ವಿಶ್ವ ಜಾನಪದ ದಿನಾಚರಣೆ
ಕಲಬುರಗಿ,ಸೆ.2-ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾ ಘಟಕ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಹ ಯೋಗದೊಂದಿಗೆ ಕನ್ನಡ ಭವನದಲ್ಲಿ ವಿಶ್ವ ಜಾನಪದ ದಿನಾಚರಣೆ ಆಚರಿಸಲಾಯಿತು.
ನಗರ ಪೆÇಲೀಸ್ ಆಯುಕ್ತÀ ಡಾ.ಶರಣಪ್ಪ ಢಗೆ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆ ಮಾಡಿ, ಜಾನಪದ ಕಲೆ ಗ್ರಾಮೀಣ ಸೊಗಡು ಅದನ್ನು ಉಳಿಸಿ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕಾಗಿದೆ. ಕಾರ್ಯಕ್ರಮದಲ್ಲಿ ಜಾನಪದ ಹಾಡುಗಳನ್ನು ಕೇಳಿ ಸಂತೋಷವಾಯಿತು ಎಂದರು.
ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರು ಜಾನಪದ, ಬಯಲಾಟ ಪದಗಳನ್ನು ಹಾಡಿ ಕೇಳುಗರ ಮನ ತಣಿಸಿದರು. ಕಲಾವಿದರಿಗೆ ಜಾನಪದ ಪರಿಷತ್ತು ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಹಿರಿಯ ಸಾಹಿತಿ ಎ.ಕೆ.ರಾಮೇಶ್ವರ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಯುವ ನಾಯಕ ಶರಣಗೌಡ ಅಲ್ಲಮಪ್ರಭು ಪಾಟೀಲ, ಡಾ.ವಿಶಾಲಾಕ್ಷಿ ಕರಡ್ಡಿ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ಆಗಮಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಜಾನಪದ ಪರಿಷತ್ ಜಿಲ್ಲಾ ಅಧ್ಯಕ್ಷ ಸಿ.ಎಸ್.ಮಾಲಿ ಪಾಟೀಲ ವಹಿಸಿದ್ದರು.
ರೇಣುಕಾ.ಎಸ್ ಸ್ವಾಗತಿಸಿದರು. ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಧರ್ಮಣ್ಣ ಧನ್ನಿ ವಂದಿಸಿದರು. ಡಾ.ಹಣಮಂತ್ರಾಯ ರಾಂಪೂರೆ, ಭಾನುಕುಮಾರ ಗಿರೇಗೋಳ, ಡಾ.ಕೆ.ಎಸ್.ಬಂಧು, ಶಿವರಾಜ ಅಂಡಿಗಿ ಹಾಗೂ ಡಿ.ಪಿ.ಸಜ್ಜನ ಇದ್ದರು.