ಹಂಚಿ ಉಣ್ಣುವ ಸಂಸ್ಕೃತಿ ನಮ್ಮದು:ಅಭಿನವ ರಾಚೋಟೇಶ್ವರ ಶ್ರೀ
ಸಂಜೆವಾಣಿ ವಾರ್ತೆ,
ವಿಜಯಪುರ,ಸೆ.೪:ಗ್ರಾಮೀಣ ಜನತೆ ಕೃಷಿ ಸಂಸ್ಕೃತಿಯಿAದ ವಿಮುಖರಾಗಬಾರದು. ತಮಗೆ ದೊರೆತ ಅತ್ಯಮೂಲ್ಯ ಸಮಯವನ್ನು ಉದಾತ್ತ ವಿಚಾರಗಳಿಗೆ ಮೀಸಲಾಗಿಡಬೇಕು. ಮುಕ್ತಿಗೆ ದಾರಿ ತೋರುವ ಶಕ್ತಿ ಆಧ್ಯಾತ್ಮ ಹಾಗೂ ಸತ್ಸಂಗಕ್ಕಿದೆ. ನಮ್ಮ ಆಚರಣೆಗಳನ್ನು ಹಿಯಾಳಿಸುವುದೇ ಕೆಲವರಿಗೆ ಗೀಳಾಗಿದೆ. ಮುಚ್ಚಿ ಉಣ್ಣದೆ ಎಲ್ಲರೂ ನಮ್ಮವರೆಂದು ತಂದ ಬುತ್ತಿಯನ್ನು ಬಿಚ್ಚಿ ಉಣ್ಣುವ ಸಂಸ್ಕೃತಿ ನಮ್ಮದು ಎಂದು ತಡವಲಗಾದ ಷ.ಬ್ರ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ನುಡಿದರು.
ವಿಜಯಪುರ ತಾಲೂಕಿನ ಹೆಗಡಿಹಾಳ ಗ್ರಾಮದ ನಂದಿ ಬಸವೇಶ್ವರ ದೇವಸ್ಥಾನದಲ್ಲಿ ಶ್ರಾವಣ ತಿಂಗಳ ನಿಮಿತ್ತ ಕಲಬುರಗಿ ಶ್ರೀ ಶರಣ ಬಸವೇಶ್ವರ ಪುರಾಣ ಮಹಾಮಂಗಲ ಹಾಗೂ ಏಕಾದಶ ಸಹಸ್ರ ದೀಪೋತ್ಸವ ಮತ್ತು ಧರ್ಮಸಭೆ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ನಮ್ಮ ಸಂಸ್ಕೃತಿಯ ರಾಯಭಾರಿಗಳು. ಸಾಮರಸ್ಯ ಹಾಗೂ ಧರ್ಮದ ತವರೂರಾದ ಹೆಗಡಿಹಾಳ ಭೂಲೋಕದ ಸ್ವರ್ಗವಾಗಿದೆ ಎಂದು ಆಶೀರ್ವದಿಸಿದರು.
ಅತಿಥಿಗಳಾದ ವಿಜಯಪುರ ತಹಶೀಲ್ದಾರ ಪ್ರಶಾಂತ ಚನಗೊಂಡ, ಎಲ್ಲ ಸಮುದಾಯದವರನ್ನು ಬೆಸೆಯುವ ಶಕ್ತಿ ಪುರಾಣ ಹಾಗೂ ಸತ್ಸಂಗಗಳಿಗಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ವಿಶ್ವಮಾನವರನ್ನಾಗಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಸಂಸ್ಕಾರ ರಹಿತ ಮಕ್ಕಳಿಂದಲೇ ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವುದು ವಿಷಾದÀನೀಯ ಎಂದು ನುಡಿದರು.
ಸಮಾರಂಭದ ನೇತೃತ್ವ ವಹಿಸಿದ್ದ ಪುರಾಣಿಕರಾದ ವೇದಮೂರ್ತಿ ಶಿವಾನಂದಯ್ಯ ಶಾಸ್ತ್ರಿಗಳು ತಿಂಗಳ ಪೂರ್ತಿ ಕಲಬುರ್ಗಿ ಶರಣ ಬಸವೇಶ್ವರ ಚರಿತಾಮೃತ ಆಲಿಸಿ ತಾವೆಲ್ಲ ಪಾವನರಾಗಿದ್ದೀರಿ. ಮಹಾತ್ಮರ ಬದುಕು ನಮಗೆ ದಾರಿದೀಪವಾಗಬೇಕು. ಭಗವಂತನ ನಾಮ ಸ್ಮರಣೆಯಿಂದ ಮನಸ್ಸು ಏಕಾಗ್ರತೆಗೊಂಡು ಸಾಧನೆಗೆ ಸಹಕರಿಸುತ್ತದೆ. ಮೋಕ್ಷ ಪಡೆಯುವುದೇ ಮೂಲ ಧ್ಮೂಲ ಧ್ಯೇಯವಾಗಬೇಕಲ್ಲದೆ ಸಮಸ್ತ ಮಾನವ ಕುಲ ನಮ್ಮದೆಂಬ ಭಾವನೆ ಗಟ್ಟಿಗೊಳ್ಳಬೇಕು ಎಂದು ನುಡಿದರು.
