ಮಾಹಿತಿಗಾಗಿ ತಡಕಾಡುತ್ತಿರುವ ದರ್ಶನ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.03: ತಮ್ಮ ಪ್ರಕರಣದಲ್ಲಿ ಹೊರಗಡೆ ಏನು ನಡೆಯುತ್ತಿದೆ ಎಂಬ ಸಂವಹನದ (ಮಾಹಿತಿ) ಕೊರತೆಯಿಂದ ದರ್ಶನ ಕಂಗಾಲಾಗಿದ್ದಾನಂತೆ.
ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿದ್ದಾಗ ಬಿಂದಾಸ್ ಆಗಿ, ಪ್ರತಿ ಕ್ಷಣ ತಮ್ಮ ಪ್ರಕರಣದ ತನಿಖೆ ಬಗ್ಗೆ ಅರಿಯುತ್ತಿದ್ದ ದರ್ಶನ್ ಗೆ ಇಲ್ಲಿ ಬಳ್ಳಾರಿಯಲ್ಲಿ ಶೂನ್ಯ ಸಂಪರ್ಕವಾಗಿದೆಯಂತೆ.
ಮೊನ್ನೆ ಪತ್ನಿ ಬಂದು ನೀಡಿದ ಮಾಹಿತಿ ಬಿಟ್ಟರೆ, ಮತ್ತೆ ತಮ್ಮ ಪ್ರಕರಣದ ಚಾರ್ಜ್ ಶೀಟ್ ಸಲ್ಲಿಕೆ, ಅದರಲ್ಲಿ ತಮ್ಮನ್ನು ಏ 1ಮಾಡಲಾಗಿದೆಯಾ, ಇನ್ನೂ ಯಾಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಿಲ್ಲ ಎಂಬ ಆತಂಕ ಕಾಡುತ್ತಿದೆಯಂತೆ. ಈ ಬಗ್ಗೆ ಭದ್ರತೆಗೆ ಇರುವ ಸಿಬ್ಬಂದಿ ಕೇಳಿದರೆ. ಅವರೂ ಸಹ ನನಗೆ ಮಾಹಿತಿ ಇಲ್ಲವೆಂದರಂತೆ. ಹೀಗಾಗಿ ದರ್ಶನ ತನ್ನ ಪ್ರಕರಣದ ಬೆಳವಣಿಗೆಯ ಮಾಹಿತಿ ಕೊರತೆಯನ್ನು ಎದಿರಿಸುವಂತಾಗಿದೆ.
ಜೈಲು ಇಲಾಖೆಯ ಡಿಐಜಿ ಶೇಷ ಅವರ ಹೇಳುವಂತೆ ದರ್ಶನ್ ಅವರು ಬೇಕಾದರೆ ತಮ್ಮ ಸೆಲ್ ಗೆ ಟಿವಿ ಪಡೆಯಬಹುದು. ಆದರೆ ಉಇ ವರೆಗೆ ಪಡೆದಿಲ್ಲದಿರುವುದು ಅಚ್ಚರಿಯಾಗಿದೆ.
ಸರ್ಜಿಕಲ್ ಚೇರ್ ಸಿಕ್ತು:
ಬೆನ್ನು ನೋವು ಇದ್ದ ಕಾರಣ ಶೌಚಾಲಯಕ್ಕೆ ಸಮಸ್ಯೆಯಾಗುತ್ತಿದ್ದು ಸರ್ಜಿಕಲ್ ಚೇರ್(ಕಮೋಡ್) ಬೇಕೆಂದು ಕೋರಿದ್ದರು.  ವೈದ್ಯಕೀಯ ದಾಖಲೆ ಪರಿಶೀಲಿಸಿ ನಿನ್ನೆ ಸಂಜೆ ನೀಡಲಾಗಿದೆ.