ಚುಚ್ಚುಮದ್ದು ಕಾರ್ಯಕ್ರಮ
ಲಕ್ಷ್ಮೇಶ್ವರ, ಅ3: ತಾಲೂಕಿನ ಬಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಟ್ಟೂರು ಕುಂದ್ರಳ್ಳಿ ತಾಂಡ ಕುಂದ್ರಳ್ಳಿ ಮತ್ತು ಶೆಟ್ಟಿಕೆರಿ ಗ್ರಾಮಗಳಲ್ಲಿ ಭೀತಿಗೆ ಕಾರಣವಾಗಿರುವ ರೇಬಿಸ್ ವಿರುದ್ಧ 4 ಗ್ರಾಮಗಳಲ್ಲಿ ರಾಬಿ ಫೆÇೀರ್ ಚುಚ್ಚುಮದ್ದು ಹಾಕುವ ಕಾರ್ಯಕ್ರಮವನ್ನು ವ್ಯಾಪಕವಾಗಿ ಆರಂಭಿಸಲಾಗಿದೆ.
ಬಟ್ಟೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸುಮಾರು 7,000ಕ್ಕೂ ಹೆಚ್ಚು ಜನಸಂಖ್ಯೆ ಇದ್ದು ಜೊತೆಗೆ ಜಾನುವಾರುಗಳು ಇರುವುದರಿಂದ ತಾಲೂಕ ಆಡಳಿತ ಮತ್ತು ಜಿಲ್ಲಾ ಆಡಳಿತ ಈ ನಾಲ್ಕು ಗ್ರಾಮಗಳಲ್ಲಿ ಜನ ಮತ್ತು ಜಾನುವಾರುಗಳಿಗೆ ರೇಬಿಸ್ ವಿರುದ್ಧ ಚುಚ್ಚುಮದ್ದು ಹಾಕಲು ತಲಾ ನಾಲ್ಕು ಜನರು ತಂಡವನ್ನು ಆರೋಗ್ಯ ಇಲಾಖೆ ಮತ್ತು ಪಶು ವೈದ್ಯಕೀಯ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಮಾಡುತ್ತಿವೆ.
ತಾಲೂಕ ವೈದ್ಯಾಧಿಕಾರಿ ಸುಭಾಷ್ ದಾಯಗೊಂಡ ಅವರ ನೇತೃತ್ವದಲ್ಲಿ ಮತ್ತು ಪಶು ವೈದ್ಯಕೀಯ ಇಲಾಖೆಯ ಗುರಿಕಾರ್ ಮತ್ತು ನಿಂಗಪ್ಪ ಓಲೆಕಾರ್ ಅವರ ನೇತೃತ್ವದಲ್ಲಿ ಜಾನುವಾರುಗಳಿಗೆ ಚುಚ್ಚುಮದ್ದು ಹಾಕಲಾಗುತ್ತಿದೆ.
ಬಟ್ಟೂರು ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಲಸಿಕೆಯನ್ನು ಹಾಕಲಾಗುತ್ತಿದೆ ಅದರಂತೆ ಜನರಿಗೆ ಅನುಕೂಲವಾಗುವ ಹಾಗೆ ನಾಲ್ಕು ಗ್ರಾಮಗಳಲ್ಲಿ ತಂಡಗಳನ್ನು ಮಾಡಿ ಚುಚ್ಚುಮದ್ದು ಮಾಡಲಾಗುತ್ತಿದೆ.
ಈ ನಾಲ್ಕು ಗ್ರಾಮಗಳ ವ್ಯಾಪ್ತಿಯಲ್ಲಿ ಸಂರಕ್ಷಿತ ಅರಣ್ಯ ಪ್ರದೇಶವಿರುವುದರಿಂದ ಕಾಡುಗಳಲ್ಲಿ ನರಿ ಮತ್ತು ತೋಳಗಳ ಹಾವಳಿ ಇರುವುದರಿಂದ ನಾಯಿಗಳಿಗೆ ಕಚ್ಚಿ ಅವುಗಳಿಂದ ರೇಬಿಸ್ ಹರಡುವ ಭೀತಿ ಉಂಟಾಗಿದೆ. ಅರಣ್ಯ ಇಲಾಖೆಯವರು ಸಹ ಇದರ ಮೇಲೆ ನಿಗಾ ಇಟ್ಟಿದ್ದಾರೆ.