ವೃತ್ತಿಗೆ ನಿವೃತ್ತಿ, ಪ್ರವೃತ್ತಿಗಲ್ಲ : ಕಿರಣಕುಮಾರ
ಬಾಲ್ಕಿ:ಸೆ.3: ವಯಸ್ಸಾದ ನಂತರ ಸೇವಾ ನಿವೃತ್ತಿ ಕಡ್ಡಾಯ, ಆದರೆ ನಮ್ಮ ಪ್ರವೃತ್ತಿಯು ಸದಾ ಜಾಗೃತವಾಗಿರುತ್ತದೆ ಎಂದು ಮಹಾತ್ಮಾಗಾಂಧಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಕಿರಣಕುಮಾರ ಭಾಟಸಾಂಗವಿ ಹೇಳಿದರು.
ಪಟ್ಟಣದ ರಾಮ ಮಂದಿರದ ಹತ್ತಿರದ ಬಾಲಾಜಿ ಕಂಪ್ಯೂಟರ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ವಯೋನಿವೃತ್ತ ಮುಖ್ಯಶಿಕ್ಷಕ ಶಿವಕುಮಾರ ಮೇತ್ರೆಯವರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶಿವಕುಮಾರ ಮೇತ್ರೆಯವರು ಸದಾ ಕ್ರಿಯಾಶೀಲರಾಗಿದ್ದು, ಅವರು ವೃತ್ತಿಯಿಂದ ನಿವೃತ್ತಿಹೊಂದಿದ್ದಾರೆ ಆದರೆ ಪ್ರವೃತ್ತಿಯಿಂದ ಅವರು ಸದಾ ಉತ್ಸುಕರಾಗಿದ್ದಾರೆ. ಅವರ ನಿವೃತ್ತಿ ಜೀವನ ಸದಾಕಾಲ ಹಸನ್ಮುಖಿಯಾಗಿರಲಿ ಎಂದು ಹಾರೈಸಿದರು.
ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ದತ್ತು ಕಾಟಕರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಅಶೋಕ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಬಾಲಾಜಿ ಬೈರಾಗಿ ಶಿವಕುಮಾರ ಮೇತ್ರೆ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಬಿಆರ್‍ಪ ಸಂತೋಷ ಮುದಾಳೆ, ಮುಖ್ಯಶಿಕ್ಷಕ ಸಂತೋಷಕುಮಾರ ವಾಡೆ, ರಾಜಕುಮಾರ ಪಾಲೂರೆ, ಮಲ್ಲಿಕಾರ್ಜುನ ಮಲ್ಲೇಶಿ, ಅಶೋಕ ಮಲ್ಲೇಶಿ, ಜಗನ್ನಾಥ ಸೋನೆ ಮತ್ತಿತರರು ಇದ್ದರು.