ಶ್ರೀಶೈಲಕ್ಕೆ ತೆರಳಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು
ವಾಡಿ:ಸೆ.3: ಶ್ರಾವಣ ಮಾಸದ ಪ್ರಯುಕ್ತ ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನಕ್ಕೆ ತೆರಳಿದ್ದ ಚಿತ್ತಾಪುರ ತಾಲ್ಲೂಕಿನ ಹಣ್ಣಿಕೇರಾ ಗ್ರಾಮದ ವ್ಯಕ್ತಿಯೊಬ್ಬ ಅಲ್ಲಿಯೇ ಹೃದಯಘಾತದಿಂದ ಮೃತಪಟ್ಟ ಘಟನೆ ರವಿವಾರ ಮಧ್ಯಾಹನ ಜರುಗಿದೆ. 62 ವರ್ಷದ ರಾಚಪ್ಪ ತಂ ಬಸ್ಸಪ್ಪ ಸಜ್ಜನಶೆಟ್ಟಿ ಮೃತ ದುರ್ದೈವಿಯಾಗಿದ್ದಾರೆ.
ಜೆಸ್ಕಾಂ ಇಲಾಖೆ ಗುತ್ತಿಗೆದಾರರಾಗಿದ್ದ ಇವರು ಶನಿವಾರ ಶ್ರೀಶೈಲಕ್ಕೆ ಸ್ನೇಹಿತರ ಜತೆ ತೆರಳಿದ್ದರು. ಸ್ನಾನ ಮಾಡಿ ದರ್ಶನಕ್ಕೆ ಸಿದ್ಧತೆ ನಡೆಸುತ್ತಿದ್ದ ವೇಳೆ ಎದೆನೋವು ಸಂಭವಿಸಿದ್ದರಿಂದ ರೂಮಿನಲ್ಲಿಯೇ ಉರಳಿ ಬಿದಿದಾನೆ. ನಂತರ ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಮೃತರಿಗೆ ಪತ್ನಿ ಮಲ್ಲಮ್ಮ ಮೂವರು ಪುತ್ರರು ಹಾಗೂ ಓರ್ವ ಪುತ್ರಿ ಇದ್ದಾರೆ. ಅಂತ್ಯಕ್ರಿಯೆ ಸೋಮವಾರ ಮಧ್ಯಾಹ್ನ 1 ಗಂಟೆಗೆ ಸ್ವಗ್ರಾಮ ಹಣ್ಣಿಕೇರ ಗ್ರಾಮದಲ್ಲಿರುವ ಸ್ವಂತ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.