ಗಣೇಶ ಚತುರ್ಥಿ-ಈದ್ ಮಿಲದ್ ಸೌಹಾರ್ದತೆಯಿಂದ ಆಚರಿಸಿ
ವಾಡಿ:ಸೆ.3: ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬವನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಶಹಾಬಾದ್ ಡಿವೈಎಸ್ಪಿ ಶಂಕರಗೌಡ ಪಾಟೀಲ ಹೇಳಿದರು.
ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ನಬಿ ಹಬ್ಬದ ನಿಮಿತ್ತ ಆಯೋಜಿಸಿದ್ದ ಶಾಂತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಗಣೇಶ ಉತ್ಸವ, ಈದ್ ಮಿಲಾದ್ ಹಾಗೂ ಕಲ್ಯಾಣ ಕರ್ನಾಟಕ ಉತ್ಸವಗಳು ಒಟ್ಟಿಗೆ ಬಂದಿರುವುದರಿಂದ ಪೆÇಲೀಸ್ ಇಲಾಖೆಗೆ ಹೆಚ್ಚಿನ ಒತ್ತಡ ಇರುತ್ತದೆ. ಸಾರ್ವಜನಿಕರು ಯಾವುದೇ ರೀತಿಯಲ್ಲಿ ಕಾನೂನು ಉಲ್ಲಂಘನೆ ಮಾಡದೆ ಶಾಂತಿ ಸೌಹಾರ್ದತೆಯಿಂದ ಹಬ್ಬಗಳು ಆಚರಿಸುವ ಮೂಲಕ ವಾಡಿಯಿಂದ ಸೌಹಾರ್ದತೆ ಸಂದೇಶ ಸಾರಬೇಕು ಎಂದು ಹೇಳಿದರು.
ಸಾರ್ವಜನಿಕರು ಪರಿಸರ ಸ್ನೇಹಿ ಗಣೇಶ ಪ್ರತಿμÁ್ಠಪಿಸಿ ಪರಿಸರ ಸಂರಕ್ಷಣೆ ಮಾಡಬೇಕು. ಪಿಒಪಿಯಿಂದ ಮಾಡಿದ ಗಣೇಶ ಮೂರ್ತಿಗಳಿಗೆ ಬಳಸುವ ರಾಸಾಯನಿಕ ಯುಕ್ತ ಬಣ್ಣಗಳಿಂದ ಪರಿಸರದ ಮೇಲೆ ಅನೇಕ ರೀತಿಯ ದುಷ್ಪರಿಣಾಮಗಳು ಉಂಟುಮಾಡುತ್ತದೆ. ಆದ್ದರಿಂದ ನಾವೇಲ್ಲರೂ ಪರಿಸರ ಸ್ನೇಹಿ ಮಣ್ಣಿನಿಂದ ತಯಾರಿಸಿದ ಹಾಗೂ ನೈಸರ್ಗಿಕ ಬಣ್ಣಗಳನ್ನು ಬಳಸಿದ ಗಣೇಶ ಮೂರ್ತಿಗಳನ್ನು ಪ್ರತಿμÁ್ಠಪಿಸುವ ಮೂಲಕ ನಮ್ಮ ಪರಿಸರ ಸಂರಕ್ಷಣೆ ಮಾಡಬೇಕು ಎಂದು ಹೇಳಿದರು.
ಚಿತ್ತಾಪುರ ಸಿಪಿಐ ಚಂದ್ರಶೇಖರ ತಿಗಡಿ ಮಾತನಾಡಿ, ಗಣಪತಿ ಕೂರಿಸುವವರು ಸಂಭಂದಪಟ್ಟ ಇಲಾಖೆಗಳಿಂದ ಪರವಾನಿಗೆ ಪಡೆಯಬೇಕು. ಮಳೆಗಾಲ ಆಗಿದ್ದರಿಂದ ವಿದ್ಯುತ್ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚು ಇರುತ್ತದೆ. ವಿದ್ಯುತ್ ಸಂಪರ್ಕ ಕುರಿತು ಜಾಗೃತಿ ವಹಿಸಿ ಯಾವುದೇ ಅವಘಡ ಸಂಭವಿಸದಂತೆ ಎಚ್ಚರ ವಹಿಸಬೇಕು. ಪುರಸಭೆ ಅಧಿಕಾರಿಗಳು ಪಟ್ಟಣದ ನೈರ್ಮಲ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು. ಜೆಸ್ಕಾಂ ಇಲಾಖೆ ಅಧಿಕಾರಿಗಳು ವಿದ್ಯುತ್ ಸಮಸ್ಯೆ ಆಗದಂತೆ ಹಾಗೂ ಸಾರ್ವಜನಿಕ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸಬೇಕು ಎಂದು ತಿಳಿಸಿದರು.
ಪಿಎಸ್‍ಐ ಕೆ. ತಿರುಮಲೇಶ, ಪುರಸಭೆ ಅಧಿಕಾರಿ ಬಸವರಾಜ ಪೂಜಾರಿ, ಜೆಸ್ಕಾಂ ಇಲಾಖೆಯ ಜೆಇ ರಾಜು ಬಿರಾದಾರ, ಮುಖಂಡರಾದ ನಾಗೇಂದ್ರ ಜೈಗಂಗಾ, ವೀರಣ್ಣ ಯಾರಿ, ಬಾಬುಮಿಯ್ಯ, ಮಹ್ಮದ್ ಅಶ್ರಫ್ ಖಾನ್, ಪೃಥ್ವಿರಾಜ್ ಸೂರ್ಯವಂಶಿ, ರಮೇಶ ಬಡಿಗೇರ, ಶರಣಬಸು ಶಿರೂರುಕರ, ರಾಜು ಒಡೆಯರಾಜ, ಸಿದ್ದು ಪೂಜಾರಿ, ಸೂರ್ಯಕಾಂತ ರದ್ದೆವಾಡಿ, ರವಿ ಕಾರಬಾರಿ, ರಾಜು ಮುಕ್ಕಣ ,ರಿಚ್ಚರ್ಡ ಮರೆಡ್ಡಿ, ಸುಶೀಲ ವರ್ಮಾ, ಶಿವಪ್ಪ ಮುಂಡರ್ಗಿ, ರಾಹುಲ ಮೇನಗಾರ, ಜಗತಸಿಂಘ ರಾಠೋಡ ಸೇರಿದಂತೆ ಹಲವರು ಮುಖಂಡರು ಭಾಗವಹಿಸಿದ್ದರು.