ಪಿಕಪ್ – ಸ್ಕೂಟಿ ಮಧ್ಯೆ ಅಪಘಾತ ಸ್ಕೂಟಿ ಸಹ ಸವಾರ ಗಂಭೀರ
ಸುಳ್ಯ:ಪಿಕಪ್ ಮತ್ತು ಸ್ಕೂಟಿ ಮಧ್ಯೆ ಅಪಘಾತ ನಡೆದು ಸ್ಕೂಟಿ ಹಿಂಬದಿ ಸವಾರನ ಕಾಲು ಮುರಿತಗೊಂಡ ಘಟನೆ ಕೊಡಗು ಸಂಪಾಜೆ ಗ್ರಾಮದ ಚೆಡಾವಿನಲ್ಲಿ ಸೋಮವಾರ ನಡೆದಿದೆ.
ಕೊಯನಾಡಿನ ಮಾಧವ ಅವರು ತಮ್ಮ ಸ್ಕೂಟಿಯಲ್ಲಿ ಶ್ಯಾಮ್ ಅವರ ಜೊತೆ ಕೊಯನಾಡುಯಿಂದ ಸಂಪಾಜೆ ಕಡೆಗೆ ತೆರಳುತ್ತಿದ್ದ ವೇಳೆ ಸಂಪಾಜೆಯ ಚೆಡಾವಿನಲ್ಲಿ ಸುಳ್ಯ ಭಾಗದಿಂದ ಬರುತ್ತಿದ್ದ ಮೈಸೂರು ಮೂಲದ ಪಿಕಪ್ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟಿ ಹಿಂಬದಿ ಸವಾರ ಕೊಡಗು ಸಂಪಾಜೆ ಗ್ರಾ.ಪಂ. ಮಾಜಿ ಸದಸ್ಯೆ ರಾಜೇಶ್ವರಿ ಅವರ ಪತಿ ಶ್ಯಾಮ್ ಅವರ ಕಾಲು ಮುರಿತಗೊಂಡಿದೆ. ಸ್ಕೂಟಿ ಚಲಾಯಿಸುತ್ತಿದ್ದ ಮಾಧವ ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಗಾಯಾಳುಗಳನ್ನು ಸ್ಥಳೀಯರು ಸೇರಿ ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಸುಳ್ಯದ ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.