ಎಂ. ಜಿ. ಪಟೇಲ ನ್ಯಾಶನಲ್ ಅವಾರ್ಡ್ ಗೆ ಶಿಕ್ಷಕ ಅಜರ ಮುಲ್ಲಾ ಆಯ್ಕೆ
ಅಥಣಿ : ಸೆ.೪:ಪಟ್ಟಣದ ಉಲ್ಫತ್ ಉರ್ದು ಶಾಲೆಯ ಮುಖ್ಯ ಶಿಕ್ಷಕ ಅಜರ ಮುಲ್ಲಾ ಅವರನ್ನು ಮಹಾರಾಷ್ಟ್ರ ಜಯಸಿಂಗಪುರದ ಶಾಂದಾರ ಸ್ಪೋರ್ಟ್ಸ್ ಆಂಡ್ ಎಜುಕೇಷನ್ ಅಸೋಸಿಯೇಶನ್ ವತಿಯಿಂದ ನೀಡುತ್ತಿರುವ ಎಂ. ಜಿ.ಪಟೇಲ ನ್ಯಾಷನಲ್ ಅವಾರ್ಡ್ ೨೦೨೩ ರ ಬೆಸ್ಟ್ ಟೀಚರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಇದೇ ಸೆಪ್ಟೆಂಬರ್ ೧೪ ರಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಡೆಯುತ್ತಿರುವ ಭವ್ಯ ಸಮಾರಂಭದಲ್ಲಿ ಶಿಕ್ಷಕ ಅಜರ ಮುಲ್ಲಾ ಅವರಿಗೆ ಎಂ. ಜಿ. ಪಟೇಲ್ ಬೆಸ್ಟ್ ಟೀಚರ್ ನ್ಯಾಷನಲ್ ಅವಾರ್ಡ್ ಪ್ರಶಸ್ತಿಯನ್ನು ನೀಡಿ ಗೌರವಿಸಲಿದ್ದಾರೆ.