ಗುಡ್ಡ ಕುಸಿದು ಅಪಾರ ಹಾನಿ,ತಪ್ಪಿದ ಅನಾಹುತ
ಚಿತ್ತಾಪುರ:ಸೆ.3:ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮನೆಯ ಮೇಲೆ ಗುಡ್ಡ ಕುಸಿದು ಅಪಾರ ಹಾನಿಯಾಗಿದ್ದು ಯಾವುದೇ ಸಾವು ನೋವು ಆಗಿಲ್ಲ ಎಂದು ತಿಳಿದು ಬಂದಿದೆ.
ತಾಲೂಕಿನ ಅಲ್ಲೂರ್ ಬಿ ಗ್ರಾಮದಲ್ಲಿನ ಚನ್ನಪ್ಪ ಬೋಳಿ ಎನ್ನುವವರಿಗೆ ಸೇರಿದ ಮನೆಯ ಮೇಲೆ ಗ್ರಾಮದ ಗುಡ್ಡ ಕುಸಿದ ಪರಿಣಾಮವಾಗಿ ಗುಡ್ಡದಲ್ಲಿನ ದೊಡ್ಡ ದೊಡ್ಡ ಗಾತ್ರದ ಕಲ್ಲುಗಳು ಬಿದ್ದು ಮನೆ ಪೂರ್ತಿ ಧ್ವಂಸವಾಗಿದೆ ಅಲ್ಲದೆ ಮನೆಯ ಸಾಮಾನುಗಳು ದ್ವಂಸವಾಗಿದ್ದಲ್ಲದೆ ದವಸ ಧಾನ್ಯಗಳು ಸಹಿತ ಹಾಳಾಗಿ ಹೋಗಿದ್ದು ಸುಮಾರು ಏಳು ಲಕ್ಷ ರೂಪಾಯಿಯಷ್ಟು ಹಾನಿ ಆಗಿ ಮನೆಯಲ್ಲಿ ಸಿಲುಕಿದ ಒಬ್ಬ ಬಾಲಕನಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ ಎಂದು ಮನೆಯವರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಪೆÇಲೀಸ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.