ಸಮ್ಮುಖ ವಹಿಸಿದ ಹುಲಜಂತಿ ಪಟ್ಟದ ಮಾಳಿಂಗರಾಯ ಮಹಾರಾಯರು ಶ್ರಾವಣ ತಿಂಗಳವಷ್ಟೇ ಶ್ರವಣಗಯ್ಯದೆ ಜೀವನ ಪೂರ್ತಿ ಉದಾತ್ತ ವಿಚಾರಗಳನ್ನು ಕೇಳಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಳ್ಳಿಗಳು ಪ್ರಗತಿ ಹೊಂದಲು ಶಿಕ್ಷಣ ತುಂಬಾ ಅವಶ್ಯಕ. ಶಾಲೆಯಲ್ಲಿ ಕಲಿತು ಪ್ರಮಾಣ ಪತ್ರ ಪಡೆಯುವುದಕ್ಕಿಂತ ಪ್ರಮಾಣ ಬದ್ಧವಾಗಿ ನಡೆಯುವುದೇ ಮೇಲು ಎಂದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ಆಲಮೇಲ ಗುರು ಸಂಸ್ಥಾನ ಹಿರೇಮಠದ ಷ ಬ್ರ. ಚಂದ್ರಶೇಖರ ಶಿವಾಚಾರ್ಯರು ಅಂತರAಗದ ಪರಿಶುದ್ಧತೆಯೇ ಪರಮಾತ್ಮನನ್ನು ಒಲಿಸಿಕೊಳ್ಳುವ ಕ್ರಮವಾಗಿದೆ. ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಕೂಡ ಒಂದೇ ಒಂದು ಕಾಳ ಧಾನ್ಯವನ್ನು ತಯಾರಿಸಲಾಗದು. ಹೀಗಾಗಿ ನಾವು ಪ್ರಕೃತಿ ಮಾತೆಗೆ ಸದಾ ಋಣಿಯಾಗಿರಬೇಕು. ಪ್ರೀತಿಯಿಂದ ಬದುಕುತ್ತಾ ಈ ಭೂಲೋಕವನ್ನು ಸ್ವರ್ಗವನ್ನಾಗಿಸಬೇಕಾಗಿದೆ. ವಿಭೂತಿ, ರುದ್ರಾಕ್ಷಿ ಧಾರಣ, ಲಿಂಗ ದೀಕ್ಷೆ, ಪೂಜೆ, ಮಂತ್ರ ಪಠಣ, ಯೋಗ, ವೈಜ್ಞಾನಿಕ ಸತ್ಯವನ್ನು ಹೊಂದಿರುವ ಇಂತಹ ಧಾರ್ಮಿಕ ಕ್ರಿಯೆಗಳಿಂದ ಮನಸ್ಸು ಗಟ್ಟಿಗೊಳ್ಳುತ್ತದೆ ಎಂದರು.
