ತಾನೇ ಸಾಕಿದ ಎತ್ತು ಇರಿತದಿಂದ ಮಹಿಳೆ ಸಾವು
ವಾಡಿ: ಸೆ.3:ತಾನೇ ಸಾಕಿದ್ದ ಎತ್ತಿನಿಂದ ತಿವಿತಕ್ಕೆ ಒಳಗಾಗಿ ಮಹಿಳೆಯೋರ್ವಳು ಮೃತಪಟ್ಟ ಘಟನೆ ಚಿತ್ತಾಪುರ ತಾಲ್ಲೂಕಿನ ತುನ್ನೂರು ಗ್ರಾಮದಲ್ಲಿ ಸೋಮವಾರ ಜರುಗಿದೆ.
ಕೃಷಿ ಮಹಿಳೆ ಮಲ್ಕವ್ವ ಗಂಡ ಬಸವಂತ ಹೊಸಮನಿ (56) ಮೃತ ಮಹಿಳೆಯಾಗಿದ್ದಾಳೆ. ಬುಧವಾರ ತನ್ನ ಎತ್ತು ಮೇವಿಸಲೆಂದು ಹೊಲಕ್ಕೆ ಹೋದಾಗ ಈ ದುರ್ಘಟನೆ ನಡೆದಿದೆ. ಏಕಾಏಕಿ ದಾಳಿ ಮಾಡಿದ ಎತ್ತು ಮಹಿಳೆಯ ಹೊಟ್ಟೆ ಭಾಗಕ್ಕೆ ಜೋರಾಗಿ ತಿವಿದು ಗಾಯಗೊಳಿಸಿತ್ತು. ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಮಹಿಳೆಯನ್ನು ಚಿಕಿತ್ಸೆಗಾಗಿ ಕಲ್ಬುರ್ಗಿ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗಿನ ಜಾವ ಮೃತಪಟ್ಟಿದ್ದಾಳೆ. ಮೃತ ಮಹಿಳೆಗೆ ಪತಿ ಬಸವಂತ ಹೊಸಮನಿ, ಇಬ್ಬರು ಪುತ್ರರು ಇದ್ದಾರೆ. ಸೋಮವಾರ ತುನ್ನೂರು ಗ್ರಾಮದ ಅವರ ಸ್ವಂತ ಜಮೀನಿನಲ್ಲಿ ಅಂತ್ಯಕ್ರೆ ನೆರವೇರಿತು.