ಯಲ್ಲಾಲಿಂಗ ಮಹಾರಾಜರ ಪುರಾಣ ಮಂಗಲೋತ್ಸವ 9ಕ್ಕೆ
ಕಲಬುರಗಿ: ಸೆ.3:ಭವಾನಿನಗರದ ಶ್ರೀ ಗುರು ಚನ್ನವೀರೇಶ್ವರ ವಿರಕ್ತ ಮಠದಲ್ಲಿ ಶ್ರಾವಣ ಮಾಸದ ನಿಮಿತ್ತ ತಿಂಗಳ ಪರ್ಯಂತ ಹಮ್ಮಿಕೊಂಡಿದ್ದ ಮುಗಳಖೋಡದ ಶ್ರೀ ಯಲ್ಲಾಲಿಂಗ ಮಹಾರಾಜರ ಮಹಾಪುರಾಣ ಮಂಗಲೋತ್ಸವ ಸೆ. 9ರಂದು ನಡೆಯಲಿದೆ ಎಂದು ಮಠದ ಸದ್ಭಕ್ತ ಮಂಡಳಿ ತಿಳಿಸಿದೆ.
ಈ ನಿಮಿತ್ತವಾಗಿಸೆ.5ರಿಂದ 9ರವರೆಗೂ ಮಠದ ಪೀಠಾಧಿಪತಿ ಶ್ರೀ ಗುರುಪಾದಲಿಂಗ ಶಿವಯೋಗಿಗಳ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸೆ.5ರಂದು ಬೆಳಗ್ಗೆ ಲಿಂ. ಶ್ರೀ ಗುರು ಚನ್ನವೀರ ಶಿವಯೋಗಿಗಳ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದ್ದು, ಶ್ರೀ ವೀರಭದ್ರ ಶಿವಾಚಾರ್ಯರು, ಗುರುಲಿಂಗ ಶಿವಾಚಾರ್ಯರು, ಸೋಮಶೇಖರ ಶಿವಾಚಾರ್ಯರು, ಚಂದ್ರಗುಂಡ ಶಿವಾಚಾರ್ಯರು ಪಾಲ್ಗೊಳ್ಳಿದ್ದು, ರಾತ್ರಿ 8.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮುಗಳಖೋಡದ ಶ್ರೀ ಡಾ. ಮುರುಘರಾಜೇಂದ್ರ ಶಿವಯೋಗಿಳು ದಿವ್ಯ ಸಾನ್ಯಿಧ್ಯ ವಹಿಸಲಿದ್ದು, ಯಳಸಂಗಿ ಶ್ರೀ ಪರಮಾನಂದ ಸ್ವಾಮೀಜಿ ಸಮ್ಮುಖ ಹಾಗೂ ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕಿ ಕನ್ನಿಜಾ ಫಾತಿಮಾ ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಸೆ.6ರಂದು ರಾತ್ರಿ 8.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಶ್ರೀಶೈಲ್ ಸಾರಂಗ ಮಠದ ಜಗದ್ಗುರು ಡಾ. ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದು, ಸೇಡಂನ ಸದಾಶಿವ ಸ್ವಾಮೀಜಿ, ಮಾಡ್ಯಾಳನ ಮರುಳಸಿದ್ದ ಶಿವಾಚಾರ್ಯರು ಸಮ್ಮುಖ ಹಾಗೂ ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿ ಹಲವಾರು ಗಣ್ಯರು ಬಾಗವಹಿಸಲಿದ್ದಾರೆ.
