ಘಾಟಬೋರಳ: ಶ್ರೀ ಶಂಕರಲಿಂಗ ದೇವಸ್ಥಾನದ ಜಾತ್ರಾ ಮಹೋತ್ಸವ
ಹುಮನಾಬಾದ್:ಸೆ.3: ತಾಲ್ಲೂಕಿನ ಘಾಟಬೋರಳ ಗ್ರಾಮದ ಐತಿಹಾಸಿಕ, ಶ್ರೀ ಶಂಕರಲಿಂಗ ದೇವಸ್ಥಾನದ ಜಾತ್ರಾ ಮಹೋತ್ಸವ ಮತ್ತು ನೂತನ ರಥೋತ್ಸವ ಸಮಾರಂಭ ಇಂದಿನಿಂದ ಜರುಗಲಿದೆ. ಮಂಗಳವಾರ ಇಂದು ಬೆಳಿಗ್ಗೆ ಗ್ರಾಮದಿಂದ ದೇವಸ್ಥಾನದ ವರೆಗೆ ಶ್ರೀ ಶಂಕರಲಿಂಗ ದೇವರ ಪಲ್ಲಕ್ಕಿ ಉತ್ಸವ ಜರುಗುವುದು, ನಂತರ ಮದ್ಯಾಹ್ನ 3 ರಿಂದ 6 ಗಂಟೆವರೆಗೆ ಜಂಗಿ ಕುಸ್ತಿಗಳು ನಡೆಯುವುದು. 4ರ ಬುಧವಾರದಂದು ಮುಂಜಾನೆ 9 ರಿಂದ 12 ಗಂಟೆ ವರೆಗೆ ಜಂಗಿ ಕುಸ್ತಿಗಳು ಜರುಗುವುದು. ನಂತರ 108 ಮುತೈದಯರಿಂದ ಉಡಿತುಂಬಲಾಗುವುದು ಬಳಿಕ ಶ್ರೀ ಶಂಕರಲಿಂಗ ದೇವಸ್ಥಾನದ ನೂತನ ರಥಕ್ಕೆ ಮೇಹಕರ್ ಹಾಗೂ ತಡೋಳಾ ಹಿರೇಮಠ ಸಂಸ್ಥಾನದ ಪ.ಬ್ರ. ಶ್ರೀ ರಾಜೇಶ್ವರ ಶಿವಾಚಾರ್ಯ ಮಹಾಸ್ವಾಮಿ ಹಾಗೂ ಹುಲಸೂರ ಸಂಸ್ಥಾನದ ಪೂಜ್ಯ ಶ್ರೀ ಶಿವಾನಂದ ಮಹಾಸ್ವಾಮಿಗಳು ಮತ್ತು ಬೇಮಳಖೇಡಾ ಮಠದ ಡಾ. ರಾಜಶೇಖರ ಶಿವಾಚಾರ್ಯರು ಹಾಗೂ ವಿಜಯಪುರದ ನಾಗರದಿನ್ನಿ ಶ್ರೀ ತಪೆÇೀನಿಷ್ಟ ಮಲ್ಲಿಕಾರ್ಜುನ ಮಹಾಸ್ವಾಮಿ, ಶಾಹಪುರದ ಶ್ರೀ ಮಹಾಂತ ಶಿವಯೋಗಿಗಳ ಅಮೃತ ಹಸ್ತದಿಂದ ಮಂಗಳಾರತಿ ಮಾಡುವು ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ನಂತರ ಮಹಾಪ್ರಸಾದ ಜರುಗುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಸದ್ಭಕ್ತರು ಈ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಶ್ರೀ ಶಂಕರಲಿಂಗ ದೇವರ ದರ್ಶನ ಪಡೆದು ಪುನೀತರಾಗಬೇಕು ಎಂದು ಶ್ರೀ ಶಂಕರಲಿಂಗ ದೇವಸ್ಥಾನದ ಅಡಳಿತ ಮಂಡಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.