ಸಮಾಜದ ಬಗ್ಗೆ ಮಾತನಾಡೋಕೆ ನಾರಾಯಣ ಸ್ವಾಮಿಗೆ ನೈತಿಕತೆ ಇಲ್ಲ:ಬೆಣ್ಣೂರ್
ಚಿತ್ತಾಪುರ:ಸೆ.3: ಸಮಾಜದ ಬಗ್ಗೆ ಮಾತನಾಡಲು ಛಲವಾದಿ ನಾರಾಯಣಸ್ವಾಮಿಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಬೆಣ್ಣೂರಕರ್ ಅವರು ಕಿಡಿ ಕಾರಿದ್ದಾರೆ.
ಪಟ್ಟಣದ ದಲಿತ ಸಂಘರ್ಷ ಸಮಿತಿಯ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಖರ್ಗೆ ಕುಟುಂಬದವರಿಂದ ಸಮಾಜದಲ್ಲಿ ಗುರುತಿಸಿಕೊಂಡಿರುವ ಛಲವಾದಿ ನಾರಾಯಣಸ್ವಾಮಿ ಅವರು ನಮ್ಮ ಸಮಾಜಕ್ಕೆ ಮತ್ತು ಸಮುದಾಯಕ್ಕೆ ಯಾವುದೇ ಕೊಡುಗೆ ಕೊಟ್ಟಿಲ್ಲ ಸಮಾಜದ ಪರವಾಗಿ ಇವರು ಯಾವುದೇ ಹಾರಾಟ ಮಾಡಿಲ್ಲ,ಇವರು ಬಿಜೆಪಿ ಪಕ್ಷದಲ್ಲಿ ಒಂದು ಸ್ಥಾನವನ್ನು ಪಡೆದಿರುವ ಮಾತ್ರಕ್ಕೆ ಖರ್ಗೆ ಕುಟಂಬದವರ ವಿರುದ್ದವಾಗಿ ಮಾತನಾಡುವುದು ಸರಿಯಲ್ಲ.
ಬುದ್ದಿ ವಿಹಾರ ಎನ್ನುವುದು ಖರ್ಗೆ ಅವರ ಒಡೆತನದ್ದು ಎಂದು ಖರ್ಗೆ ಅವರು ಎಲ್ಲಿಯೂ ಹೆಳಿಕೊಂಡಿಲ್ಲ ಅಲ್ಲಿ ಸರ್ವ ಜನಾಂಗದವರು ಆಗಮಿಸಿ ಪ್ರತಿದಿನ ಧ್ಯಾನ ಮಾಡುವ ಸ್ಥಳವಾಗಿದೆ.
ಇದು ಸಮುದಾಯದ ಒಂದು ಟ್ರಸ್ಟ್ ಇರುವುದರಿಂದ ಆ ಟ್ರಸ್ಟ್ ನಲ್ಲಿ ಖರ್ಗೆ ಅವರು ಇದ್ದಾರೆ ಹೊರತು ಅವರೇನು ಈ ವಿಷಯದಲ್ಲಿ ಅವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿಲ್ಲ ಇಂಥಹ ಒಬ್ಬ ನಾಯಕರ ಬಗ್ಗೆ ನಾರಾಯಣ ಸ್ವಾಮಿ ಅವರು ಇಲ್ಲ ಸಲ್ಲದ ಆರೋಪ ಮಾಡುವುದು ದಲಿತ ಸಂಘರ್ಷ ಸಮಿತಿ ಖಂಡಿಸುತ್ತದೆ.
ಇನ್ನು ಮುಂದೆ ಖರ್ಗೆ ಕುಟುಂಬದವರ ಬಗ್ಗೆ,ನಮ್ಮ ಸಮಾಜದ ಬಗ್ಗೆ ಮಾತನಾಡಿದರೆ ಮುಂಬರುವ ದಿನಗಳಲ್ಲಿ ಛಲವಾದಿ ನಾರಾಯಣಸ್ವಾಮಿ ಅವರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕ ಸಂಚಾಲಕ ಲೋಹಿತ್ ಮುದ್ದುಡಗಿ,ನಗರ ಸಂಚಾಲಕ ಬಸವಾಜ ಮುಡಬೂಳಕರ್ ಇದ್ದರು.