ವಿದ್ಯಾರ್ಥಿಗಳ ಮನಸ್ಸಿನ ಏಕಾಗ್ರತೆಗಾಗಿ ಮನಸ್ಸಿನ ವ್ಯಾಯಾಮ ಅವಶ್ಯಕತೆ: ಬಿ.ಕೆ ಆರಾಧ್ಯ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಸೆ.04:- ವಿದ್ಯಾರ್ಥಿಗಳ ಮನಸ್ಸಿನ ಏಕಾಗ್ರತೆಗಾಗಿ ಮನಸ್ಸಿನ ವ್ಯಾಯಾಮ ಅವಶ್ಯಕತೆ ಎಂದು ಓಂ ಶಾಂತಿ ನ್ಯೂಸ್ ಸರ್ವಿಸ್‍ನ ಬಿಕೆ ಆರಾಧ್ಯ ತಿಳಿಸಿದರು.
ಅವರು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸ್ಪಂದನಕೇಂದ್ರ, ಹಾಗೂ ತಮ್ಮಡಹಳ್ಳಿ ಸರ್ಕಾರಿ ಪ್ರೌಢಶಾಲೆ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಜೀವನದ ಮೌಲ್ಯಗಳು ಮತ್ತು ಯುವ ಸ್ಪಂದನ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಮನಸ್ಸಿನ ಏಕಾಗ್ರತೆಗಾಗಿ ಮನಸ್ಸಿನ ವ್ಯಾಯಾಮ ಅವಶ್ಯಕತೆ ವಿದ್ಯಾರ್ಥಿಗಳಿಗೆ ದೊಡ್ಡ ಸಮಸ್ಯೆ ಎಂದರೆ ಏಕಾಗ್ರತೆ. ಏಕಾಗ್ರತೆ ಎಂದರೆ ಒಂದೇ ಸಮಯದಲ್ಲಿ ಒಂದೇ ವಸ್ತು ವಿಷಯದ ಬಗ್ಗೆ ಅಧ್ಯಯನ ಮಾಡುವುದೇ ಏಕಾಗ್ರತೆಯಾಗಿದೆ. ಅದಕ್ಕಾಗಿ ಮನೋಬಲವನ್ನು ಹೆಚ್ಚಿಸಿಕೊಳ್ಳುವುದು ಅμÉ್ಟೀ ಅವಶ್ಯಕವಾಗಿದೆ. ಮನೋಬಲವನ್ನು ಹೆಚ್ಚಿಸಿಕೊಳ್ಳಲು ಮನಸ್ಸಿನ ವ್ಯಾಯಾಮ ಮಾಡುವುದುಅμÉ್ಟೀ ಅವಶ್ಯಕತೆಯಾಗಿದೆ. ಸಕಾರಾತ್ಮಕ ಚಿಂತನೆ ಮಾಡುವುದೇ ಮನಸ್ಸಿನ ವ್ಯಾಯಾಮ ಮಾಡುವುದಾಗಿದೆ. ಮನಸ್ಸು ಏನನ್ನು ಆಲೋಚನೆ ಮಾಡುತ್ತದೆಯೋ ಬುದ್ಧಿಯು ಅದನ್ನೇ ದರ್ಶಿಸಬೇಕಾಗಿದೆ ಇದರಿಂದ ಕಡಿಮೆ ಸಮಯದಲ್ಲಿ ಹೆಚ್ಚು ಓದಬಹುದಾಗಿದೆ ಇದರಿಂದ ಜ್ಞಾನದ ಬಂಡಾರವು ಸಹ ಹೆಚ್ಚಾಗುತ್ತದೆ ಎಂದರು.
ಯುವ ಸ್ಪಂದನ ಕೇಂದ್ರದ ಜಿಲ್ಲಾಯುವ ಪರಿವರ್ತಕರಾದ ಗುರುರಾಜು ಎಸ್. ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಯುವ ಜನ ಸಂಬಂಧಿಸಿದಂತೆ ಸಮಸ್ಯೆ ಸವಾಲುಗಳು ಇದ್ದರೆ ಯುವ ಸ್ಪಂದನವನ್ನು ಉಪಯೋಗಿಸಿಕೊಂಡು ಜೀವನದಲ್ಲಿ ಉತ್ತಮ ವ್ಯಕ್ತಿಗಳಾಗಿ ತಮ್ಮ ಬದುಕನ್ನು ಕಟ್ಟಿಕೊಂಡು ನಿಮ್ಮತಂದೆ ತಾಯಿಗಳಿಗೆ ಮಾದರಿಯಾಗಬೇಕು ಮತ್ತು ವಿದ್ಯಾರ್ಥಿಗಳು ಯಾವುದೇ ಗೊಂದಲಗಳಿಗೆ ತಲೆಯಾಕದೆತಮ್ಮ ಭವಿಷ್ಯದಕಡೆ ನೋಡಿಕೊಂಡರೆ ನಿಮ್ಮ ಬದುಕು ಬಂಗಾರವಾಗುತ್ತದೆ. ಹಾಗೂ ಇದರ ಜೊತೆಗೆ ಸಮಾಜವು ನಿಮ್ಮ ಗುರುತಿ ಸುವಂಥ ವ್ಯಕ್ತಿಗಳಾಗಬೇಕು ಮತ್ತುಯುವ ಸ್ಪಂದನಕೇಂದ್ರವು ವಿದ್ಯಾರ್ಥಿಗಳಿಗೋಸ್ಕರ ಭಾನುವಾರವು ಕೇಂದ್ರವನ್ನು ತೆರೆಯಬೇಕು ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾರ್ಗದರ್ಶನವನ್ನು ನೀಡಬೇಕು ಎಂದು ನಿಮ್ಹಾನ್ಸ್ ವತಿಯಿಂದ ತಿಳಿಸಿದ್ದಾರೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಮುಖ್ಯಅತಿಥಿ ನಂಜೇದೇವನಪುರ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಶಾರದಾ. ಎನ್. ಮಾತನಾಡಿ, ವಿದ್ಯಾರ್ಥಿಗಳು ಶಿಸ್ತಿನಿಂದ ಇದ್ದರೆ ಜೀವನದಲ್ಲಿ ಏನಾದರೂ ಸಾಧಿಸಬಹುದು ಮತ್ತು ಶಾಲೆಯಲ್ಲಿ ಅನೇಕ ಸೌಲಭ್ಯಗಳು ಸರ್ಕಾರ ಕಲ್ಪಿಸಿದ್ದು ಇದನ್ನ ಸದುಪಯೋಗಪಡಿಸಿಕೊಂಡು ಮೌಲ್ಯಯುತ ಬದುಕನ್ನೂ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಮಂಜುಳ. ಎಂ. ಮಾತನಾಡಿ, ವಿದ್ಯಾರ್ಥಿಜೀವನದಲ್ಲಿ ಮೌಲ್ಯಯುತವಾದ ಗೌರವ, ಸಂಸ್ಕಾರ, ವಿನಯತೆ, ಮತ್ತು ಬದುಕು ಹೇಗಿರಬೇಕು ಎಂಬುದನ್ನು ಸ್ವ ವಿವರವಾಗಿ ವಿದ್ಯಾರ್ಥಿಗಳಿಗೆ ಹೇಳಿದರು.
ಕಾರ್ಯಕ್ರಮದಲ್ಲಿ ಸಹ ಶಿಕ್ಷಕರಾದ ರಘು.ಆರ್.ವಿ, ಶಿಲ್ಪ. ಪಿ, ಮಂಗಳಮ್ಮ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.