ಶಾಸ್ತ್ರೀಜಿ, ಗಾಂಧೀಜಿ ತತ್ವಗಳು ಭರವಸೆಯ ಬೆಳಕು
ಧಾರವಾಡ,ಅ3: ದೇಶಕ್ಕೆ ಪ್ರಧಾನ ಮಂತ್ರಿಇದ್ದರೆ ಲಾಲಬಹದ್ದೂರ ಶಾಸ್ತ್ರೀಯಂಥವರು ಇರಬೇಕು. ಪ್ರಾಮಾಣಿಕಜೀವನ ನಡೆಸುವುದಕ್ಕೆ ಮಾದರಿಯಾದವರು. ಇಂದು ದೇಶ ಆಳುವವರು ಬ್ರಷ್ಟಾಚಾರದಲ್ಲಿಯೇ ಮುಳುಗಿರುವ ಇಂದಿನ ದಿನಗಳಲ್ಲಿ ಶಾಸ್ತ್ರೀ, ಗಾಂಧೀ ತತ್ವಗಳು, ಆದರ್ಶಗಳು ದೇಶಕ್ಕೆ ಭರವಸೆಯ ಬೆಳಕಾಗಿವೆ ಎಂದು ಹಿರಿಯ ನ್ಯಾಯವಾದಿ ಕೆ.ಬಿ. ನಾವಲಗಿಮಠ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಮಹಾತ್ಮಾಗಾಂಧೀಜಿ ಮತ್ತು ಲಾಲಬಹದ್ದೂರ ಶಾಸ್ತ್ರೀ ಜಯಂತಿ ಆಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು ಗಾಂಧೀಜಿಯವರನ್ನು ಇಂದಿಗೂ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಗಾಂಧೀಜಿಯವರು ಬರೀ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು ಎಂದು ಅಂದುಕೊಳ್ಳುತ್ತೇವೆ. ಆದರೆ ವಾಸ್ತವದಲ್ಲಿ ಮನುಷ್ಯ ಸ್ವತಂತ್ರವಾಗಿ ಹೇಗೆ ಬದುಕಬೇಕು ಎಂಬುದನ್ನು ಮಾರ್ಗ ತೋರಿಸಿದವರು. ಸಾರ್ವಜನಿಕರಿಗೆ ಏನಾದರು ಸಹಾಯ ಆಗಬೇಕೆಂದರೆ ಒಂದು ಸಂಘಟನೆ ಇರಬೇಕು. ಈ ಹಿನ್ನೆಲೆಯಲ್ಲಿ ಬ್ರಿಟಿಷ ಕಾಲಕ್ಕೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವುದಕ್ಕೆ ಕಾಂಗ್ರೆಸ್ ಸಂಸ್ಥೆ ಹುಟ್ಟಿಕೊಂಡಿತ್ತೇ ವಿನಹ ಸ್ವಾತಂತ್ರ್ಯ ಹೋರಾಟಕ್ಕಾಗಿ ಹುಟ್ಟಿಕೊಂಡಿರಲಿಲ್ಲ
ಅಂದುದೇಶಒಂದೇಎಂದು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು.ಎಲ್ಲರನ್ನು ಒಳಗೊಳ್ಳುವಂತೆ ಮಾಡಿ ಸ್ವಾತಂತ್ರ್ಯ ಚಳುವಳಿ ಮಾಡಿದವರು ಮಹಾತ್ಮಾಗಾಂಧೀಜಿಯವರು.ಎಲ್ಲ ಸಮುದಾಯವನ್ನು ವಿಶ್ವಾಸದೊಂದಿಗೆ ಭಾಗವಹಿಸುವಂತೆ ಮಾಡುವಅದಮ್ಯ ಶಕ್ತಿ ಇತ್ತು.ಇದರಿಂದಲೇಇಷ್ಟೊಂದು ಸಾಧನೆ ಮಾಡಲಾಗಿತ್ತು.ಇಂದುಒಂದು ದಿನ ಆಚರಣೆ ಮಾಡಿದರೆ ಸಾಲದು.ಅವರು ನುಡಿದಂತೆ ನಡೆದರು.ಸರಳ ಜೀವನ ನಮಗೆ ಮಾದರಿಆಗಬೇಕೆಂದರೆ ನಿತ್ತ ನಮ್ಮಜೀವನದಲ್ಲಿ ಅಳವಡಿಸಿಕೊಂಡಾಗ ಜಯಂತಿ ಆಚರಿಸಿದ್ದಕೆಕ ಅರ್ಥ ಸಿಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಸಂಘದಅಧ್ಯಕ್ಷಚಂದ್ರಕಾಂತ ಬೆಲ್ಲದ ಮಾತನಾಡಿ, ಗಾಂಧೀ ಮತ್ತು ಶಾಸ್ತ್ರೀಯವರ ಜಯಂತಿಯನ್ನು ಭಾರತದಲ್ಲಿ ಅಷ್ಟೇ ಅಲ್ಲ, ಪ್ರಪಂಚದಾದ್ಯಂತಆಚರಿಸುತ್ತಾರೆ.ಇವರತತ್ವ ಆದರ್ಶಗಳನ್ನು ನಮ್ಮ, ನಡೆ-ನುಡಿಯಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಜಾನಪದ ಸಂಶೋಧನಾಕೇಂದ್ರದಖೈರುನ್ನಿಸಾ, ಗಿರಿಜಾ ಶೆಕ್ಕಿ, ಸುನಂದಾ ಹೊಸಮನಿ ದೇಶಭಕ್ತಿ ಗೀತೆಗಳನ್ನು ಪ್ರಸ್ತುತಪಡಿಸಿದರು.
ವೇದಿಕೆ ಮೇಲೆ ಬಸವಪ್ರಭು ಹೊಸಕೇರಿಇದ್ದರು.ಶಂಕರ ಹಲಗತ್ತಿಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಸತೀಶತುರಮರಿ, ಶಂಕರ ಕುಂಬಿ, ವೀರಣ್ಣಒಡ್ಡೀನ, ಗುರು ಹಿರೇಮಠ, ಡಾ.ಮಹೇಶ ಧ. ಹೊರಕೇರಿ, ಡಾ. ಜಿನದತ್ತ ಹಡಗಲಿ, ಡಾ. ಧನವಂತ ಹಾಜವಗೋಳ, ಶಿವಾನಂದ ಭಾವಿಕಟ್ಟಿ, ಎಂ.ಎಂ. ಚಿಕ್ಕಮಠ, ನಿಂಗಣ್ಣಕುಂಟಿ, ಡಿ.ಬಿ. ಢಂಗ, ಮಾರ್ತಾಂಡಪ್ಪಕತ್ತಿ, ಪ್ರಮೀಳಾ ಜಕ್ಕಣ್ಣವರ, ಅಭಿಷೇಕದೇಸಾಯಿ, ಭೂಷಣ ಹಿರೇಮಠ, ಸುಧನ್ವಾಕತ್ತಿ ಸೇರಿದಂತೆ ಮುಂತಾದವರಿದ್ದರು.