5 ವರ್ಷಗಳ ಲಾ ಕೋರ್ಸ್ ಗೆನಾಳೆಯಿಂದ ಅಡ್ಮಿಷನ್ ಆರಂಭ: ನರೇಂದ್ರಬಾಬು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಆ,3: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವೀರಶೈವ ವಿದ್ಯಾವರ್ಧಕ ಸಂಘದ ವುಂಕಿ ಸಣ್ಣರುದ್ರಪ್ಪ ಕಾನೂನು ಮಹಾವಿದ್ಯಾಲಯದಲ್ಲಿ ಐದು ವರ್ಷಗಳ ಕಾನೂನು ಪದವಿ ಕೋರ್ಸ್ ನ್ನು ಪ್ರಸಕ್ತ  2024-25  ಸಾಲಿನಿಂದ ಆರಂಭಿಸಲು ಭಾರತೀಯ ವಕೀಲರ ಪರಿಷತ್ ಮತ್ತು ಕಾನೂನು ವಿಶ್ವ ವಿದ್ಯಾಲಯ ಅನುಮತಿ ನೀಡಿದ್ದು. ನಾಳೆಯಿಂದ ಆಡ್ಮಿಷನ್ ಆರಂಭಿಸಲಿದ್ದು ಈ ತಿಂಗಳ  12 ಪ್ರವೇಶಾತಿಗೆ ಕೊನೆಯ ದಿನವಾಗಿದೆ ಎಂದು   ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಮಿಂಚೇರಿ ನರೇಂದ್ರಬಾಬು ಅವರು ತಿಳಿಸಿದ್ದಾರೆ.
ಈ ವರೆಗೆ 3 ವರ್ಷದ ಕಾನೂನು ಪದವಿ ಕೋರ್ಸ್‌ ನಡೆಯುತ್ತಿತ್ತು. ಪದವಿ ನಂತರ ಕಾನೂನು ಪದವಿಗೆ ಪ್ರವೇಶ ನೀಡಲಾಗುತ್ತಿತ್ತು. ಪ್ರಸಕ್ತ ಸಾಲಿನಿಂದ
ಐದು ವರ್ಷಗಳ ಈ ಕೋರ್ಸ್ ಆರಂಭಕ್ಕೆ ಅನುಮತಿ ದೊರೆತಿದ್ದು 60 ಜನ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಬಹುದಾಗಿದೆ. ಪಿಯುಸಿ ಅಥವಾ 10-2 ಅಬ್ಯಾಸ ಮಾಡಿದವರು ಪ್ರವೇಶ ಪಡೆಯಬಹುದಾಗಿದೆ.
ಕಲ್ಯಾಣ ಕರ್ನಾಟಕ ಭಾಗದ, ರಾಯ ಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಪೈಕಿ ಐದು ವರ್ಷಗಳ ಕಾನೂನು ಪದವಿ ಕೋರ್ಸನ್ನು ಹೊಂದಿರುವ ಏಕೈಕ ಕಾಲೇಜು ಇದಾಗಿದೆ.
ಹೆಚ್ಚಿನ ಅನುಭವ ಹೊಂದಿರುವ ಉಪನ್ಯಾಸಕರು, ಉತ್ತಮ ಸೌಲಭ್ಯ ಇರುವ ಕಾಲೇಜು ಇದಾಗಿದೆ. ಈ ಅವಕಾಶವನ್ನು ಈ ಭಾಗದ ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳಲು
ನರೇಂದ್ರಬಾಬು(ಮಿಂಚೇರಿ) ಅವರು ಮನವಿ ಮಾಡಿದ್ದಾರೆ.