ಸಹಕಾರ ಚಳುವಳಿ:ವಿವಿಧ ಸ್ಪರ್ಧಾವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ
ಬೀದರ,ಸೆ 3: ಸಹಕಾರ ಚಳುವಳಿಯ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ, ಬೀದರ ಜಿಲ್ಲಾ ಸಹಕಾರ ಯೂನಿಯನ್ , ಸಹಕಾರ ಇಲಾಖೆ ಮತ್ತು ಸರಸ್ವತಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಚರ್ಚಾ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಯಿತು.
ಸಹಕಾರ ವಲಯದ ಪ್ರಾಥಮಿಕ ಸಂಘಗಳ ಬಲವರ್ಧನೆಯಿಂದ ಮಾತ್ರವೇ ಸಹಕಾರ ಚಳುವಳಿ ಸದೃಡಗೊಳ್ಳಬಲ್ಲದು ಎಂಬ ವಿಷಯ ಕುರಿತ ಚರ್ಚಾ ಸ್ಪರ್ಧೆಯಲ್ಲಿ ಹಲಬರ್ಗಾ, ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ರೇಷ್ಮಾ ನಾಮದೇವ ವಿಷಯದ ಪರವಾಗಿ ಮಾತನಾಡಿ ಪ್ರಥಮ ಸ್ಥಾನ ಪಡೆದರೆ ಮತ್ತು , ಮಂದಕನಳ್ಳಿ ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಗಣೇಶ ಸಂಗಯ್ಯ ವಿಷಯದ ವಿರೋಧವಾಗಿ ಮಾತನಾಡಿ ಪ್ರಥಮ ಸ್ಥಾನ ಗಳಿಸಿದರು. ಶೃತಿ ಗುತ್ತೆಪ್ಪ (ಸರಕಾರಿ ಪದವಿ ಪೂರ್ವ ಕಾಲೇಜು, ಮಂದಕನಳ್ಳಿ) ವಿಷಯದ ಪರವಾಗಿ ಮಾತನಾಡಿ ದ್ವಿತೀಯ ಸ್ಥಾನ, ಮತ್ತು ಕರುಣಾ ನಾಗಶೆಟ್ಟಿ, (ಸಿದ್ದಾರ್ಥ ಪದವಿ ಪೂರ್ವ ಕಾಲೇಜು, ಬೀದರ ) ವಿಷಯದ ವಿರೋಧವಾಗಿ ಮಾತನಾಡಿ ದ್ವಿತೀಯ ಸ್ಥಾನ ಪಡೆದರು.ಸಹಕಾರ ಚಳುವಳಿ ಮತ್ತು ಯುವ ನಾಯಕತ್ವ ಕುರಿತ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಆದರ್ಶ ರಾಜಕುಮಾರ (ಮಹರ್ಷಿ ದಯಾನಂದ ಸರಸ್ವತಿ ಪ್ರೌಢಶಾಲೆ , ಭಾಲ್ಕಿ -ಪ್ರಥಮ), ಸುಜಾತ ಅಶೋಕ (ಅಕ್ಕಮಹಾದೇವಿ ಕನ್ಯಾ ಪ್ರೌಢಶಾಲೆ, ಭಾಲ್ಕಿ -ದ್ವಿತೀಯ),ಬೀದರ ಹೀರಾಲಾಲ ಪನ್ನಾಲಾಲ ಪ್ರೌಢಶಾಲೆಯ ಅಂಕಿತಾ ಸ್ವಾಮಿದಾಸ (ತೃತೀಯ) ಸ್ಥಾನ ಪಡೆದಿದ್ದಾರೆ.
ಬೀದರ ಜಿಲ್ಲಾ ಸಹಕಾರ ಯೂನಿಯನ್ನಿನ ಅಧ್ಯಕ್ಷ ಪರಮೇಶ್ವರ ಮುಗಟೆ , ಸರಸ್ವತಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಹುಲಸೂರೆ, ಉಪನ್ಯಾಸಕರಾದ ಅಕ್ಕನಾಗಮ್ಮ, ಸಿದ್ದಾರ್ಥ ಪದವಿ ಕಾಲೇಜ, ಬೀದರ ಜಗನ್ನಾಥ ಬಡಿಗೇರ ಸಹಾಯಕ ಪ್ರಾಧ್ಯಾಪಕರು ಸಿದ್ದಾರ್ಥ ಪ.ಪೂರ್ವ ಕಾಲೇಜು, ಬೀದರ, ಜಿ.ಟಿ. ಗಣಪೂರಕರ ಪ್ರಾಂಶುಪಾಲರು, ಅಂಬೇಡ್ಕರ ಪ.ಪೂರ್ವ ಕಾಲೇಜು,ಸುಬ್ರಮಣ್ಯ ಪ್ರಭು, ನಿರ್ದೇಶಕರು, ಸಹಾರ್ದ ತರಬೇತಿ ಕೇಂದ್ರ, ನೌಬಾದ ಅವರು ಉಪಸ್ಥಿತರಿದ್ದರು. ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ನೆನಪಿನ ಕಾಣಿಕೆ , ಬೆಳ್ಳಿ ಪದಕ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಸ್ವಾಗತ ಹೆಚ್. ಆರ್. ಮಲ್ಲಮ್ಮ ಮುಖ್ಯಕಾರ್ಯನಿರ್ವಹಣಾಧಿಕಾರಿ ಬೀದರ ಜಿಲ್ಲಾ ಸಹಕಾರ ಯೂನಿಯನ್ನಿನ ಜಿಲ್ಲಾ ಸಹಕಾರ ಶಿಕ್ಷಕರಾದ ಮಾರುತಿ ಅವರು ಕಾರ್ಯಕ್ರಮ ನಡೆಸಿಕೊಟ್ಟರು.