ದರ್ಶನ್ ಗೆ ಬೆನ್ನು ಊತ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಅ.03:  ಒಂದು ಕಡೆ ಸೂಕ್ತ ಬೆಡ್ , ಆಹಾರವಿಲ್ಲದೆ  ಬಳ್ಳಾರಿ ಜೈಲಿನಲ್ಲಿ ಕಾಲ ಕಳೆಯುತ್ತಿರುವ ನಟ ದರ್ಶನ್ ಗೆ ಈಗ ಬೆನ್ನು ಊತ ಶುರುವಾಗಿದೆ. ಇದಕ್ಕೆ ಶಸ್ತ್ರ ಚಿಕಿತ್ಸೆ ಬೇಕೆಂದು ಬಿಮ್ಸ್ ವೈದ್ಯರು ಹೇಳಿದ್ದಾರೆ.
ನನಗೆ ಮಲಗಲು ಮೆಡಿಕಲ್ ಬೆಡ್ ಬೇಕೆಂದು ಕೇಳುತ್ತಿದ್ದ ನಟ ದರ್ಶನ್ ಗೆ ನೀಡಿರಲಿಲ್ಲ.
ಬೆನ್ನು ನೋವು ಎನ್ನುತ್ತಿದ್ದ ದರ್ಶನ್ ಗೆ ಇಂದು ಬಿಮ್ಸ್ ವೈದ್ಯರು ಬಂದು ತಪಾಸಣೆ ಮಾಡಿ.  ಬೆನ್ನಿನಲ್ಲಿ ಊತ ಕಂಡು ಬಂದಿದೆ. ಇದಕ್ಕೆ ಸರ್ಜರಿ ಮಾಡಬೇಕು. ಅದಕ್ಕಾಗಿ ಸ್ಕ್ಯಾನಿಂಗ್ ಮಾಡಿಸಬೇಕು ಎಂದು ಹೇಳಿದ್ದಾರೆ.
ಆದರೆ ನಟ ದರ್ಶನ ಸ್ಕಾನ್ ಮಾಡಲು ನಿರಾಕರಿಸಿ. ಬೆಂಗಳೂರಿಗೆ ಹೋದ ಮೇಲೆ ಮಾಡಿಸುವೆ. ಸಧ್ಯ ಪೇನ್ ರಿಲೀಪ್ ಟ್ಯಾಬ್ಲೆಟ್ ನೀಡಿ ಎಂದಿದ್ದಾರಂತೆ.
ಪುತ್ರನ ಭೇಟಿ:
ಪತ್ನಿ ವಿಜಯಲಕ್ಷ್ಮಿ ಮತ್ತು ದರ್ಶನ್ ಅವರ ಪುತ್ರ ವಿನೀಶ್ ಇಂದು ದರ್ಶನ್ ಅವರ ಭೇಟಿಗೆ  ಮೊದಲಬಾರಿಗೆ ಬರುತ್ತಿದ್ದಾರೆ.
ಹೀಗಾಗಿ ದರ್ಶನ್ ಭೇಟಿಗೆ ಹೆಚ್ಚಿನ ಸಮತ ನೀಡಿ ಎಂದು ಜೈಲ್ ಸೂಪರಿಂಟೆಂಡೆಂಟ್ ಅವರಿಗೆ ಕೇಳಿದ್ದಾರಂತೆ ಬೆಂಬಿಡದೇ ಕಾಡ್ತಿದೆ ದರ್ಶನ್ ಗೆ ಬೆನ್ನು ನೋವಿನ ಸಮಸ್ಯೆ
ಬೆನ್ನು ನೋವು ಹೆಚ್ಚಾಗಿದ್ರಿಂದ ಜೈಲಿನಲ್ಲೇ ಆರೋಗ್ಯ ತಪಾಸಣೆ..
ವಿಮ್ಸ್ ಆಸ್ಪತ್ರೆಯ ವೈದ್ಯರಿಂದ ತಪಾಸಣೆ..ಆರೋಪಿ ದರ್ಶನ್ ಗಿರುವ ಬೆನ್ನು ನೋವಿಗೆ ಸರ್ಜರಿ ಮಾಡಿಸಲೇಬೇಕಿದೆ ಬೆನ್ನು ಹಿಂಭಾಗದ ಊತ ಬಂದಿರುವ ಸಾಧ್ಯತೆ ಹಿನ್ನೆಲೆ ಹೀಗಾಗಿ ದರ್ಶನ್ ಗೆ ಸ್ಕ್ಯಾನ್ ಮಾಡಿಸಲು ಸೂಚನೆ ನೀಡಿದ ವೈದ್ಯರು ಸ್ಕ್ಯಾನ್ ಮಾಡಿಸೋದನ್ನು ನಿರಾಕರಿಸಿದ ಆರೋಪಿ ದರ್ಶನ್ ಬೆಂಗಳೂರಿಗೆ ಹೋದ್ಮೇಲೆ ಸ್ಕ್ಯಾನ್ ಮಾಡಿಸ್ತೇನೆ ಸದ್ಯಕ್ಕೆ ಪೇನ್ ಕಿಲ್ಲರ್ ಟ್ಯಾಬ್ಲೇಟ್ ಮಾತ್ರ ಕೊಡಿ ಸಾಕು ಎಂದಿರುವ ಆರೋಪಿ ದರ್ಶನ್