ಉಡುಪಿ: ಕೊಳೆತ ಶವದ ವಾರಸುದಾರರು ಪತ್ತೆ.
ಉಡುಪಿ-ಮೂರು ದಿನಗಳ ಹಿಂದೆ, ನೇಣುಕುಣಿಕೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಇಂದ್ರಾಳಿಯ ರೈಲುನಿಲ್ದಾಣದ ಬಳಿ, ಪತ್ತೆಯಾದ ಕಳೇಬರದ ಸಂಬಂಧಿಕರು ಪತ್ತೆಯಾಗಿದ್ದಾರೆ. ಮೃತ ವ್ಯಕ್ತಿ ಕಿನ್ನಿಮೂಲ್ಕಿಯ ಗೌತಮ್ (೨೯ವ) ಎಂದು ತಿಳಿದುಬಂದಿತು. ಮೃತನು ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವುದೆಂದು ತಿಳಿದುಬಂದಿದೆ. ಮೃತನು ಕಾಣೆಯಾಗಿರುವ ಬಗ್ಗೆ ಮಲ್ಪೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೋಲಿಸರು ಮರಣೋತ್ತರ ಪರೀಕ್ಷೆಗಳು ನಡೆದ ಬಳಿಕ, ಮೃತನ ಗುರುತಿನ ದಾಖಲೆ ಪರಿಶೀಲಿಸಿ, ಕಾನೂನು ಪ್ರಕ್ರಿಯೆ ನಡೆಸಿದ ನಂತರ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಿದರು.
ಮೃತನ ಅಂತ್ಯಸಂಸ್ಕಾರವು ಸಂಬಂಧಿಕರ ಉಪಸ್ಥಿತಿಯಲ್ಲಿ ಸಮಾಜಸೇವಕ ನಿತ್ಯಾನಂದ ಒಳಕಾಡುವರ ನೇತ್ರತ್ವದಲ್ಲಿ ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ಸೋಮವಾರ ನಡೆಯಿತು. ಮೃತನ ಅಂತ್ಯಸಂಸ್ಕಾರ ನಡೆಸಲು, ಸಂಬಂಧಿಕರಿಗೆ ಅಸಹಾಯಕತೆ ಎದುರಾದರಿಂದ ಕಡೆಕಾರ್ ಪಂಚಾಯಿತಿಯ ಉಪಾಧ್ಯಕ್ಷ ನವೀನ್ ಶೆಟ್ಟಿ ಆರ್ಥಿಕ ನೆರವು ನೀಡಿದರು.