರ ಮೇಲೆ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಇನ್ಸ್ಪೆಕ್ಟರ್ ಶಶಿಕುಮಾರ್, ಸಬ್ ಇನ್ಸ್ಪೆಕ್ಟರ್ಗಳಾದ ಮಂಜುನಾಥ್ ಪ್ರಸಾದ್, ಈಶ್ವರ್, ಪೇದೆಗಳಾದ ಸಿಂಗಂ ನಾಗರಾಜು, ಜೈ ಶಂಕರ್, ಅಬಕಾರಿ ಅಧಿಕಾರಿಗಳು ಮತ್ತು ಪೆÇಲೀಸ್ ಸಿಬ್ಬಂದಿಗಳ ಹಾಜರಿದ್ದರು.