ಶ್ರೀ ಅಂಬಾ ಭವಾನಿಯ ನವರಾತ್ರಿ ಉತ್ಸವ
ಮುನವಳ್ಳಿ,ಅ.3: ಪಟ್ಟಣದ ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ 16 ನೇ ನವರಾತ್ರಿ ಉತ್ಸವ ಅ.3 ರಿಂದ ಅ.12 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಶ್ರೀಗಳು, ನರಗುಂದದ ಶ್ರೀ ಗುರುಸಿದ್ದವೀರ ಶಿವಯೋಗಿ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ಜರಗುವದು.
ದಿ.3 ರಂದು ಘಟಸ್ಥಾಪನೆ ಶ್ರೀದೇವಿ ಪುರಾಣ ಪ್ರಾರಂಭ. ಪ್ರತಿದಿನ ಸಂಜೆ 8 ರಿಂದ 9 ರವರೆಗೆ ಯಕ್ಕುಂಡಿಯ ಶ್ರೀ ಸಂಗಯ್ಯ ಹಿರೇಮಠ ಹಾಗೂ ಶ್ರೀನಿವಾಸ ಕುಲಕರ್ಣಿ ಇವರಿಂದ ಶ್ರೀ ದೇವಿ ಪುರಾಣ ಜರಗುವದು. .4 ಸಂಜೆ 6-30 ಕ್ಕೆ ಶ್ರೀ ಬನಶಂಕರಿದೇವಿ ಮಹಿಳಾ ಮಂಡಳ ದವರಿಂದ ಭಜನಾ ಕಾರ್ಯಕ್ರಮ, ದಿ.5 ರಂದು ಸಂಜೆ 6-30ಕ್ಕೆ ಶಾರದಾ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ. ದಿ.6 ರಂದು ಸಂಜೆ 4 ಕ್ಕೆ ಜೈಂಟ್ಸ್ ಗ್ರುಪ ಆಫ್ ರಾಣಿ ಚನ್ನಮ್ಮ ಸಹೇಲಿ ಗ್ರುಪ್‍ನಿಂದ ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಸಂಜೆ 7 ಗಂಟೆಗೆ ಜಯಸುಧಾ ಫೌಂಡೇಶನನಿಂದ ಚಿಕ್ಕಮಕ್ಕಳಿಗಾಗಿ ಶ್ರೀ ದೇವಿ ವೇಷಭೂಷಣ ಸ್ಪರ್ಧೆ, ದಿ.7 ರಾತ್ರಿ 9.30 ಕ್ಕೆ ಸತೀಶ ರೇಣಕೆ ಹಾಗೂ ಅಜರೇಕರ ಸಂತ ಮಂಡಳಿಯಿಂದ ಭಜನೆ ಹಾಗೂ ಕೀರ್ತನೆ, ದಿ.8 ರಂದು ಬೆಳಗ್ಗೆ 9 ರಿಂದ ಕುಂಕುಮಾರ್ಚನೆ
ರಾತ್ರಿ 10 ರಿಂದ ಶ್ರೀ ಸಿದ್ದಪ್ಪ ಶಿವಪ್ಪ ತುಳಜಣ್ಣವರ ಹಾಗೂ ಸಂಗಡಿಗರಿಂದ ಭಜನೆ ಜರಗುವದು. ದಿ.9 ರಂದು ರಾತ್ರಿ 10 ಕ್ಕೆ ಎಸ್.ಬಿ.ಹಿರಲಿಂಗಣ್ಣವರ ಹಾಗೂ ವಾಯ್.ಎಫ್.ಶ್ಯಾನಭೋಗ ಇವರಿಂದ ಹಾಸ್ಯ ಸಂಜೆ ಹಾಗೂ ಹವ್ಯಾಸಿ ಕಲಾ ಬಳಗದಿಂದ ಗಾನಸುಧೆ ಕಾರ್ಯಕ್ರಮ.
ದಿ.10 ರಾತ್ರಿ 10 ಕ್ಕೆ ಶ್ರೀ ಅಂಬಾಭವಾನಿಯ 11 ರಂದು ಬೆಳಗ್ಗೆ ಮುತೈದೆಯರಿಗೆ ಉಡಿ ತುಂಬುವದು, 11 ಗಂಟೆಗೆ ಶ್ರೀ ಹರ-ಗುರು-ಚರ ಮೂರ್ತಿಗಳ ಸಮ್ಮುಖದಲ್ಲಿ ಶ್ರೀದೇವಿ ಪುರಾಣ ಮಂಗಲೋತ್ಸವ ಹಾಗೂ ಮಹಾಪ್ರಸಾದ ಜರಗುವುದು.
ದಿ.12 ರಂದು ಸಂಜೆ ಸೀಮೋಲ್ಲಂಘನದ ಜೊತೆಗೆ ಶ್ರೀ ಅಂಬಾ ಭವಾನಿ ಪಲ್ಲಕ್ಕಿ ಉತ್ಸವ ದೊಂದಿಗೆ ಕಾರ್ಯಕ್ರಮ ಮಂಗಳವಾಗುವದು. ಎಂದು ದೇವಸ್ಥಾನದ ಕಮಿಟಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುವರು.