ಗಾಂಧೀಜಿ ನಡಿಗೆ
ಲಕ್ಷ್ಮೇಶ್ವರ,ಅ.3:ಕರ್ನಾಟಕ ಪ್ರದೇಶ ಕಾಂಗ್ರೆಸ್ ಐ ಸಮಿತಿ ನೀಡಿದ ಕರೆಯ ಮೇರೆಗೆ ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶಿಗ್ಲ ಗ್ರಾಮದಲ್ಲಿ ಮಹಾತ್ಮ ಗಾಂಧೀಜಿ ಅವರು ಬೆಳಗಾವಿಯ ಅಧಿವೇಶನದಲ್ಲಿ ನೂರು ವರ್ಷಗಳ ಹಿಂದೆ ನೇತೃತ್ವ ವಹಿಸಿದ ಸವಿನೆನಪಿಗಾಗಿ ಗಾಂಧೀಜಿ ನಡಿಗೆ ಹಮ್ಮಿಕೊಳ್ಳಲಾಗಿತ್ತು.
ಗ್ರಾಮದ ಪಿ ಎಂ ಬಳಿಗಾರ್ ಅವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಹೊರಟ ಕಾಂಗ್ರೆಸ್ಸಿನ ಕಾರ್ಯಕರ್ತರು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ಸೇವಾ ಮಂದಿರದಲ್ಲಿ ಸಭೆಯಾಗಿ ಮಾರ್ಪಟ್ಟಿತು.
ಮಹಾತ್ಮ ಗಾಂಧೀಜಿಯವರ 155ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಜಿಯವರ 120ನೇ ಜನ್ಮದಿನಾಚರಣೆ ಅಂಗವಾಗಿ ಅವರ ಭಾವಚಿತ್ರಗಳಿಗೆ ನಮನ ಸಲ್ಲಿಸಲಾಯಿತು.
ನಂತರ ಸಭೆಯಲ್ಲಿ ಉಸ್ತುವಾರಿ ಮೋಹನ್ ಅಸುಂಡಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರುಗಳಾದ ಎಸ್ ಪಿ ಬಳಿಗಾರ ಸುಜಾತ ದೊಡ್ಡಮನಿ ರಾಮಣ್ಣ ಲಮಾಣಿ ದಾದಾಪೀರ್ ಮುಚಾಲೆ ಸೋಮಣ್ಣ ಬೆಟಿಗೇರಿ ನಾಗರಾಜ ಮಡಿವಾಳರ ಗುರುನಾಥ್ ದಾನಪ್ಪನವರ ಸೇರಿದಂತೆ ಅನೇಕರು ಮಾತನಾಡಿ ಸ್ವಾತಂತ್ರ ಹೋರಾಟಗಾರರ ನೆಲೆಯಾಗಿರುವ ಶಿಗ್ಲಿ ಗ್ರಾಮದಲ್ಲಿ ಒಂದು ಸ್ಮಾರಕ ಭವನ ನಿರ್ಮಾಣವಾಗಬೇಕು ಎಂದು ಆಗ್ರಹಿಸಿದರು.
ಮಹಾತ್ಮ ಗಾಂಧೀಜಿಯವರ ಸತ್ಯ ಶಾಂತಿ ಅಹಿಂಸಾ ತತ್ವಗಳು ಇಡೀ ಜಗತ್ತಿಗೆ ಕನ್ನಡಿ ಆಗಿದ್ದು ನಾವೆಲ್ಲರೂ ಅವರ ಆದರ್ಶಗಳನ್ನು ರೂಢಿಸಿಕೊಂಡು ತತ್ವ ಬದ್ಧರಾಗಿ ನಡೆದುಕೊಂಡು ಉತ್ತಮ ವಿಚಾರಗಳನ್ನು ಬೆಳಹಿಸಿಕೊಳ್ಳ ಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಮು ಗಡದವರ ರಾಜು ಕುಂಬಿ ದೀಪಕಲಮಾಣಿ ವಿಜಯ ಕರಡಿ ಫೀರ್ ದೂಶ ಆಡೂರ ಸಾಹೇಬ್ ಜಾನ್ ಹವಾಲ್ದಾರ್ ಅಮರಪ್ಪ ಗುಡಗುಂಟಿ ಕಿರಣ ನವಲೆ ದೀಪಕ್ ಲಮಾಣಿ ರಂಜನ್ ಪಾಟೀಲ್ ರಫೀಕ್ ಕಲಬುರ್ಗಿ ಬಾಬು ಅಳವಂಡಿ ವೀರೇಂದ್ರ ಪಾಟೀಲ್ ರಮೇಶ ಬಾರ್ಕಿ ಅಂಬರೀಶ ತೆಂಬದಮನಿ ಸೇರಿದಂತೆ ಅನೇಕರಿದ್ದರು.
ಲಕ್ಷ್ಮೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ ಆರ್ ಕೊಪ್ಪದ್ ಅಧ್ಯಕ್ಷತೆ ವಹಿಸಿದ್ದರು ರಾಜು ಓಲೆಕಾರ ಮಂಜುನಾಥ ಶಂಭೂಜಿ ನಿರ್ವಹಿಸಿದರು.