ಬಯೋಕಾನ್ ಸಂಸ್ಥೆಯಿಂದ ಸಹ್ಯಾದ್ರಿಯಲ್ಲಿ ಉದ್ಯೋಗಮೇಳ
ಕೋಲಾರ,ಸೆ.೩- ಸಹ್ಯಾದ್ರಿ ಪದವಿ ಕಾಲೇಜು ಹಾಗೂ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಯಾಗಿರುವ ಬಯೋಕಾನ್ ಸಂಸ್ಥೆಯ ಸಹಯೋಗದಲ್ಲಿ ಕಾಲೇಜಿನ ಆವರಣದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿತ್ತು.
ಉದ್ಯೋಗ ಮೇಳಕ್ಕೆ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಉದಯ್ ಕುಮಾರ್ ಚಾಲನೆ ನೀಡಿ ಮಾತನಾಡಿ, ಈಗಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗದ ಅವಶ್ಯಕತೆ ತೀರಾ ಅನಿವಾರ್ಯವಾಗಿದ್ದು, ಈ ರೀತಿ ಉದ್ಯೋಗ ಮೇಳ ವನ್ನು ಆಯೋಜಿಸಿದಾಗ ಉದ್ಯೋಗಾ ಕಾಂಕ್ಷಿಗಳು ಇದರ ಸದುಪಯೋಗವನ್ನು ಪಡಿಸಿಕೊಳ್ಳಬೇಕು. ಸಹ್ಯಾದ್ರಿ ಕಾಲೇಜು ಇನ್ನು ಹೆಚ್ಚು ಹೆಚ್ಚು ಉದ್ಯೋಗ ಮೇಳಗಳನ್ನು ಮುಂದಿನ ದಿನಗಳಲ್ಲಿ ಆಯೋಜನೆ ಮಾಡಲಾಗುವುದೆಂದು ತಿಳಿಸಿದರು.
ಬಯೋಕಾನ್ ಸಂಸ್ಥೆಯ ವ್ಯವಸ್ಥಾಪಕ ಅಧಿಕಾರಿ ಪೂರ್ವೇಶ್ ಸಾಗರ್, ಮುತ್ತು ವೇಲ್, ಹಾಗೂ ಮಾನವ ಸಂಪನ್ಮೂಲ ಅಧಿಕಾರಿಗಳಾದ ಶರತ್, ಮಣಿ, ಉಪೇಂದ್ರ, ಮೋಹಿತ್ ಉಪಸ್ಥಿತರಿದ್ದರು.
೨೫೦ಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಆಗಮಿಸಿ ಮೌಖಿಕ ಸಂದರ್ಶನದಲ್ಲಿ ಪಾಲ್ಗೊಂಡು ಮುಂದಿನ ಹಂತಕ್ಕೆ ಉತ್ತೀರ್ಣರಾಗಿ ಹೋಗಿರುತ್ತಾರೆ. ಈ ಕಾರ್ಯಕ್ರಮವನ್ನು ಧನಲಕ್ಷ್ಮಿ ನಿರೂಪಿಸಿ, ಸಂಸ್ಥೆಯ ಪ್ರಾಂಶುಪಾಲ ಬಿ.ಬದ್ರಿನಾಥ್ ಸ್ವಾಗತಿಸಿದರು.