ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ 9 ಜನರ ಬಂಧನ
ವಾಡಿ:ಸೆ.3: ಜೂಜಾಟ ಅಡ್ಡೆಯ ಮೇಲೆ ದಾಳಿ ನಡೆಸಿದ ಪೊಲೀಸರು 9 ಜನರನ್ನು ಬಂಧಿಸಿ 5 ಬೈಕ್‍ಗಳನ್ನು ವಶಕ್ಕೆ ಪಡೆದ ಘಟನೆ ಚಿತ್ತಾಪುರ ತಾಲೂಕಿನ ಸಂಕನೂರ ಗ್ರಾಮದಲ್ಲಿ ನಡೆದಿದೆ.
ಪಟ್ಟಣ ಸಮೀಪದ ಸಂಕನೂರ ಗ್ರಾಮದ ಮುಖ್ಯ ರಸ್ತೆಯ ಪಕ್ಕದಲ್ಲಿ 10 ರಿಂದ 15 ಜನರ ಗುಂಪು ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಕಲೆ ಹಾಕಿದ ವಾಡಿ ಪಿಎಸ್‍ಐ ತಿರುಮಲೇಶ ಕೆ.ಕುಂಬಾರ ಹಾಗೂ ಪೊಲೀಸರು ಜೂಜಾಡುವ ಅಡ್ಡೆಯ ಮೇಲೆ ದಾಳಿ ನಡೆಸಿ ಜೂಜುಕೊರರನ್ನು ಬಂಧಿಸಿದ್ದಾರೆ. ಅಮ್ಜಾದಖಾನ್, ಮಲ್ಲಪ್ಪ ಬಸವರಾಜ, ಸುಭಾಶ ಚಂದ್ರಶೇಖರ, ಮಲ್ಲಪ್ಪ ತಳವಾರ, ರಾಜು ಸಿಂಗ, ಪ್ರಕಾಶ ರಾಠೋಡ್, ಆನಂದ ಗೋಪಾಲ, ವಿಜಯ ಮಾನಸಿಂಗ, ರಮೇಶ ಸೇರಿ ಒಟ್ಟು 9ಜನರನ್ನು ಬಂಧಿಸಲಾಗಿದೆ.
ಬಂಧಿತರಿಂದ ರೂ. 65.200 ನಗದು ಹಣ ಹಾಗೂ 5 ಬೈಕ್‍ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಿಎಸ್‍ಐ ಕೆ. ತಿರೂಮಲೇಶ ತಿಳಿಸಿದ್ದಾರೆ. ಈ ಸಂಧರ್ಭದಲ್ಲಿ ವಿಶೇಷ ಪೇದೆ ಲಕ್ಷ್ಮಣ ತಳಕೇರಿ, ಪೇದೆಗಳಾದ ಬಸಲಿಂಗಪ್ಪ ಮಡ್ಡಿ, ರವಿ, ಹಣಮಂತ, ಪರಸಪ್ಪ, ಸಂತೋಷ ಮತ್ತು ಭೀಮಣ್ಣ ದಾಳಿ ವೇಳೆಯಲ್ಲಿ ಇದ್ದರು. ಈ ಕುರಿತು ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.