ಜಿಂದಾಲ್ ವಿರುದ್ದ ನಾಡಿದ್ದು ಪಾದಯಾತ್ರೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.03: ಅತಿ ಕಡಿಮೆ ಬೆಲೆಗೆ 3667 ಎಕರೆ ಭೂಮಿಯನ್ನು  ಜಿಂದಾಲ್ ಕಂಪನಿಗೆ ಕ್ರಯಕ್ಕೆ ನೀಡುತ್ತಿರುವ ರಾಜ್ಯ ಸರ್ಕಾರದ ತೀರ್ಮಾನ ವಿರೋಧಿಸಿ,  ಸ್ಥಳೀಯರಿಗೆ ಉದ್ಯೋಗಕ್ಕಾಗಿ ಆಗ್ರಹಿಸಿ   ಬಳ್ಳಾರಿ ನಗರ ದಿಂದ ತೋರಣಗಲ್ಲಿನ ಜಿಂದಾಲ್ ಒಲ್ಡ್ ಗೆಟ್ ವರೆಗೂ ಪಾದಯಾತ್ರೆ ಮಾಡಲಿದೆಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್(ಡಿವೈಎಫ್ಐ)ನ  ಜಿಲ್ಲಾ ಅಧ್ಯಕ್ಷ ಯು.ಎರ್ರಿಸ್ವಾಮಿ  ಹೇಳಿದ್ದಾರೆ.
ಅವರು ಇಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ. ನಾಡಿದ್ದ ಅ 5  ಬೆಳಿಗ್ಗೆ 9 ಗಂಟೆಗೆ ಪಾದಯಾತ್ರೆ ನಗರದ  ರಾಯಲ್ ಸರ್ಕಲ್ ನಿಂದ ಪ್ರಾರಂಭಗೊಂಡು ಕುಡುತಿನಿ ಪಟ್ಟಣಕ್ಕೆ ತಲುಪುವುದು, ಅ 6  ಕುಡುತಿನಿಯಿಂದ  ತೋರಣಗಲ್ಲು ಒಲ್ಡ್ ಗೇಟ್ ವರಗೆ ತಲುಪಿ ಪ್ರತಿಭಟನೆ ನಡೆಸಲಿದೆಂದು ತಿಳಿಸಿದರು.
ಸ್ಥಳೀಯ ನಿರುದ್ಯೋಗ ಯುವಜನರಿಗೆ ಉದ್ಯೋಗವನ್ನು ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಿಗೆ ಪ್ರಥಮ ಆದ್ಯತೆಯಾಗಿ ನೀಡಬೇಕು ಮತ್ತು ಜಿಂದಾಲ್ ಮಾಲೀಕರಿಗೆ 3,667 ಎಕರೆ ಜಮೀನು ಮಾರಾಟಕ್ಕೆ ಅನುಮೋದನೆ ನೀಡಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಾಗೂ ಕುಡುತಿನಿ ಭಾಗದ ಭೂ ಸಂತ್ರಸ್ತರ ಸಮಸ್ಯೆಗಳನ್ನು ಈಡೇರಿಸಬೇಕು. ಸ್ಥಳೀಯ ವಸತಿ ನಿವೇಶನ ರಹಿತರಾದ ಅರ್ಹ ಪಲಾನುಭವಿ ಕುಟುಂಬಗಳಿಗೆ ವಸತಿ ನಿವೇಶನ ನೀಡಬೇಕೆಂದು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸ್ವಾಮಿ,  ಪದಾಧಿಕಾರಿಗಳಾದ ಎಸ್.ಕಾಲೂಬ,ಜಿ.ಎನ್.ಎರ್ರಿಸ್ವಾಮಿ, ಬಿ.ಪಿ.ನವೀನ ತಿಪ್ಪೇರುದ್ರ,ನಾಗಭೂಷಣ ಮೊದಲಾದವರು ಇದ್ದರು.