ಬಿ.ಎಸ್.ಗೋವಿಂದರಾಜುರಿಗೆ “ಡಾಕ್ಟರೇಟ್
ಕೋಲಾರ,ಸೆ.೩- ತಮಿಳುನಾಡಿನ ಏಷ್ಯಾ ಇಂಟರ್ನ್ಯಾಷನಲ್ ಕಲ್ಚರ್ ರೀಸರ್ಚ್ ಯೂನಿವರ್ಸಿಟಿಯು ಸಮಾಜ ಸೇವಕ ಕೋಲಾರ ನಗರದ ಬಿ.ಎಸ್.ಗೋವಿಂದರಾಜುರಿಗೆ “ಡಾಕ್ಟರೇಟ್ ಪ್ರಶಸ್ತಿ ನೀಡಿ ಗೌರವಿಸಿದೆ.
ಕೋಲಾರ ರೋಟರಿ ಕ್ಲಬ್ ಮಾಜಿ ಅಧ್ಯಕ್ಷರು, ಅಂತಾರಾಷ್ಟ್ರೀಯ ವಾಸವಿ ಕ್ಲಬ್ಸ್ ಮಾಜಿ ರಾಜ್ಯಪಾಲರು, ಕೋಲಾರ ವಾಸವಿ ಅನ್ನದಾನ ಸೇವಾ ಟ್ರಸ್ಟ್ ಅಧ್ಯಕ್ಷರು ಹಾಗೂ ಇನ್ನೂ ಹಲವಾರು ಸೇವಾ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬಿ.ಎಸ್.ಗೋವಿಂದರಾಜುರಿಗೆ ತಮಿಳುನಾಡಿನ ಹೊಸೂರಿನಲ್ಲಿ ನಡೆದ ಏಷ್ಯಾ ಇಂಟರ್‌ನ್ಯಾಷನಲ್ ಕಲ್ಚರ್ ರಿಸರ್ಚ್ ಯೂನಿವರ್ಸಿಟಿ ಸಮಾರಂಭದಲ್ಲಿ ಇವರ ಸಮಾಜ ಸೇವೆ ಹಾಗೂ ಮಾನವೀಯತೆಯನ್ನು ಗುರುತಿಸಿ “ಡಾಕ್ಟರೇಟ್ ಪ್ರಶಸ್ತಿ ನೀಡಿರುತ್ತಾರೆ