ಬಾಲ್ಯ ವಿವಾಹ ಪ್ರಕರಣ ದಾಖಲಿಸಲು ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಸೂಚನೆ
ಕಲಬುರಗಿ:ಸೆ.03: ಬಾಲ್ಯ ವಿವಾಹ ಪ್ರಕರಣಗಳು ದಾಖಲಿಸಬೇಕು ಬಾಲ್ಯವಿವಾಹ ತಡೆಗಟ್ಟಲು ಅಧಿಕಾರಿಗಳು ಶ್ರಮಿಸಬೇಕು ನಿರ್ಲಕ್ಷ್ಯ ವಹಿಸದೆ ಕೆಲಸ ಮಾಡಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಬಿ ಫೌಜಿಯಾ ತರನ್ನುಮ್ ಅವರು ಸೂಚನೆ ನೀಡಿದರು.
ಸ್ಪೂರ್ತಿ ಯೋಜನೆಯಿಂದ ಉತ್ತೇಜಿತರಾಗಿ ಬಾಲ್ಯವಿವಾಹದಿಂದ ರಕ್ಷಿತರಾದ ಶಾಲೆಯಿಂದ ಮರಳೀ ದಾಖಲಾದ ಮತ್ತು ಇದರಿಂದ ಶಿಕ್ಷಣ ಕಲಿಯುತ್ತಿರುವ ಬಗ್ಗೆ ಅನೇಕ ಬಾಲಕೀಯರು ತಮ್ಮ ಅನುಭವಗಳನ್ನು ಹಂಚಿಕೊಂಡ ಉತ್ತೇಜಿತರಾಗಿ ಬಾಲ್ಯ ವಿವಾಹದಿಂದ ರಕ್ಷಿಸಲು ಪ್ರತಿಯೊಂದು ಶಾಲೆಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನಮುಟ್ಟುವ ಹಾಗೆ ಪ್ರಶಂಸೆಯನ್ನು ವ್ಯಕ್ತ ಪಡಿಸಿದ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮಕ್ಕಳ ಮೇಲೆ ಬೀರುವ ಕೆಟ್ಟ ಪ್ರಭಾವಗಳನ್ನು ಅನುಭವದಲ್ಲಿ ಇಟ್ಟುಕೊಂಡು ಶಿಕ್ಷಣ ಕಲಿಯುತ್ತಿರುವ ಬಗ್ಗೆ ಅನೇಕ ಬಾಲಕಿಯರು ತಮ್ಮ ಅನುಭವವನ್ನು ಜಿಲ್ಲಾಧಿಕಾರಿ ಅವರೊಂದಿಗೆ ಹಂಚಿಕೊಂಡರು.
ಸಂಯೋಜಕ ಶಿವಯೋಗಿ ಮಠಪತಿ ಅವರು ಮಾತಾಡಿ ಸ್ಪೂರ್ತಿ ಯೋಜನೆಯಿಂದ ಬಾಲಕಿಯರು ಮರಳಿ ಶಾಲೆಗೆ ಬರುತ್ತಿರುವುದು ಮತ್ತು ಅನೇಕ ಹಳ್ಳಿಗಳಿಗೆ ಬಸ್ಸಿನ ಸೌರ್ಯ ಒದಗಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.