ಕಾಮ್ರೆಡ್ ಭೀಮಸಿಯವರ ಸಮ ಸಮಾಜದ ಕನಸು ಸಾಕಾರಕ್ಕೆ ಶ್ರಮಿಸಲು ಯು. ಬಸವರಾಜ ಕರೆ
ವಿಜಯಪುರ,ಸೆ.3:ಅವಿಭಜಿತ ವಿಜಯಪುರ ಜಿಲ್ಲೆಯ ಹೋರಾಟದ ಧ್ವನಿಯಾಗಿ ಮನೆ ಮಾತಾಗಿರುವ ಕಾಂ. ಭೀಮಸಿ ಕಲಾದಗಿ ಅವರು ಸಮ ಸಮಾಜದ ಕನಸುಗಾರರಾಗಿದ್ದರು. ಅವರ ಕನಸು ಮತ್ತು ಆಶಯಗಳ ಸಾಕಾರಕ್ಕಾಗಿ ಶ್ರಮಿಸಲು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಕಾಮ್ರೆಡ್ ಯು. ಬಸವರಾಜ ಕರೆ ನೀಡಿದರು.
ವಿಜಯಪುರ ನಗರದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ) ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಐವತ್ತು ವರ್ಷಗಳ ತಮ್ಮ ಹೋರಾಟದ ಜೀವನದಲ್ಲಿ ಎಂದೂ ತನಗಾಗಿ ಯೋಚಿಸಿದವರಲ್ಲ. ಜಿಲ್ಲೆಯ ರೈತರ, ಕಾರ್ಮಿಕರ, ಮಹಿಳೆಯರ, ದಲಿತರ ನೋವಿಗೆ ಮಿಡಿದವರು. ಜನ ಪ್ರತಿನಿಧಿಗಳನ್ನು ಹಾಗೂ ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸಲು ಹೆದರುತ್ತಿದ್ದ ಕಾಲದಲ್ಲಿ ಧೈರ್ಯದಿಂದ ಮುನ್ನುಗ್ಗಿ ಸಾವಿರಾರು ಜನರು ನ್ಯಾಯ ಪಡೆಯಲು ನೆರವಾಗಿದ್ದಾರೆ. ಜಿಲ್ಲೆಯ ಸಮಗ್ರ ನೀರಾವರಿ ಅಭಿವೃದ್ದಿಗಾಗಿ, ಕೃμÁ್ಣ ಭೀಮಾ ನದಿ ನೀರಿನ ಹಕ್ಕಿಗಾಗಿ, ರೈಲ್ವೆ ಸೌಲಭ್ಯಕ್ಕಾಗಿ ಸಾವಿರಾರು ಹೋರಾಟಗಳನ್ನು ನಡೆಸಿದ್ದಾರೆ ಎಂದರು.
ಅವರು ದಿಟ್ಟ, ನೇರ ನಡೆ ನುಡಿಯ ರೈತ ನಾಯಕ ಮಾತ್ರವೇ ಅಲ್ಲದೇ ಕಮ್ಯುನಿಸ್ಟ್ ನಾಯಕರು ಆಗಿದ್ದರು. ಹಮಾಲರು, ಪೌರ ಕಾರ್ಮಿಕರು ಸೇರಿದಂತೆ ಪ್ರತಿಯೊಂದು ಅಸಂಘಟಿತ ಕಾರ್ಮಿಕರು ಸಂಘಟನೆ ಆಗುವಂತೆ ಶ್ರಮಿಸಿದ್ದಾರೆ ಎಂದು ಗುಣಗಾನ ಮಾಡಿದರು.
ಸಿಐಟಿಯು ರಾಜ್ಯ ಅಧ್ಯಕ್ಷೆ ಕಾಂ.ಎಸ್ ವರಲಕ್ಷ್ಮಿ ಅವರು ಮಾತಾನಾಡಿ, ಕಾಮ್ರೆಡ್ ಭೀಮಸಿ ಕಲಾದಗಿ ಅವರ ನಿಧನದಿಂದ ರಾಜ್ಯ ಒಬ್ಬ ಧೀಮಂತ ಹಾಗೂ ಅಪೂರ್ವ ನಾಯಕನನ್ನು ಕಳೆದುಕೊಂಡಿದೆ. ಬರಿಗಾಲಿನಲ್ಲೇ ಇಡೀ ಜೀವನ ಸವೆಸಿದ್ದಾರೆ. ಸರಳತೆ ಅನನ್ಯ ವ್ಯಕ್ತಿತ್ವದ ಹೋರಾಟಗಾರರ ನಿಧನದಿಂದ ಉಂಟಾಗಿರುವ ನಷ್ಟವನ್ನು ಸಾಮೂಹಿಕ ಪ್ರಯತ್ನದಿಂದ ಸರಿದೂಗಿಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ. ಕೇವಲ ಆರನೇ ತರಗತಿ ಮಾತ್ರ ಶಾಲಾ ಶಿಕ್ಷಣ ಪಡೆದಿದ್ದರೂ ಸಾರ್ವಜನಿಕ ಜೀವನದಲ್ಲಿ ಅಪರೂಪದ ಸಾಧನೆ ಮಾಡಿ ಮಾದರಿಯಾಗಿದ್ದರು. ಅವರು ಬಿಟ್ಟು ಹೋದ ಹೋರಾಟವನ್ನು ಎಲ್ಲರೂ ಮುನ್ನೆಡಿಸೋಣ ಎಂದು ಮನವಿ ಮಾಡಿದರು.
ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಅವರು ಮಾತಾನಾಡಿ, ಶರಣರ ಬಾಳನ್ನು ಮರಣದಲ್ಲಿ ನೋಡು ಎಂಬ ನಾಣ್ಣುಡಿಯಂತೆ ಯಾವುದೇ ರಾಜಕೀಯ ಅಧಿಕಾರ ಇಲ್ಲದಿದ್ದರೂ ಪೆÇಲೀಸ್ ವಂದನೆಯ ಅಂತಿಮ ಸಂಸ್ಕಾರ ಪಡೆದರು. ನ್ಯಾಯಕ್ಕಾಗಿ ಅವರು ಪೊಲೀಸ್ ದೌರ್ಜನ್ಯ ದ ವಿರುದ್ಧ ಜೀವನದುದ್ದಕ್ಕೂ ಹೋರಾಡಿದ ಭೀಮಸಿ ಅವರಿಗೆ ಸರ್ಕಾರಿ ಗೌರವ ಸಿಕ್ಕಿದ್ದು ಅವರ ಹೋರಾಟಕ್ಕೆ ಸಿಕ್ಕ ಮನ್ನಣೆಯಾಗಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರೈತ ಹಾಗೂ ಕಾರ್ಮಿಕ ಹೋರಾಟದಲ್ಲಿ ತೊಡಗುವ ಮೂಲಕ ಕಾಮ್ರೆಡ್ ಭೀಮಸಿ ಅವÀರ ಹೋರಾಟವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಹೊರಬೇಕು. ಜಿಲ್ಲೆ ಹಾಗೂ ನಾಡಿಗೆ ಅವರು ಕೊಟ್ಟ ಕೊಡುಗೆ ಮತ್ತು ಅಪೂರ್ಣ ವಾಗಿರುವ ನೀರಾವರಿ ಸೌಲಭ್ಯಗಳು ಪೂರ್ಣಗೊಂಡು ಶಾಶ್ವತ ಬರಗಾಲ ಮುಕ್ತ ಜಿಲ್ಲೆಯಾಗಿ ಅವಿಭಜಿತ ವಿಜಯಪುರ ಜಿಲ್ಲೆಯನ್ನು ರೂಪಿಸಲು ರಾಜ್ಯ ಮಟ್ಟದ ವಿಚಾರ ಸಂಕಿರಣದ ಮೂಲಕ ಚಾಲನೆ ನೀಡಬೇಕು ಎಂದು ನೆರೆದಿದ್ದ ಜನರಲ್ಲಿ ವಿನಂತಿಸಿದರು.
ಈ ಸಂದÀರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷು ಬಿ.ಎಸ್. ಸೊಪ್ಪಿನ, ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಎಂ. ಬಿ. ನಾಡಗೌಡ, ಶಾಂತ ಘಂಟಿ, ಬಿ.ಡಿ. ಪಾಟೀಲ ಪತ್ರಕರ್ತ ಅನಿಲ ಹೊಸಮನಿ, ಶ್ರೀನಾಥ ಪೂಜಾರಿ, ಭಗವಾನ ರೆಡ್ಡಿ, ಮಲ್ಲಿಕಾರ್ಜುನ ಯಂಡಿಗೇರಿ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಅಣ್ಣಾರಾಯ ಇಳಗೇರ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಲಕ್ಷ್ಮಣ ಹಂದ್ರಾಳ, ಜನವಾದಿ ಮಹಿಳಾ ಸಂಘಟನೆಯ ಮುಖಂಡೆ ಸುರೇಖಾ ರಜಪೂತ, ಡಿವೈಎಫ್‍ಐ ರಮೇಶ ತಳವಾg,À ಈರಣ್ಣ ಬೆಳುಂಡಗಿ, ಅಂಗನವಾಡಿ ಮುಖಂಡರಾದ ಸರಸ್ವತಿ ಮಠ, ಭಾರತಿ ವಾಲಿ, ಸುನಂದಾ ನಾಯಕ, ಅಕ್ಷರ ದಾಸೋಹ ನೌಕರರ ಮುಖಂಡರಾದ ಕಾಳಮ್ಮ ಬಡಿಗೇರ, ಸುಮಂಗಳಾ ಶೆಟ್ಟಿ, ಗ್ರಾಮ ಪಂಚಾಯತಿ ನೌಕರರ ಸಂಘದ ಅಯ್ಯನಗೌಡ, ಲಾಲಅಹ್ಮದ ಶೇಖ, ಚಂದ್ರಶೇಖರ ಹಾಗೂ ಜಿಲ್ಲೆಯ ಪ್ರಗತಿ ಪರ ಸಂಘಟನೆಯ ಮುಖಂಡರು ಸಾಹಿತಿಗಳು ಹಾಗೂ ಪಕ್ಷದ ಕಾರ್ಯಕರ್ತರು ಸೇರಿದಂತೆ ದಿ, ಭೀಮಸಿ ಕಲಾದಗಿ ಅವರ ಮಡದಿ ಮಕ್ಕಳು ಬಂಧುಗಳು ಹಾಗೂ ನೂರಾರು ಜನ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.