ಗ್ರಾಮದ ಅಶೋಕಗೌಡ ಎಸ್ ಬಿರಾದಾರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಮುಖಂಡ ಸಂಜೀವ ಐಹೊಳಿ ಯುವಕರು ಮತ್ತು ದೇಶದ ಪ್ರಗತಿ ಎನ್ನುವ ವಿಷಯದ ಮೇಲೆ ಮಾತನಾಡಿದರು. ವೇದಿಕೆಯ ಮೇಲೆ ಗುರುಲಿಂಗಯ್ಯ ಹಿರೇಮಠ, ಮಹಾಂತಯ್ಯ ಮಠ, ಗ್ರಾಮೀಣ ಪಿಎಸ್ಐ ಎನ್.ಎ. ಉಪ್ಪಾರ, ಶಶಾಂಕಗೌಡ ಬಿರಾದಾರ, ಗ್ರಾ ಪಂ ಅಧ್ಯಕ್ಷೆ ರೇಣುಕಾ ಛಲವಾದಿ, ಮಲ್ಲಿಕಾರ್ಜುನ ಬಗಲಿ, ಬಸವರಾಜ ರೊಟ್ಟಿ, ಸಂಗಮೇಶ ಬಬಲೇಶ್ವರ, ಸಾಹೇಬಗೌಡ ಬಿರಾದಾರ, ಮಲ್ಲಪ್ಪ ಕೌಲಗಿ, ಎಪಿಎಂಸಿ ಮಾಜಿ ಅಧ್ಯಕ್ಷ ರಾಜೇಂದ್ರ ಮುದನೂರ, ಶ್ರೀಶೈಲಗೌಡ ಬಿರಾದಾರ, ನಾಗೇಶ ಹೆಗಡಿಹಾಳ, ಸಿದ್ದು ಮಲ್ಲಿಕಾರ್ಜುನ ಕಳಸಗೊಂಡ ಸಂಗಯ್ಯ ಕತಕನಹಳ್ಳಿ, ಸಾಹೇಬಗೌಡ ಪಾಟೀಲ, ನಿರ್ಮಲ ಬಿರಾದಾರ, ಪರುಶುರಾಮ ನಿಂಬಾಳ ಮುಂತಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿದ ಸಂಜನಾ ಬಿರಾದಾರ, ಲಾವಣ್ಯ ಬಿರಾದಾರ ಹಾಗೂ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದು ತೇರ್ಗಡೆಯಾದ ಕುಮಾರ ಆನಂದ ಬಿರಾದಾರ ಕುಮಾರಿ ಗೌರಾಬಾಯಿ ಪಾಟೀಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಏಕಾದಶ ಸಹಸ್ರ ದೀಪೋತ್ಸವ ಕಾರ್ಯ ಜರುಗಿತು.
ಕಾರ್ಯಕ್ರಮದಲ್ಲಿ ಶರಣಗೌಡ ಬಿರಾದಾರ, ಮುತ್ತಪ್ಪ ಜಂಗಮಶೆಟ್ಟಿ, ಸಂತೋಷ ಹತರಿಕಿಹಾಳ, ಸಾವಿತ್ರಿ ಬಿರಾದಾರ, ಈರಣ್ಣ ಬಿರಾದಾರ, ಶಾಂತಪ್ಪ ಬನಗೊಂಡ, ಕಾಶಿರಾಯಗೌಡ ಬಿರಾದಾರ ನಾಗೇಂದ್ರ ಬೀಳಗಿ, ಬಸವರಾಜ ಹಿಪ್ಪರಗಿ, ಮಲ್ಲಪ್ಪ ಬೆಳ್ಳಕ್ಕಿ, ಮುತ್ತಣ್ಣ ಚಿಪ್ಪಾಟಿ, ಅಮಗೊಂಡ ಅರಿಕೇರಿ, ಬಸವರಾಜ ಅರಿಕೇರಿ, ಸೋಮರಾಜ ಪೂಜಾರಿ, ಶಿವನಗೌಡ ಪಾಟೀಲ, ಶಿವಾನಂದ ಹಡಪದ, ನಾಗಪ್ಪ ತೋಟದ, ಮಲ್ಲಪ್ಪ ಚಿಪ್ಪಾಟಿ, ಚಂದ್ರಶೇಖರ ಬಿರಾದಾರ, ದ್ಯಾಮಪ್ಪ ಹೂಗಾರ, ಎಂ.ಕೆ. ಕುಲಕರ್ಣಿ, ಜಯಶ್ರೀ ಬಿರಾದಾರ, ನೀಲಮ್ಮ ಹೂಗಾರ, ದ್ಯಾಮನಗೌಡ ಪಾಟೀಲ, ದಯಾನಂದ ದಳವಾಯಿ, ಪ್ರಹ್ಲಾದ ಮೇಲಕುಂದಿ, ಅಶೋಕ ಬಿರಾದಾರ, ಸುರೇಶಗೌಡ ಬಿರಾದಾರ, ಕೆ.ಎಸ್. ಪಾಟೀಲ, ಶಂಕರಗೌಡ ಬಿರಾದಾರ, ನಾನಾಗೌಡ ಪಾಟೀಲ ಗುರುರಾಜ ಅರಕೇರಿ, ಚೆನ್ನಪ್ಪ ಅರಳದಿನ್ನ ಸೋಮಪ್ಪ ಅರಳದಿನ್ನಿ, ಚಂದ್ರಶೇಖರ ಮುರಗೋಡ, ಮಲ್ಲಿಕಾರ್ಜುನ ಕಳಸಗೊಂಡ, ಅಶೋಕ ಮುರಗೋಡ, ಸುರೇಶಗೌಡ ಪಾಟೀಲ, ಮೃತ್ಯುಂಜಯ ಮಠ ಮುಂತಾದವರು ಭಾಗಿಯಾಗಿದ್ದರು.