ಕಾಂತಮಂಗಲ ಸೇತುವೆಯಿಂದ ಪಯಸ್ವಿನಿ ನದಿಗೆ ಹಾರಿದ ಯುವಕ ಆತ್ಮಹತ್ಯೆ
ಸುಳ್ಯ:ಕಾಂತಮಂಗಲ ಸೇತುವೆಯಿಂದ ಪಯಸ್ವಿನಿ ನದಿಗೆ ಹಾರಿ ನಾಪತ್ತೆಯಾಗಿದ್ದು, ಮಂಗಳವಾರ ಮುಳುಗು ತಜ್ಞರು ಮೃತದೇಹ ಪತ್ತೆಮಾಡಿದ್ದಾರೆ..
ನದಿಗೆ ಹಾರಿರುವ ಯುವಕ ಅಜ್ಜಾವರ ಗ್ರಾಮದ ಅಡ್ಪಂಗಾಯದ ಮಾವಿನಪಳ್ಳ್ಕ ನಿವಾಸಿ ಟಿ.ಎಸ್. ಮಹಮ್ಮದ್ ಅವರ ಪುತ್ರ ಸಿನಾನ್ (೩೦) ಎಂದು ಗುರುತಿಸಲಾಗಿದೆ.
ಹುಟ್ಟಿನಿಂದಲೇ ಮಾನಸಿಕ ಅಸ್ವಸ್ಥನಾಗಿರುವ ಆತ ಕಾಂತಮಂಗಲ ಸೇತುವೆಯಲ್ಲಿ ಸೋಮವಾರ ಸಂಜೆ ವೇಳೆಗೆ ನಿಂತಿದ್ದನೆಂದು ಕೆಲವರು ತಿಳಿಸಿದ್ದಾರೆ.  ಬೈಕಲ್ಲಿ ಬಂದ ಆತನ ಪರಿಯಸ್ಥರೊಬ್ಬರು ಆತನಲ್ಲಿ ಮಾತನಾಡಲೆತ್ನಿಸಿದಾಗ ಆತ ಏಕಾಏಕಿ ಸೇತುವೆಯಿಂದ ಕೆಳಗೆ ಜಿಗಿದನೆಂದು ತಿಳಿದುಬಂದಿದೆ. ನೀರಿಗೆ ಬಿದ್ದ ಆತ ೫೦ ಮೀಟರ್ ದೂರ ಈಜುಕೊಂಡು ತೆರಳಿದ್ದಾನೆ. ಬಳಿಕ ಆತ ಕಾಣಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಅಗ್ನಿಶಾಮಕ ದಳದವರು, ಪೋಲೀಸರು, ಮುಳಗು ತಜ್ಞರು ಸ್ಥಳಕ್ಕೆ ಬಂದು ಹುಡುಕಾಟ ಮಾಡಿ, ಮೃತದೇಹವನ್ನು ಹೊರತೆಗೆದಿದ್ದಾರೆ.