ದೇಶಾಭಿಮಾನ ಜಾಗೃತಗೊಳಿಸಿದ ಸಂಗೀತ ರಸ ಸಂಜೆ
ಬೀದರ:ಸೆ.3: ಜೀವನ ಪ್ರಕಾಶ ಕಲ್ಚರಲ್ ಆಯಿಂಡ್ ವೆಲ್‍ಫೇರ್ ಸೊಸೈಟಿಯು ಹಮ್ ಏಕ್ ಹೈ ಘೋಷವಾಕ್ಯದಡಿ ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಂಗೀತ ರಸ ಸಂಜೆ ಕಾರ್ಯಕ್ರಮ ಸಭಿಕರಲ್ಲಿ ದೇಶಾಭಿಮಾನ ಜಾಗೃತಗೊಳಿಸಿತು.
50ಕ್ಕೂ ಹೆಚ್ಚು ಕಲಾವಿದರ ಕಂಠಸಿರಿಯಿಂದ ಸುಮಧುರವಾಗಿ ಹೊರ ಹೊಮ್ಮಿದ ದೇಶ ಭಕ್ತಿ ಗೀತೆಗಳು ದೇಶದ ಬಗ್ಗೆ ಹೆಮ್ಮೆ, ಅಭಿಮಾನ ಮೂಡಿಸಿದವು.
ಕಲಾವಿದರಾದ ದಿಲೀಪ್ ಕಾಡವಾದ, ಶಿವಕುಮಾರ ಪಾಂಚಾಳ, ರೇಖಾ ಅಪ್ಪಾರಾವ್ ಸೌದಿ, ಜಸ್ಸಿ ಸೋನವನೆ, ಮಹೇಶ್ವರಿ ಪಾಂಚಾಳ, ಮಹೇಶಕುಮಾರ ಕುಂಬಾರ, ಪ್ರವೀಣ್ ಜಾನ್, ಜಾನ್ಸನ್ ಡೊಂಗರಗಿ, ಇಮ್ಯಾನುವೆಲ್ ಗಾದಗಿ, ರೇಣುಕಾ ಎನ್.ಬಿ, ಪವಿತ್ರಾ ಖಡ್ಕೆ, ಬಲರಾಮ ಪಾಂಚಾಳ, ಎಸ್ತೇರ್ ದಿಲೀಪ್, ಧೋಂಡಿರಾಮ, ಅಶೋಕ ರಾಜೇಶ್ವರಕರ್, ಸಾಕ್ಷಿ ಕರ್ಕರೆ, ಮಾನಸ ಪಾಂಚಾಳ, ಪೀಟರ್ ಮಾಳಗೆ, ಆದಿತ್ಯ ಪಾಂಚಾಳ, ಅಶ್ವಿನಿ ದೇವಿದಾಸ, ನೇಹಾ ರಾಜು, ದಿವ್ಯ ದಿಲೀಪ್, ಶಾರೋನ್ ಕರ್ಕರೆ ಮತ್ತಿತರರು ಪ್ರೇಕ್ಷಕರು ತಲೆದೂಗುವಂತೆ ಸುಶ್ರಾವ್ಯವಾಗಿ ದೇಶ ಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು.
ನಾಟ್ಯಶ್ರೀ ನೃತ್ಯಾಲಯದ ಕಲಾವಿದರು ದೇಶಭಕ್ತಿ ನೃತ್ಯ ಪ್ರದರ್ಶಿಸಿದರು. ಮಹಾರಾಷ್ಟ್ರದ ಸೋಲಾಪುರದ ಸ್ಟಾರ್ಸ್ ಆಫ್ ಮೆಲೊಡೀಸ್‍ನ ಡಾ. ಜಬ್ಬಾರ್ ಮುರ್ಷದ್ ಹಾಗೂ ಧನಂಜಯ್ ಅಂಬೇಡ್ಕರ್ ಅವರು ನಡೆಸಿಕೊಟ್ಟ ನೇರ ವಾದ್ಯಗೋಷ್ಠಿ ನೆರೆದವರ ಮನ ರಂಜಿಸಿತು.
ದೇಶ ಭಕ್ತಿ, ದೇಶ ಪ್ರೇಮ ಹೆಚ್ಚಿಸಲು, ವೇದಿಕೆ ಕಲ್ಪಿಸಿ ಜಿಲ್ಲೆಯ ಯುವ ಗಾಯಕರನ್ನು ಪೆÇ್ರೀತ್ಸಾಹಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸೊಸೈಟಿ ಅಧ್ಯಕ್ಷ ದಿಲೀಪ್ ಕಾಡವಾದ ಹೇಳಿದರು.
ನಿವೃತ್ತ ಸೈನಿಕರಾದ ಅಶೋಕಕುಮಾರ ಕರಂಜಿ, ಮಲ್ಲಿಕಾರ್ಜುನ ಹಳ್ಳಿಖೇಡ, ಶಿವರಾಜ ಮಡಗಿ, ಧನರಾಜ ಶರಣಪ್ಪ ಮತ್ತಿತರರನ್ನು ಸನ್ಮಾನಿಸಲಾಯಿತು.
ಕರ್ನಾಟಕ ಜಾನಪದ ಅಕಾಡೆಮಿಯ ಸದಸ್ಯ ವಿಜಯಕುಮಾರ ಸೋನಾರೆ, ಕರ್ನಾಟಕ ಪಶು ವೈದ್ಯಕೀಯ ವಿಶ್ವವಿದ್ಯಾಲಯದ ಅಧಿಕಾರಿ ಡಾ. ರಾಮಪ್ಪ ಎಚ್. ಕೋರವಾರ, ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಪಾಂಡಪ್ಪ ಮೇತ್ರೆ, ಖ್ಯಾತ ಗಾಯಕಿ ರೇಖಾ ಅಪ್ಪಾರಾವ್ ಸೌದಿ, ಹಿರಿಯ ಕಲಾವಿದ ಮಹೇಶಕುಮಾರ ಕುಂಬಾರ, ಸ್ವಾಮಿದಾಸ ಮುಖ್ಯ ಅತಿಥಿಯಾಗಿದ್ದರು.
ಎಸ್ತೇರ್ ದಿಲೀಪ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೈಮನ್ ಸೂರ್ಯವಂಶಿ ಸ್ವಾಗತಿಸಿದರು. ದೇವಿದಾಸ ಜೋಶಿ ನಿರೂಪಿಸಿದರು. ಸತೀಶ್ ಬಿರಾದಾರ ವಂದಿಸಿದರು.