ಬಿ.ವಿ. ಭೂಮರಡ್ಡಿ ಪದವಿ ಮಹಾವಿದ್ಯಾಲಯದಲ್ಲಿ “ಐತಿಹಾಸಿಕ ಪರಂಪರೆ ಉಳಿಸಿ” ಕಾರ್ಯಕ್ರಮ
ಬೀದರ :ಸೆ.3: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಿ.ವಿ. ಭೂಮರಡ್ಡಿ ಪದವಿ ಮಹಾವಿದ್ಯಾಲಯ ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ ವತಿಯಿಂದ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಪಿ. ವಿಠ್ಠಲ ರಡ್ಡಿಯವರು ಮಾತನಾಡುತ್ತಾ ಐತಿಹಾಸಿಕ ಪರಂಪರೆಯಲ್ಲಿ ಸ್ಮಾರಕಗಳು ಕೋಟೆಗಳು ಹಾಗೂ ಹಳೆಯ ಶಿಲಾ ಶಾಸನಗಳು ರಕ್ಷಣೆ ಮಾಡುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಹಾಗೂ ದಕ್ಷಿಣ ಭಾರತದ ತಿರುಪತಿ, ನಾಗಾರ್ಜುನಕೊಂಡ ಹಾಗೂ ಹಂಪಿಯ ಸ್ಮಾರಕಗಳು ಮದುರೈ ಮೀನಾಕ್ಷಿ, ಕಂಚಿ ಕಾಮಾಕ್ಷಿ, ಮೈಸೂರು ಚಾಮುಂಡಿ ಇಂತಹ ಮಹತ್ವಪೂರ್ಣ ದೇವಾಲಯಗಳ ಸೌಂದರ್ಯವನ್ನು ಕಾಪಾಡುವುದು ಹಾಗೂ ಅಂದು ಶಿಲ್ಪಿ ಕೆತ್ತಿದ ಕಲೆ ಮುಂದಿನ ಪೀಳಿಗೆಗೆ ಆದರ್ಶವಾಗಿ ದಾರಿದೀಪವಾಗುವಂತೆ ಇತಿಹಾಸದ ಮಹತ್ವವನ್ನು ಅರಿಯಲು ಸಹಾಯವಾಗುತ್ತದೆ. ನಮ್ಮ ಭಾರತಕ್ಕೆ ವಿದೇಶಿ ಪ್ರವಾಸಿಗರು ಬಂದಾಗ ನಮ್ಮ ವೈಭವ ಕಂಡು ಅವರು ಬೆರಗಾಗುತ್ತಾರೆ ಹಾಗೂ ನಮ್ಮ ಐತಿಹಾಸಿಕ ಪರಂಪರೆ ದೇಶ ವಿದೇಶಗಳಲ್ಲಿ ಹರಿಡಿಸುತ್ತಾರೆ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗುತ್ತದೆ, ಆದ್ದರಿಂದ ತಾವೇಲ್ಲಾ ವಿದ್ಯಾರ್ಥಿಗಳು ಐತಿಹಾಸಿಕ ಪರಂಪರೆ ಉಳಿಸುವಲ್ಲಿ ತಮ್ಮನ್ನು ತಾವು ತೊಡಿಗಿಸಿಕೊಳ್ಳಬೇಕೆಂದು ನುಡಿದರು. ಡಾ. ಬಿ.ಆರ್. ಅಂಬೇಡ್ಕರ ಅವರು ಹೇಳಿದಂತೆ ದೇಶ ಸುತ್ತಿ ಕೋಶ ಓದಿ ನಾವು ಏನೇಲ್ಲಾ ಸಾಧಿಸಬಹುದೆಂದು ತಿಳಿಹೇಳಿದರು.
ವೇದಿಕೆಯ ಮೇಲೆ ಅತಿಥಿಯಾಗಿ ಆಗಮಿಸಿದ ಮಹಾವಿದ್ಯಾಲಯದ ಉಪ ಪ್ರಾಂಶುಪಾಲರಾದ ಶ್ರೀ ಅನೀಲಕುಮಾರ ಅಣದೂರೆಯವರು ಮಾತನಾಡುತ್ತಾ ನಮ್ಮ ಐತಿಹಾಸಿಕ ಪರಂಪರೆ ವಿಶ್ವದಲ್ಲಿಯೇ ಅತ್ಯಂತ ಮಹತ್ವದ ಪರಂಪರೆ ಉದಾಹರಣೆ ಏಕಶಿಲೆಯ ಗೊಮ್ಮಟೇಶ್ವರ, ಬಿಜಾಪೂರದ ಗೋಲಗುಂಬಜ, ತಾಜಮಹಲ್, ಕೆಂಪುಕೋಟೆ, ಹಂಪೆಯ ಸ್ಮಾರಕಗಳು, ಕುತುಬ್‍ಮಿನಾರ್, ಹುಮಾಯುನ್ ಸಮಾಧಿ, ಸಿಂಕದರಾ ಮುಂತಾದ ಸ್ಮಾರಕಗಳು ನಮ್ಮ ಭವ್ಯ ಐತಿಹಾಸಿಕ ಪರಂಪರೆಯನ್ನು ಸೂಚಿಸುತ್ತವೆ. ಇವೆಲ್ಲ ಸ್ಮಾರಕ ರಕ್ಷಣೆ ನಮ್ಮೆಲ್ಲರ ಕರ್ತವ್ಯ ಎಂದು ಮಾರ್ಮಿಕವಾಗಿ ನುಡಿದರು.
ಕಾರ್ಯಕ್ರಮ ಆರಂಭದಲ್ಲಿ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಶಿವಲೀಲಾ ವೀರಯ್ಯಾ ಪ್ರಾಸ್ತವಿಕವಾಗಿ ನುಡಿದರು.
ಕಾರ್ಯಕ್ರಮ ಮೊದಲಿಗೆ ಶ್ರೀಮತಿ ಶೈಲಜ ಸಿದ್ಧವೀರ, ಶ್ರೀಮತಿ ಮೀನಾಕ್ಷಿ ಪಾಟೀಲ್, ಪ್ರಾರ್ಥನೆ ಗೀತೆ ಹಾಡಿದರೆ, ಶ್ರೀ ಬಸವರಾಜ ಬಿರಾದಾರ ನಿರೂಪಿಸಿದರೆ, ಶ್ರೀಮತಿ ವಚನಶ್ರೀ ಸ್ವಾಮಿ ಸ್ವಾಗತಿಸದರೆ, ಶ್ರೀ ಸಂದೀಪ ವನ್ನಾಳೆ ವಂದಿಸಿದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.