ಮೌಲಾನಾ ಆಜಾದ್ ಶಾಲೆಯಲ್ಲಿ ಪಿಯುಸಿ ಆರಂಭ
(ಸಂಜೆವಾಣಿ ವಾರ್ತೆ)
ಬಳ್ಳಾರಿ,ಸೆ.03: ನಗರದ ಬೆಳಗಲ್ಲು ರಸ್ತೆಯ ಆಕಾಶವಾಣಿ ಕೇಂದ್ರದ ಹತ್ತಿರದಲ್ಲಿರುವ ಸರ್ಕಾರಿ ಮೌಲಾನಾ ಆಜಾದ್ ಮಾದರಿ ಶಾಲೆಯನ್ನು ಉನ್ನತೀಕರಿಸಿ 2024-25ನೇ ಸಾಲಿನಿಂದ ಪದವಿ ಪೂರ್ವ ಕಾಲೇಜನ್ನುಗಿ ಆರಂಭಿಸಿದೆ. ಈಗ ಇಲ್ಲಿ ವಿದ್ಯಾರ್ಥಿಗಳು ಪಿಯುಸಿಗೆ ಪ್ರವೇಶ ಪಡೆಯಬಹುದಾಗಿದೆ.
32ನೇ ವಾರ್ಡಿನ ಸದಸ್ಯೆ ಮಂಜುಳಾ ಉಮಾಪತಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗ ವಿಠೋಬಾ ಹೊನಕಾಂಡೆ, ಪ್ರಾಂಶುಪಾಲ ಶರಣಬಸವ, ವಕೀಲ ಹುಸೇನ್ ಬಾಷಾ ಮೊದಲಾದವರು ಇದ್ದರು.