ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ.ಸುಧಾಕರ್ ಬೇಸರ
ಕೋಲಾರ,ಸೆ,೩:ಇಂದಿನ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ೪ನೇ ಘಟಿಕೋತ್ಸವ ಕಾರ್ಯಕ್ರಮಕ್ಕೆ ಗೈರು ಹಾಜರಾಗಿರುವುದಕ್ಕೆ ನಿಖರವಾದ ಮಾಹಿತಿ ತಿಳಿದಿಲ್ಲ. ವಿವಿ ನಿಯೋಗವು ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ಬರುವುದಾಗಿ ಖಚಿತವಾದ ಭರವಸೆ ನೀಡಿದ್ದರು. ಅದರೆ ಭಾನುವಾರ ಮಧ್ಯಾಹ್ನದ ಮೇಲೆ ಬರುವುದಿಲ್ಲ ಎಂಬ ಮಾಹಿತಿ ತಿಳಿಯಿತು, ಮುಖ್ಯ ಮಂತ್ರಿಯ ವಿರುದ್ದ ಪ್ರಾಸಿಕ್ಯೋಷನ್‌ಗೆ ಅನುಮತಿ ನೀಡಿರುವ ವಿರುದ್ದ ರಾಜ್ಯದಲ್ಲಿ ನಡೆಯುತ್ತಿರುವ ಘಟನಾವಳಿಗಳ ಬಗ್ಗೆ ನಾವು ಸಹ ರಾಜ್ಯಪಾಲರ ಬಳಿ ನೋವು ವ್ಯಕ್ತ ಪಡೆಸಿದ್ದೇವು ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ೪ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮದ ನಂತರ ಮಾದ್ಯಮದವರೊಂದಿಗೆ ಅವರು ಮಾತನಾಡಿ ರಾಜ್ಯಪಾಲರು ಯಾವ ಕಾರಣಕ್ಕೆ ಬಂದಿಲ್ಲ ಎಂದು ಹೇಳಲು ಅಗದು, ನೀವು ಅಂದು ಕೊಂಡಂತೆ ಇರದೆ ಬೇರೆ ಕಾರಣ ಇರಬಹುದು, ಅದರೆ ನನಗೆ ನಿಖರವಾದ ಮಾಹಿತಿ ಇಲ್ಲ ಎಂದು ಸ್ವಷ್ಟ ಪಡೆಸಿದರು,
ಎತ್ತಿನ ಹೊಳೆ ಕುಡಿಯುವ ನೀರಿನ ಯೋಜನೆಗೆ ೧೨-೧೩ ಸಾವಿರ ಕೋಟಿ ರೂ ವೆಚ್ಚದ ಕ್ರಿಯಾ ಯೋಜನೆ ಅಗಿದ್ದು ಇದಕ್ಕೆ ಮಂಜೂರಾತಿ ನೀಡಿದ್ದು ಮುಖ್ಯ ಮಂತ್ರಿ ಸಿದ್ದರಾಮಯ್ಯನವರು. ನಂತರದಲ್ಲಿ ಅಂದಾಜು ವೆಚ್ಚವು ವಿವಿಧ ಕಾರಣಗಳಿಗೆ ಹೆಚ್ಚುವರಿಯಾಗಿ ೨೨ ರಿಂದ ೨೩ ಸಾವಿರ ಕೋಟಿ ರೂಗಳಿಗೆ ಏರಿಕೆಯಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ದಾಖಲಾಗಿದೆ. ತುಮಕೊರಿಗೆ ೫ ಟಿ.ಎಂ.ಸಿ ನೀರು ವಿತರಣೆಯ ಯೋಜನೆಯಲ್ಲಿ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಇನ್ನು ಪರಿಹಾರ ವಿತರಣೆಯು ತೀರ್ಮಾನವಾಗದ ಹಿನ್ನಲೆಯಲ್ಲಿ ವಿಳಂಭವಾಗಿದೆ ಎಂದರು.
ಇದೇ ರೀತಿ ಪಶ್ಚಿಮ ಘಟ್ಟದಲ್ಲಿ ಒಂದು ಎಕರೆ ಜಾಗದ ಸಮಸ್ಯೆ ಬಗೆಹರಿಯದಿರಲು ಇಚ್ಚಾಶಕ್ತಿ ಕೊರತೆಯೇ ಕಾರಣವಾಗಿದೆ, ಇದರ ಜೊತೆಗೆ ಆ ಭಾಗದ ಜನತೆ ಕಾಲುವೆ ಹಾದು ಹೋಗುವ ಕಡೆ ಗ್ರಾಮದ ಕೆರೆಗಳಿಗೂ ನೀರು ತುಂಬಿಸ ಬೇಕೆಂಬ ಬೇಡಿಕೆಗಳಿದ್ದವು ಈ ನೀರನ್ನು ನಾವು ಕುಡಿಯುವ ಯೋಜನೆಗೆ ಪಡೆದಿರುವುದು ಎಂದರೂ ಅರ್ಥ ಮಾಡಿಕೊಂಡಿರಲಿಲ್ಲ ಎಂದ ಅವರು ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಪೈಪ್ ಲೈನ್ ಕಾಮಗಾರಿಗಳು ನಡೆಯುತ್ತಿದೆ ಎಂದು ಹೇಳಿದರು,
ಜಲಜೀವನ್ ಯೋಜನೆಯಲ್ಲಿ ಕೇಂದ್ರ ಸರ್ಕಾರದ ೪೫ ಭಾಗ, ರಾಜ್ಯ ಸರ್ಕಾರ ೪೫ ಭಾಗ, ಉಳಿದ ೧೦ ಭಾಗವನ್ನು ಸಂಬಂಧ ಪಟ್ಟ ಸಂಸ್ಥೆಗಳು ಸಾರ್ವಜನಿಕರಿಂದ ಸಂಗ್ರಹಿಸಿ ಪಾವತಿಸ ಬೇಕಾಗಿತ್ತು ಅದರೆ ಸಾರ್ವಜನಿಕರ ೧೦ ಭಾಗವನ್ನು ರಾಜ್ಯ ಸರ್ಕಾರವೇ ಭರಿಸಲಿದ್ದು ಒಟ್ಟು ಶೇ ೫೫ ಭಾಗ ರಾಜ್ಯ ಸರ್ಕಾರ ಹಾಗೂ ಕೇಂದ್ರ ಶೇ ೫೫ ಭಾಗದಂತೆ ಯೋಜನೆಯು ಟೆಂಡರ್ ಅಗಿದ್ದು ಕಾಮಗಾರಿ ವೇಗದ ಪ್ರಗತಿಯಲ್ಲಿದೆ. ಈ ಯೋಜನೆಯ ಮುಖ್ಯ ಧ್ಯೇಯ ಮನೆ ಮನೆಗೆ ನೀರಿನ ಸಂರ್ಪಕ ನೀಡುವುದಾಗಿದೆ ಎಂದು ಹೇಳಿದರು.