ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ
ಬಸವನಬಾಗೇವಾಡಿ: ಸೆ.3:ಪಟ್ಟಣದ ಶ್ರೀ ಗುರುಕೃಪಾ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಚಾಣಕ್ಯ ಶಿಶುನಿಕೇತನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಯಿತು.
ಪಟ್ಟಣದ ಪ್ರಮಖ ಬೀದಿಗಳಲ್ಲಿ ಕೃಷ್ಣ-ರಾಧೆಯರ ವೇಷಭೂಷಣ ಧರಿಸಿದ ಮಕ್ಕಳ ಮೆರವಣಿಗೆ ಜರುಗಿತು. ನಂತರ ಶಾಲಾ ಆವರಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಡಾ. ವ್ಹಿ ಬಿ ವಜೀರಕರ ಮಾತನಾಡಿ, ಮಕ್ಕಳಲ್ಲಿ ಸಂಸ್ಕಾರ ಬೆಳೆಸಲು ಭಾರತೀಯ ಪರಂಪರೆಯ ಕಾರ್ಯಕ್ರಮಗಳಿಂದ ಸಾಧ್ಯವಾಗುತ್ತದೆ. ಮಕ್ಕಳ ಬಾಲ ಕೃಷ್ಣ -ರಾಧೆ ವೇಷ ಭೂಷಣ ನೋಡಿ ನಮಗೆ ಪ್ರತ್ಯಕ್ಷಾನುಭವದಂತೆ ಆಯಿತು ಎಂದರು.
ಅಧ್ಯಕ್ಷತೆಯನ್ನು ಶಾಲಾ ಸಂಸ್ಥೆಯ ಉಪಾಧ್ಯಕ್ಷ ಆರ್. ಆರ್. ಕಲ್ಲೂರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಸದಸ್ಯ ಪಂಚಾಕ್ಷರಿ ಕಾಳಹಸ್ತೇಶ್ವರಮಠ, ಶ್ರೀರಾಜಶೇಖರ ಕೆಂಭಾವಿ, ಬಸವರಾಜ ಗಚ್ಚಿನವರ ಆಗಮಿಸಿದ್ದರು.
ಈ ಕಾರ್ಯಕ್ರಮದಲ್ಲಿ 200 ಮಕ್ಕಳು ಕೃಷ್ಣ -ರಾಧೆ ವೇಷ ಭೂಷಣ ಧರಿಸಿ ಗಮನ ಸೆಳೆದರು. ಶಾಲೆಯ ಗುರುಮಾತೆಯರು ಸೇರಿ ಸುರಪುರ ಪಾಲಕರ ಮಗುವನ್ನು ತೊಟ್ಟಿಲಲ್ಲಿ ಹಾಕಿ ಜೋಗುಳ ಹಾಡುವುದರ ಮೂಲಕ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಶ್ರೀಗುರುಕೃಪಾ ವಿದ್ಯಾ ಸಂಸ್ಥೆಯ ಸರ್ವ ಸಿಬ್ಬಂದಿ, ವಿದ್ಯಾರ್ಥಿಗಳು, ಪಾಲಕರು ಇದ್ದರು.