ಪಡಿತರ ಸರಿಯಾಗಿ ಹಂಚಿಕೆಯಾಗುತ್ತಿಲ್ಲವೆAದು ಗ್ರಾಮಸ್ಥರ ಪ್ರತಿಭಟನೆ
ಮುದ್ಧೇಬಿಹಾಳ :ಸೆ.೪: ತಾಲೂಕಿನ ನೇಭಗೇರಿ ಗ್ರಾಮದಲ್ಲಿ ಪಡಿತರ ರೇಷನ್ ಸರಿಯಾಗಿ ಜನರಿಗೆ ಹಂಚುತ್ತಿಲ್ಲಾ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆಯಿತು.
ಈ ಸಂಧರ್ಭದಲ್ಲಿ ಗ್ರಾಮದ ಮಹಿಳೆಯರಾದ ಗೀತಾಬಾಯಿ ಲಮಾಣಿ ಮಾತನಾಡಿ ಸುಮಾರು ದಿನಗಳಿಂದ ಗ್ರಾಮದಲ್ಲಿ ಸರಿಯಾಗಿ ಸರಕಾರದಿಂದ ಅನ್ನಬಾಗ್ಯ ಯೋಜನೆಯಿಂದ ಬರುವ ಉಚಿತ ರೇಷನ್ ಅಕ್ಕಿ ಹಾಗೂ ಜೋಳವನ್ನು ಸರಿಯಾಗಿ ಪ್ರಾಧಿಕಾರದ ಮುಖ್ಯಸ್ಥರು ತಲುಪಿಸುತ್ತಿಲ್ಲಾ, ಪ್ರತಿ ತಿಂಗಳು ರೇಷನ್ ನೀಡುತ್ತೇವೆ ಎಂದು ಚೀಟಿ ಮಾಡುತ್ತಾರೆ ೬ -೮ ತಿಂಗಳಿAದ ಪಡಿತರ ರೇಷನ್ ನೀಡದೇ ಇರುವದಕ್ಕೆ ಕಾರಣವೇನು ?
ಯಾಕೆ ಸರಿಯಾಗಿ ರೇಷನ್ ನೀಡುತ್ತಿಲ್ಲಾ ಎಂದು ಕೇಳಿದರೆ? ಯಾರಿಗೆ ಹೇಳುತ್ತಿರಿ ಹೇಳಿ ಎಂದು ನಮಗೆ ಹೆದರಿಸುತ್ತಾರೆ ಸಂಭAದಿಸಿದ ಅಧಿಕಾರಿಗಳು ನಮ್ಮೂರ ಸಮಸ್ಯೆ ಬಗೆ ಹರಿಸಿ ಎಂದು ಅಂಗಲಾಚಿದರು ಕ್ರಮ ಕೈಗೋಳ್ಳದೆ ಇರುವದಕ್ಕೆ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಗ್ರಾಮದ ಯುವಕ ಬೀಮಣ್ಣ ಕಡೆಮನಿ ಮಾತನಾಡಿ ಅನ್ನಬಾಗ್ಯ ಯೋಜನೆಯೂ ನಮ್ಮೂರಲ್ಲಿ ಹಳ್ಳ ಹಿಡಿದಿದೆ, ಒಂದು ಪಡಿತರ ಚೀಟಿಗೆ ೨ಕೆಜಿ ಕಡಿತ ಮಾಡಿ ಎರಡು ಮೂರು ತಿಂಗಳಿಗೋಮ್ಮೆ ರೇಷನ್ ನೀಡುತ್ತಿದ್ದಾರೆ, ಮಧ್ಯದಲ್ಲಿ ಒಂದು ತಿಂಗಳು ರೇಷನ ಬೇರೆಕಡೆಗೆ ಮಾರಾಟ ಮಾಡುತ್ತಿದ್ದಾರೆ ಗ್ರಾಮದಲ್ಲಿ ಗುಮಾನಿ ಎದ್ದಿದೆ ಆದರಿಂದ, ಸಧ್ಯದ ರೇಷನ್ ಹಂಚುವ ಪ್ರಾದಿಕಾರವನ್ನು ರದ್ದು ಪಡಿಸಿ ಬೇರೆಯವರಿಗೆ ರೇಷನ್ ಹಂಚುವದನ್ನು ನೀಡಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮಸ್ಥರ ಪ್ರತಿಭಟನೆಯ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಆಹಾರ ಇಲಾಖೆಯ ಅಧಿಕಾರಿಗಳಾದ ಎಸ್ ಎ ಗುಮತಿಮಠ, ಶಶಿದರ ಕುಮಚಗಿ ಆಗಮಿಸಿದ ವೇಳೆ ಗ್ರಾಮಸ್ಥರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.
ಈ ವೇಳೆ ಮಾತನಾಡಿದ ಅಧಿಕಾರಿಗಳು ಜನಸಾಮಾನ್ಯರಿಗೆ ಸರಕಾರದ ಯೋಜನೆಯನ್ನು ನೀಡದೇ ದುರ್ಭಳಕೆ ಮಾಡಿದ ಆರೋಪವನ್ನು ಪರಿಗಣಿಸಿ ಈ ಪ್ರಾಧಿಕಾರವನ್ನು ರದ್ದು ಮಾಡಿ ಬೇರೆಯವರಿಗೆ ನೀಡುತ್ತೇವೆ ಎಂದು ತಿಳಿಸಿದರು.ಬೀಮಣ್ಣ ಕಡೆಮನಿ,ಮಲ್ಲನಗೌಡ ಬಗಲಿ,ಮಲ್ಲು ಬಿಜ್ಜೂರ,ಕಿರಣ ರಾಠೋಡ,ಅಮೀತ್ ಲಮಾಣಿ, ಬಾಳಪ್ಪ ವಾಲಿಕಾರ, ಮಲ್ಲಿಕಾರ್ಜುನ ಸದರಗಟ್ಟಿ, ಶಶಿಕುಮಾರ್ ಬ್ಯಾಲ್ಯಾಳ, ಸಂಗಪ್ಪ ವಾಲಿಕಾರ, ಕಿರಣ ತೊಂಡಿಹಾಳ, ಗೀತಾಬಾಯಿ ಲಮಾಣಿ, ಗೌರವ್ವ ಯರಝರಿ, ಚೌಳವ್ವ ಲಮಾಣಿ, ಸುರೇಶ ರಾಠೋಡ, ಗುಂಡು ರಾಠೋಡ, ಸಂಗಮೇಶ ಚಲವಾದಿ, ರಾಘವೇಂದ್ರ ಲಮಾಣಿ, ಹಣಮಂತ ಹಡಲಗೇರಿ, ಸಂತೋಷ ಆಲಕೊಪ್ಪರ,
ಸಂತೋಷ ಕೋಳೂರ ಇನ್ನೀತರರು ಇದ್ದರು.