ಇಂಗ್ಲೀಷ್ ವ್ಯಾಕರಣ ಸಪ್ತಾಹ
ಕಲಬುರಗಿ:ಸೆ.3:ಸರಕಾರಿ ಪದವಿ ಪೂರ್ವ ಕಾಲೇಜು ಕೆಕೆ0014 (ಒPಊS) ಸುಪರ್ ಮಾರ್ಕೇಟ್ ಕಲಬುರಗಿ ಜಿಲ್ಲೆಯ “ಪಿ.ಯು.ಸಿ. ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ವ್ಯಾಕರಣ ಸಪ್ತಾಹ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಪ್ರಹ್ಲಾದ ಭುರ್ಲಿ ಪ್ರಾಚಾರ್ಯರು ರಮಾಬಾಯಿ ಜಹಾಗಿರದಾರ (ಆರ್.ಜೆ) ಪದವಿ ಪೂರ್ವ ಕಾಲೇಜು ಕಲಬುರಗಿ ಉದ್ಘಾಟಿಸಿದರು.
ಇಂಗ್ಲೀಷ್ ಭಾಷೆ ತುಂಬಾ ಸರಳವಿದೆ, ಮನಸ್ಸು ಕೊಟ್ಟು ಓದಿದ್ದಲ್ಲಿ ಯಶಸ್ವಿ ಕಾಣಬಹುದು ಎಂದು ಹೇಳಿದರು. ಅದೇ ರೀತಿ ವಿಜ್ಞಾನ ವಿಷಯದಲ್ಲಿ ಈ ತರಹದ ಕಾರ್ಯಕ್ರಮ ಮಾಡಿ ಎಂದು ಸಲಹೆ ಕೊಟ್ಟರು. ಈ ಕಾರ್ಯಕ್ರಮ ಏಳು ದಿನಗಳ ವರೆಗೆ ನಡೆಯುತ್ತದೆ. ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಶ್ರೀ ಶಂಶುದ್ದಿನ್ ಪಟೇಲ್ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ಈ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕೆಂದು ತಿಳಿಸಿದರು.
ಡಾ|| ರಾಜೇಂದ್ರ ದೊಡ್ಡಮನಿ ನಿರೂಪಿಸಿದರು, ಶ್ರೀಮತಿ ಸಂಗೀತ ಕಪೂರ ವಂದಿಸಿದರು, ಹಿರಿಯ ಉಪನ್ಯಾಸಕರಾದ ಶ್ರೀ ಅಶೋಕ ತಳಕೇರಿ, ದೇವಿದಾಸ ಪವಾರ್, ನಾಗಪ್ಪ, ಶಿವಕುಮಾರ್, ಮೇತ್ರೆ, ಸುಭಾಷ್, ಜ್ಯೋತಿ, ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳು ಉಪಸ್ಥಿತರಿದ್ದರು.