ಸಾಂಸ್ಕೃತಿಕ ಶ್ರೀಮಂತಿಕೆ ಜೀವನ ಶ್ರೇಷ್ಠ
ಸಂಜೆವಾಣಿ ವಾರ್ತೆ
ಬಳ್ಳಾರಿ, ಸೆ.03: ಶ್ರೀಮಂತಿಕೆಯ ಜೀವನ ಶೈಲಿಗಿಂತ ಶ್ರೀಮಂತ ಸಂಸ್ಕೃತಿಯ ಜೀವನ ಶೈಲಿ ಶ್ರೇಷ್ಠವಾದುದು.ಇದು ಪುಸ್ತಕ ಓದುವುದರಿಂದ ಸಾಧ್ಯ ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು.
ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸಲು ಆಗಸ್ಟ್ 17 ರಿಂದ ಸೆಪ್ಟೆಂಬರ್ 08 ರವರೆಗೆ ಓದುವ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಲೆಯ ಒಂದರಿಂದ ಎಂಟನೇ ತರಗತಿ ಎಲ್ಲಾ ಮಕ್ಕಳಿಗೆ ಶಾಲಾ ಗ್ರಂಥಾಲಯ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವರು Read a thon -24 ಉತ್ತಮ ಕಾರ್ಯಕ್ರಮವಾಗಿದೆ.
ಇದರ ಪ್ರಮುಖ ಉದ್ದೇಶ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು. ಯಾವ ಮಕ್ಕಳಲ್ಲಿ ಓದುವ ಹವ್ಯಾಸ ಇರುತ್ತದೋ ಅಂತಹವರಲ್ಲಿ ಜ್ಞಾನ ವಿಕಾಸವಾಗುತ್ತದೆ.ಆದ್ದರಿಂದ ಮಕ್ಕಳು ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಂತೆ ಪುಸ್ತಕ ಓದುವ ಹವ್ಯಾಸ ಮೈಗೂಡಿಸಿಕೊಂಡು ವಿಶ್ವ ಜ್ಞಾನಿಗಳಾಗಬೇಕೆಂದು ಹೇಳಿದರು.
ಶಿಕ್ಷಕರಾದ ದಿಲ್ಷಾದ್ ಬೇಗಂ, ಎಂ.ಎಂ.ಚನ್ನಮ್ಮ, ಕೆ.ಸುಮತಿ, ವೈಶಾಲಿ, ಶ್ವೇತಾ, ಶಶಮ್ಮ, ರಾಮಾಂಜನೇಯ, ಗುರುಪ್ರಸಾದ್, ವಿಜಯ ಮುಂಡ್ರಿಗಿ, ವಿದ್ಯಾರ್ಥಿ ಪ್ರತಿನಿಧಿ ಕೆ.ಎಸ್. ಅನುಷ ಮುಂತಾದವರು ಉಪಸ್ಥಿತರಿದ್ದರು.