ಮನೆ ಮನೆಗೂ ಸರ್ಕಾರದ ಯೋಜನೆಗಳು ತಲುಪಿಸುವೆ: ಶಾಸಕ ಅಲ್ಲಂಪ್ರಭು ಪಾಟೀಲ್‌
ಕಲಬುರಗಿ:ಸೆ.03:ಸರ್ಕಾರದ ಯೋಜನೆಗಳನ್ನು ಕ್ಷೇತ್ರದ ಜನರ ಮನೆ ಮನೆಗೂ ತಲುಪಿಸುವಲ್ಲಿ ಕೆಲಸ ಮಾಡುವುದಾಗಿ ಕಲಬುರಗಿ ಶಾಸಕ ಅಲ್ಲಂಪ್ರಭು ಪಾಟೀಲ್‌ ಹೇಳಿದ್ದಾರೆ.
ಮಂಗಳವಾರ ಪಟ್ಟಣ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಳ್ಳಿಗಾಡಿನ ಜನರಿಗೆ ಏನೆಲ್ಲಾ ಸವಲತ್ತು ಬೇಕು ಎಂಬುದನ್ನು ಅರಿತು ಕೆಲಸ ಮಾಡುವೆ. ಜನ ಕೂಡಾ ತಮ್ಮ ಬೇಕು ಬೇಡಗಳ ಬಗ್ಗೆ ತಮ್ಮ ಗಮನಕ್ಕೆ ತರಬೇಕು ಎಂದು ಶಾಸಕರು ಹೇಳಿದರು.
ಗುಣಮಟ್ಟದ ಕರೆಂಟ್‌, ಶುದ್ಧ ನೀರು, ಉತ್ತಮ ರಸ್ತೆ ಸೇರಿದಂತೆ ಜನರಿಗೆ ಅನುಕೂಲವಾಗುವಂತಹ ಸವಲತ್ತುಗಳನ್ನು ತಾವು ಪ್ರತಿ ಗ್ರಾಮಗಳಿಗೂ ತಲುಪಿಸುವುದಾಗಿ ಹೇಳಿದರು.
ಜನಸ್ಪಂದನದಲ್ಲಿ ಅನೇಕರು ವೃದ್ಧಾಪ್ಯ ವೇತನ ಸಿಕ್ಕಿಲ್ಲವೆಂದು ದೂರಿದಾಗ ಅರ್ಹರನ್ನು ಗುರುತಿಸಿ ಅವರಿಂದ ಸ್ಥಳದಲ್ಲೇ ರ್ಜಿ ಪಡೆದು ಅಲ್ಲೇ ತಹಶೀಲ್ದಾರರಿಂದ ಅವರ ಪಿಂಚಣಿಗೆ ಅಧಿಕೃತ ಆದೇಶ ಪತ್ರಗಳನ್ನು ಶಾಸಕರು ನೀಡಿದರು. ಇದೇ ರೀತಿ ಕಂದಾಯ ಸೇರಿದಂತೆ ಹಲವಾರು ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವ ಪ್ರಯತ್ನ ಶಾಸಕರು ಮಾಡಿದರು.
ಕಂದಾಯ ಇಲಾಖೆ 79, ಪಂಚಾಯತ್‌ ರಾಜ್‌ 8, ಆಹಾರ ಇಲಾಖೆ 6, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 3, ಶಿಕ್ಷಣ ಇಲಾಖೆ 2, ಜೆಸ್ಕಾಂ 5 ಕೆಕೆಆರ್‌ಡಿಬಿ 5 ಸೇರಿದಂತೆ ಒಟ್ಟು 110 ಅರ್ಜಿಗಳನ್ನು ಸ್ವೀಕರಿಸಲಾಯ್ತು. ಇವುಗಳಲ್ಲಿ ಅನೇಕ ಅಹವಾಲುಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಯ್ತು.
ಈ ಕಾರ್ಯಕ್ರಮದಲ್ಲಿ ಅನೇಕ ಜನರು ಭಾಗವಹಿಸಿ ತಮ್ಮ ಕುಂದು ಕೊರತೆಗಳನ್ನು ಶಾಸಕರ ಹತ್ತಿರ ಹೇಳಿಕೊಂಡುರು, ಶಾಸಕರು ಜನರ ಮನವಿಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಪರಿಹಾರ ಒದಗಿಸಿ ಕೊಟ್ಟರು, ಈ ಸಂದರ್ಭದಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.