ಎಟಿಎಂಗೆ ಹಣ ತುಂಬಿಸಲು ತಂದಿದ್ದ ವಾಹನದಿಂದ ದರೋಡೆ – ಆರೋಪಿ ಅರೆಸ್ಟ್
ಕಾಸರಗೋಡು-ಎಟಿಎಂ ಗೆ ಹಣ ತುಂಬಿಸಲು ತಂದಿದ್ದ ವಾಹನದಿಂದ ೫೦ ಲಕ್ಷ ರೂ . ದರೋಡೆಗೈದ ಪ್ರಕರಣ ಕ್ಕೆ ಸಂಬಂಧಪಟ್ಟಂತೆ ಆರೋಪಿಯನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ತಿರುಟ್ಟಿ ಗ್ರಾಮದ ಮುತ್ತು ಕುಮಾರನ್ (೪೭) ಬಂಧಿತ ಆರೋಪಿ. ಮೇ ೨೭ ರಂದು ಘಟನೆ ನಡೆದಿತ್ತು. ಉಪ್ಪಳದ ಎಕ್ಸ್‌ಸ್ ಬ್ಯಾಂಕ್ ನ ಎಟಿಎಂ ಗೆ ಹಣ ತುಂಬಿಸಲು ಬಂದಿದ್ದ ಸಂದರ್ಭದಲ್ಲಿ ವ್ಯಾನ್ ನಿಂದ ಹಣ ದರೋಡೆ ಮಾಡಲಾಗಿತ್ತು.
ಮೇ ೨೭ ರಂದು ಹಾಡ ಹಗಲೇ ಘಟನೆ ನಡೆದಿತ್ತು.ವಿಶೇಷ ಪೊಲೀಸ್ ತಂಡ ತಿರುಚ್ಚಿರಾಪಳ್ಳಿ ಯಿಂದ ಆರೋಪಿ ಯ ಬಂಧಿಸಿದರು. ಮೂವರ ತಂಡ ಕೃತ್ಯ ನಡೆಸಿತ್ತು