ಹೊರಗುತ್ತಿಗೆ ನೌಕರರ ಮೇಲೆ ಪೋಲೀಸ್‍ದೌರ್ಜನ್ಯ: ಖಂಡನೆ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೪: ಶಾಂತಿಯುತವಾಗಿ ಬಿಸಿಎಂ ಇಲಾಖೆ ಆಯುಕ್ತರ ಕಛೇರಿ ದೇವರಾಜು ಅರಸು ಭವನದ ಎದುರು ತಮ್ಮ ನ್ಯಾಯಯುತ ಹಕ್ಕೋತ್ತಾಯಗಳಿಗಾಗಿ ಪ್ರತಿಭಟಿಸುತ್ತಿದ್ದ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಮೇಲೆ ಪೆÇಲೀಸ್ ಬಲ ಪ್ರಯೋಗಿಸಿ ದೌರ್ಜನ್ಯದ ಮೂಲಕ ಪ್ರತಿಭಟನಾಕಾರರನ್ನು ಬಂಧಿಸಿರುವುದನ್ನು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ದಾವಣಗೆರೆ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.ಈ ಹಿಂದೆ ಪ್ರೀಡಂ ಪಾರ್ಕಿನಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದ್ದರೂ, ಈ ಬಡ ನೌಕರರಜ್ವಲಂತ ಸಮಸ್ಯೆಗಳು ಪರಿಹಾರ ಕಾಣಲಿಲ್ಲ. ಈ ಬಗ್ಗೆ ಇಲಾಖೆ ಸಚಿವರು ಹಾಗೂ ಉನ್ನತ ಅಧಿಕಾರಿಗಳ ಗಮನ ಸೆಳೆದು ತಮ್ಮ ನ್ಯಾಯಯುತ ಹಕ್ಕೊತ್ತಾಯಗಳ ಪರಿಹಾರಕ್ಕಾಗಿ ನಡೆಸಿರುವ ಹಾಸ್ಟೆಲ್ ನೌಕರರ ಶಾಂತಿಯುತ ಪ್ರತಿಭಟನೆಯನ್ನು ಅನುಕಂಪದಿಂದ ನೋಡಬೇಕು. ಈ ಕೂಡಲೇ ಬಂಧಿಸಿರುವ ಎಲ್ಲಾ ಹಾಸ್ಟೆಲ್ ಹೊರಗುತ್ತಿಗೆ ನೌಕರರು ಮತ್ತು ಮುಖಂಡರನ್ನು ಬಿಡುಗಡೆ ಗೊಳಿಸಬೇಕು. ತಕ್ಷಣ ಹಾಸ್ಟೆಲ್‍ಹೊರಗುತ್ತಿಗೆ ನೌಕರರ ಸಂಘಟನೆ ಮುಖಂಡರ ಜೊತೆ ಸಭೆ ನಡೆಸಿ ಸಾಧ್ಯಇರುವ ಪರಿಹಾರ ಮಾರ್ಗೋಪಾಯಗಳನ್ನು ಚರ್ಚಿಸಬೇಕು ಹಾಗೂ ಬಿಸಿಎಂ ಹಾಸ್ಟೆಲ್ ಪರಿಸ್ಥಿತಿಯನ್ನು ಉತ್ತಮಪಡಿಸಲು ನಿರ್ಧಿಷ್ಟ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಐಟಿಯುನ ಜಿಲ್ಲಾ ಸಂಚಾಲಕ ಆನಂದರಾಜು ಆಗ್ರಹಿಸಿದ್ದಾರೆ.