ಶ್ರದ್ಧಾ ಭಕ್ತಿಯಿಂದ ವೀರಭದ್ರೇಶ್ವರ ಜಯಂತಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.03: ನಗರದಲ್ಲಿ ಇಂದು 5ನೇ ವರ್ಷದ ಶ್ರೀ ವೀರಭದ್ರೇಶ್ವರ ಸ್ವಾಮಿ ಜಯಂತೋತ್ಸವವನ್ನು ಇಲ್ಲಿನ ಅನಾದಿಲಿಂಗೇಶ್ವರ ದೇವಸ್ಥಾನದಲ್ಲಿ ಹರಗಿನಡೋಣಿ, ಕಮ್ಮರಬೇಡು ಮತ್ತು ಕಲ್ಯಾಣಸ್ವಾಮಿ ಮಠ ಮೊದಲಾದ ಶ್ರೀಗಳ  ಸಾನಿಧ್ಯದಲ್ಲಿ  ಜರುಗಿತು
ಬೆಳಿಗ್ಗೆ  ಅನಾದಿಲಿಂಗೇಶ್ವರ ದೇವಸ್ಥಾನದ ಅವರಣದಲ್ಲಿರುವ  ವೀರಭದ್ರೇಶ್ವರ ದೇವಸ್ಥಾನದ ಶಿಲಾಮೂರ್ತಿಗೆ ರುದ್ರಾಭಿಷೇಕ ಮಾಡಿ ವಿಶೇಷ ಅಲಂಕಾರ ಮಾಡಲಾಗಿದೆ.
ನಂತರ 201 ಮುತ್ತೈದೆಯರಿಂದ ಕಳಸ, ಐದು ಮಹಿಳೆಯರಿಂದ ಗಂಗೆ ಕೊಡದೊಂದಿಗೆ ವೀರಗಾಸೆ ಸಮಾಳ, ನಂದಿಕೋಲು ರಾಂ ಡೋಲು ಮತ್ತಿತರೇ  ಜನಪದ ಕಲಾವಾದ್ಯಗಳೊಂದಿಗೆ ಶ್ರೀ ವೀರಭದ್ರೇಶ್ವರ ಸ್ವಾಮಿಯ ಭಾವಚಿತ್ರದ ಭವ್ಯ ಮೆರವಣಿಗೆ ಕನಕದುರ್ಗಮ್ಮ ದೇವಸ್ಥಾನದ ಅವರಣದಿಂದ  ಆರಂಭಗೊಂಡಿತು.
ಅಲ್ಲಿಂದ ವಾರ್ಪತಿನಗರದ ಮುಖ್ಯರಸ್ತೆ, ಎಸ್ಪಿ ಸರ್ಕಲ್, ಬಸವ ಭವನದ ಮೂಲಕ‌ ವೀರಭದ್ರೇಶ್ವರನ ಸನ್ನಿದಿಗೆ ಬಂದು ತಲುಪಿತು.
ಬಳಿಕ  201 ಮುತ್ತೈದೆಯರಿಗೆ ಹಸಿರುಸೀರೆ ಹಾಗೂ ಉಡಿ ತುಂಬುವ ಕಾರ್ಯಕ್ರಮ ಜರುಗಿತು.  ತದನಂತರ ಪೂಜ್ಯ ರಿಂದ ಆಶೀರ್ವಚನ, ಮಹಾಮಂಗಳಾರತಿ ಪ್ರಸಾದ ವಿತರಣೆಯು ಜೆಎಂ ಬಸವರಾಜ್ ಸ್ವಾಮಿ  ಮತ್ತಿತರ ಭಕ್ತಾಧಿಗಳ ನೇತೃತ್ಬದಲ್ಲಿ ನಡೆಯಿತು.