ಸೆ.7ರಂದು ರಾತ್ರಿ 8.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಶ್ರೀನಿವಾಸ ಸರಡಗಿಯ ರೇವಣಸಿದ್ದ ಶಿವಾಚಾರ್ಯರು, ಶ್ರೀ ಶಾಂತವೀರ ಶಿವಾಚಾರ್ಯರು, ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಸೇಡಂ, ಶಾಸಕರಾದ ಅವಿನಾಶ ಜಾಧವ, ಎಂಎಲ್ಸಿಗಳಾದ ತಿಪ್ಪಣಪ್ಪ ಕಮಕನೂರ, ಡಾ. ಚಂದ್ರಶೇಖರ ಪಾಟೀಲ್, ಜಗದೇವ ಗುತ್ತೇದಾರ ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಸೆ.8ರಂದು ಬೆಳಗ್ಗೆ 7ಕ್ಕೆ ಜಂಗಮ ವಟುಗಳಿಗೆ ಅಯ್ಯಾಚಾರ ಹಾಗೂ ಲಿಂಗದೀಕ್ಷೆ ನಡೆಯಲಿದ್ದು, ಅಂಜೆಜೋಗಾಯಿ ಶ್ರೀ ಶಂಭುಲಿಂಗ ಶಿವಾಚಾರ್ಯರು, ಶ್ರೀ ಗುರುಮೂರ್ತಿ ಶಿವಾಚಾರ್ಯರು ಪಾಲ್ಗೊಳಲಿದ್ದಾರೆ. ರಾತ್ರಿ 8.30ಕ್ಕೆ ೀಠಾಧಿಪತಿ ಶ್ರೀ ಗುರುಪಾದಲಿಂಗ ಶಿವಯೋಗಿಗಳ ನೇತೃತ್ವದಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಡಾ. ರಾಜಶೇಖರ ಶಿವಾಚಾರ್ಯರು, ಶ್ರೀ ಶಿವಮೂರ್ತಿ ಶಿವಾಚಾರ್ಯರು, ಶ್ರೀ ಶಿವಲಿಂಗ ಮಹಸ್ವಾಮೀಜಿ, ಶ್ರೀ ಕೆಂಚಬಸವೇಶ್ವರ ಶಿವಾಚಾರ್ಯರು ಹಾಗೂ ಶಾಸಕ, ಕೆಕೆಆರ್‍ಡಿಬಿ ಅಧ್ಯಕ್ಷ ಡಾ. ಅಜಯಸಿಂಗ್, ಬಸವರಾಜ ಮತ್ತಿಮೂಡ ಸೇರಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಸೆ.9ರಂದು ಮುಗಳಖೋಡ ಯಲ್ಲಾಲಿಂಗೇಶ್ವರ ಪುರಾಣ ಮಂಗಲೋತ್ಸವ ಹಾಗೂ ೀಠಾಧಿಪತಿ ಶ್ರೀ ಗುರುಪಾದಲಿಂಗ ಶಿವಯೋಗಿಗಳ ತುಲಾಭಾರ ಕಾರ್ಯಕ್ರಮ ನಡೆಯಲಿದ್ದು, ಮಾದನ ಹಿಪ್ಪರಗಾದ ಶ್ರೀ ಅಭಿನವ ಶಿವಲಿಂಗ ಮಹಾಸ್ವಾಮೀಜಿ, ಮಂಠಾಳ ಅಭಿನವ ಚನ್ನಬಸವ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ಚರಲಿಂಗ ಮಹಾಸ್ವಾಮೀಜಿ, ಶಿವಪ್ರಸಾದ ದೇವರು ಭಾಗವಹಿಸಲಿದ್ದಾರೆ.
ಅಂದು ಬೆಳಗ್ಗೆ 11 ಗಂಟೆಗೆ ಚನ್ನವೀರ ನಗರದಿಂದ ಪಲ್ಲಕ್ಕಿಯ ಶ್ರೀಮಠದಿಂದ ಯಲ್ಲಾಲಿಂಗ ಮಹಾರಾಜರ ಮಹಾಪುರಾಣ ಮಂಗಲ ಮಹೋತ್ಸವ ಮತ್ತು ಶ್ರೀ ಚನ್ನವೀರೇಶ್ವರರ ಭಾವಚಿತ್ರದೊಂದಿಗೆ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ.