ಕೂಡ್ಲಿಗಿ : ಕರೆಂಟ್ ಶಾಕ್ ಗೆ – ಯುವಕ ಬಲಿ.
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಸೆ. 3 :- ಹೊಸ ನಿರ್ಮಾಣದ ಮನೆಗೆ ರೂಪ್ ಶೆಡ್ ಕಟ್ ಮಾಡುವ ಮಿಷನ್ ವೈಯರ್ ಹಿಡಿದುಕೊಂಡು ಮೀಟರ್ ಹತ್ತಿರ ಸಂಪರ್ಕ ಕೊಡಲು ಹೋದಾಗ ಆಕಸ್ಮಿಕ ಕರೆಂಟ್ ಹೊಡೆದು ಯುವಕನೋರ್ವ ಬಲಿಯಾದ ಘಟನೆ ಪಟ್ಟಣದ ಕೊಟ್ಟೂರು ರಸ್ತೆಯ ರಷಿದ್ ಶಾಮಿಲ್ ಹಿಂದೆ ಸೋಮವಾರ ಮಧ್ಯಾಹ್ನ ಜರುಗಿದೆ.
ಕೂಡ್ಲಿಗಿ ಪಟ್ಟಣದ 15ನೇ ವಾರ್ಡ್ ರಾಮನಗರದ ಕೂಲಿಯಿಂದ ಜೀವನ ಸಾಗಿಸುತ್ತಿದ್ದ ಪಿ. ಸೋಮಣ್ಣ (30)ಕರೆಂಟ್ ಶಾಕ್ ಗೆ ಬಲಿಯಾದ ಯುವಕನಾಗಿದ್ದಾನೆ.
ಈತನು ಪಟ್ಟಣದ ಕೊಟ್ಟೂರು ರಸ್ತೆಯ ರಷಿದ್ ಶಾಮಿಲ್ ಹಿಂದುಗಡೆ   ನಿರ್ಮಾಣ ಮಾಡುತ್ತಿರುವ ಅವರ ಸ್ವಂತ  ಹೊಸ ಮನೆಯ ರೂಪ್ ಶೀಟ್ ಕಟ್ ಮಾಡಲೆಂದು ಕಟ್ ಮಾಡುವ ಮಿಷನ್ ನ ವೈಯರ್ ನ್ನು ಮೀಟರ್ ಹತ್ತಿರ ಸಂಪರ್ಕ ಕೊಡಲು ಹೋದಾಗ ಮೀಟರ್ ನಲ್ಲಿ ಕರೆಂಟ್ ಶಾಕ್ ಆಗಿದ್ದು ಅಲ್ಲದೆ ಕೆಳಗೆ ಸಹ ನೀರಿನಿಂದ ತೇವಾಂಶದಿಂದ ಕೂಡಿದ್ದರಿಂದ ಬಹುಬೇಗನೆ ಕರೆಂಟ್ ಶಾಕ್ ಹೊಡೆದು ಕೆಳಗೆ ಬಿದ್ದಿದ್ದು ತಕ್ಷಣ ಆತನನ್ನು  ಕೂಡ್ಲಿಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾದರೂ ಯುವಕ ಸೋಮಣ್ಣ  ಬದುಕುಳಿಯದೆ ಮೃತಪಟ್ಟಿರುವ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ ಎಂದು ಮೃತನ ಸಹೋದರ ಮಾರುತಿ ನೀಡಿದ ಹೇಳಿಕೆಯಂತೆ ಕೂಡ್ಲಿಗಿ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.